ಹೆನ್ರಿಕ್ ಶೆಂಕ್ಯೆವಿಚ್
ಜನನ: | |
---|---|
ಜನನ ಸ್ಥಳ: | ವೊಲ ಒಕ್ರೇಯ್ಸ್ಕ, ಕಾಂಗ್ರೆಸ್ ಪೋಲೆಂಡ್ |
ನಿಧನ: | November 15, 1916 ವೆವೆ, ಸ್ವಿಟ್ಜರ್ಲ್ಯಾಂಡ್ | (aged 70)
ವೃತ್ತಿ: | ಕಥೆಗಾರ |
ರಾಷ್ಟ್ರೀಯತೆ: | ಪೋಲ್ಯಾಂಡ್ |
ಬರವಣಿಗೆಯ ಕಾಲ: | ೧೯ನೇ-೨೦ನೇ ಶತಮಾನಗಳು |
ಪ್ರಶಸ್ತಿಗಳು: | Nobel Prize in Literature (1905) |
ಹೆನ್ರಿಕ್ ಆಡಮ್ ಅಲೆಕ್ಸಾಂಡರ್ ಪಯಸ್ ಶೆಂಕ್ಯೆವಿಚ್, Henryk Adam Aleksander Pius Sienkiewicz (ಮೇ ೫, ೧೮೪೬–ನವೆಂಬರ್ ೧೫, ೧೯೧೬) ಪೋಲೆಂಡ್ ದೇಶದ ಕಾದಂಬರಿಕಾರ, ಪತ್ರಕರ್ತ, ಲೇಖಕ. ರಷ್ಯಾದ ಆಳ್ವಿಕೆಯಲ್ಲಿದ್ದ ಪೋಲೆಂಡ್ ದೇಶದ ಬಡ ಕುಟುಂಬವೊಂದರಲ್ಲಿ ಜನಿಸಿದ ಹೆನ್ರಿಕ್ ಶೆನ್ ಕ್ಯೆ ವಿಚ್ ರವರು, ಮುಖ್ಯವಾಗಿ ಇತಿಹಾಸದ ಕಾದಂಬರಿಗಳನ್ನು ಬರೆಯುತ್ತಿದ್ದರು. ಆಗಿನಕಾಲದ ವೃತ್ತಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಅವರ ಕಾದಂಬರಿಗಳು, 'ಚಾರ್ಲ್ಸ್ ಡಿಕನ್ಸ್' ರ ಕಾದಂಬರಿಗಳಂತೆ ಆ ಕಾಲದ ವೃತ್ತ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು, ಜನಪ್ರಿಯತೆಯನ್ನು ಪಡೆದವು. ಅನೇಕ ಮರುಮುದ್ರಣಗಳನ್ನು ಕಂಡು ಇಂದಿಗೂ ಪ್ರಸಿದ್ಧವಾಗಿ ಉಳಿದಿವೆ. ಹಲವಾರು ಊರುಗಳಿಗೆ ವಲಸೆಹೋಗುವ ಸ್ವಭಾವದವರಾದ ಹೆನ್ರಿಕ್ ಶೆನ್ ಕ್ಯೆ ವಿಚ್ ರವರು ಕೊನೆಗೆ 'ವಾರ್ಸಾ ನಗರ' ದಲ್ಲಿ ನೆಲೆಸಿದರು. ಹೆನ್ರಿಕ್ ಬಡತನದಿಂದಾಗಿ, ಪ್ರೌಢಶಾಲೆಯ ಹಂತದಲ್ಲೇ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. ಶ್ರೀಮಂತ ಕುಟುಂಬವೊಂದರ ಖಾಸಗೀ ಉಪಾಧ್ಯಾಯನಾಗಿ ಉದ್ಯೋಗವನ್ನು ಪ್ರಾರಂಭಿಸಿದರು. ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, ಉನ್ನತ ವಿದ್ಯಾಭ್ಯಾಸವನ್ನು ಮಾಡಿ, 'ವೈದ್ಯಕೀಯ' ಹಾಗೂ 'ಕಾನೂನು ಶಾಸ್ತ್ರ' ಗಳ ತರಗತಿಗೆ ಸೇರಿ,ಕೊನೆಗೆ 'ಭಾಷಾಶಾಸ್ತ್ರ' ದಲ್ಲಿ ಪದವಿಗಳಿಸಿದರು. ಆಗ ಅವರಿಗೆ 'ಸಾಹಿತ್ಯ' ಮತ್ತು 'ಹಳೆಯ ಸ್ಪಾನಿಷ್ ಭಾಷೆ' ಯ ಪರಿಚಯವಾಯಿತು. ನಂತರ ಹಲವಾರು ಕಾದಂಬರಿಗಳನ್ನು ಬರೆದರು. ವೃತ್ತ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದು ಜನಪ್ರಿಯರಾದರು. ಸ್ವಲ್ಪ ಕಾಲ ಅಮೆರಿಕಕ್ಕೆ ಭೇಟಿನೀಡಿದ ಹೆನ್ರಿಕ್ ಶೆನ್ ಕ್ಯೆ ವಿಚ್ ರವರು, ತಾಯ್ನಾಡಿಗೆ ಮರಳಿದಾಗ ತಾರೆಯಷ್ಟು ಜನಪ್ರಿಯತೆಯನ್ನು ಹಾಸಲುಮಾಡಿದ್ದರು. ಆಕರ್ಷಕ ವ್ಯಕ್ತಿತ್ವದ ಹೆನ್ರಿಕ್ ಶೆನ್ ಕ್ಯೆ ವಿಚ್ ರ ಸುತ್ತಮುತ್ತ ಸ್ತ್ರೀಯರ ದಂಡೇ ನೆರೆದಿರುತ್ತಿತ್ತಂತೆ. ಹೆನ್ರಿಕ್ ಶೆನ್ ಕ್ಯೆ ವಿಚ್ ರವರ ಕಾದಂಬರಿಗಳ ಪೈಕಿ, ೨ ತ್ರಿವಳಿಗಳು (ಒಂದರ ಮುಂದುವರಿಕೆಯಂತೆ ಇನ್ನೊಂದಿರುವ ೩ ಕಾದಂಬರಿಗಳ ಸರಣಿ) ಪ್ರಸಿದ್ಧವಾಗಿವೆ. ಅವು :
- ವಿತ್ ಫೈರ್ ಅಂಡ್ ಸ್ವೋರ್ಡ್
- ದ ಡೆಲ್ಯೂಜ್
- ಫೈರ್ ಇನ್ ದ ಸ್ಟೆಪಿ [ತ್ರಿವಳಿ]
- ದ ಓಲ್ಡ್ ಸರ್ವೆಂಟ್
- ಹಾನಿಯಾ
- ಸಲೀಮ್ ಮಿರ್ಜಾ [ಕಿರು ತ್ರಿವಳಿ]
ಪ್ರಸಿದ್ಧವೂ ಜನಪ್ರಿಯವೂ ಆಗಿದ್ದ 'ಕ್ವೋ ವಾಡಿಸ್' ಎಂಬ ಕೃತಿ, ಚಲನಚಿತ್ರವಾಗಿ ಹಲವುಬಾರಿ ಕಾಣಿಸಿಕೊಂಡಿದೆ
[ಬದಲಾಯಿಸಿ]ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆದ ಈ ಕಾದಂಬರಿ, ೧೮೯೫ ನಲ್ಲಿ ಪ್ರಕಟವಾಯಿತು. ಇದೊಂದು ಪ್ರೇಮಕಥೆ. 'ಚಕ್ರವರ್ತಿ ನೀರೋ,' ನ ಕಾಲದ 'ರೋಮ್' ನಗರದಲ್ಲಿ ನಡೆಯುವ ಒಂದು ಪ್ರೇಮಕಥೆಯ ಚಿತ್ರಣವಾಗಿದೆ. ಹೆನ್ರಿಕ್ ಶೆನ್ ಕ್ಯೆ ವಿಚ್ ರವರು, ತಮ್ಮ ಐತಿಹಾಸಿಕ ಕಾದಂಬರಿಗಳ ಮೂಲಕ, ಮಾನವ ಸ್ವಭಾವದ ಆಳ-ಹರವುಗಳನ್ನು ಪರಿಶೀಲಿಸಿದರು. ತಮ್ಮ ಕೃತಿಯಲ್ಲಿ ನೈಜತೆಯನ್ನು ತರಲು ಇತಿಹಾಸದ ಆಳವಾದ ಅಭ್ಯಾಸವನ್ನೂ ಸಂಶೋಧನೆಯನ್ನೂ ಮಾಡುತ್ತಿದ್ದರು. ತಮ್ಮ ದೇಶದ ಬಡವಿದ್ಯಾರ್ಥಿಗಳಿಗೆ ಕೈಲಾದ ಸಹಾಯಮಾಡುತ್ತಿದ್ದರು. ಒಂದು ಶಾಲೆಯನ್ನು ತೆರೆದಿದ್ದರು. ಪೋಲೆಂಡ್ ದೇಶದ 'ಕರೆನ್ಸಿ ನೋಟೊಂದರ ಮೇಲೆ' ಹೆನ್ರಿಕ್ ಶೆನ್ ಕ್ಯೆ ವಿಚ್ ರ ಭಾವಚಿತ್ರವಿದೆ. ಇದು ಹೆನ್ರಿಕ್ ಶೆನ್ ಕ್ಯೆ ವಿಚ್ ರ, ಜನಪ್ರಿಯತೆಯನ್ನು ತೋರಿಸುತ್ತದೆ.