ವಿಷಯಕ್ಕೆ ಹೋಗು

ಆದಿನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆದಿನಾಥ ತೀರ್ಥಂಕರ
ಜನನ : ಚೈತ್ರ ಬಹುಳ ನವಮಿ, ಉತ್ತರಾಷಾಢ ನಕ್ಷತ್ರ
ಜನ್ಮ ಸ್ಥಳ : ಅಯೋಧ್ಯಾ
ತಂದೆ: ನಾಭಿರಾಜ
ತಾಯಿ : ಮರುದೇವಿ
ವಂಶ : ಇಕ್ಷ್ವಾಕು ವಂಶ
ದೇಹದ ಬಣ್ಣ : ಸುವರ್ಣ
ಗಣಧರರು: ವೃಷಭ ಸೇನ
ದೇಹದ ಎತ್ತರ: ೫೦೦ ಬಿಲ್ಲುಗಳು
ಯಕ್ಷ: ಗೋಮುಖ
ಯಕ್ಷಿ: ಚಕ್ರೇಶ್ವರಿ
ಲಾಂಚನ:
ವೃಷಭ / ಎತ್ತು
ತಪೋವನ : ಸಿದ್ಧಾರ್ಥಕವನ
ತಪೋವೃಕ್ಷ: ವಟವೃಕ್ಷ
ಮೋಕ್ಷಸ್ಥಾನ : ಕೈಲಾಸಗಿರಿ
ಮೋಕ್ಷ ಪ್ರಾಪ್ತಿ : ಮಾಘ ಶುದ್ದ ಚತುರ್ದಶಿ ಬೆಳಗಿನ ಜಾವ ಉತ್ತರಾಷಾಢ

ಆದಿನಾಥರು ಜೈನ ಧರ್ಮದ ಪ್ರಥಮ ತೀರ್ಥಂಕರರಾಗಿದ್ದಾರೆ.[]ಇವರಿಗೆ ಋಷಭ, ವೃಷಭನಾಥ ಎನ್ನುವ ಹೆಸರುಗಳಿವೆ. ಮರುದೇವಿಯು ಗರ್ಭವನ್ನು ಧರಿಸುವ ಮುನ್ನ ಕನಸಿನಲ್ಲಿ ಋಷಭವು ತನ್ನ ಮುಖವನ್ನು ಪ್ರವೇಶಿಸುವಂತೆ ಕಂಡಳು. ಆದ್ದರಿಂದ ಮುಂದೆ ಹುಟ್ಟಿದ ಮಗುವಿಗೆ ಋಷಭ ಎಂದು ಹೆಸರಿಟ್ಟರು.ಮತ್ತೊಂದು ಅಭಿಪ್ರಾಯದ ಪ್ರಕಾರ ವೃಷ ಎಂದರೆ ಧರ್ಮ. ಆದಿನಾಥರು ಮುಂದೆ ಧರ್ಮ ಪ್ರಸಾರಕರಾಗುವುರಿಂದ ಮಗುವಿಗೆ ವೃಷಭ ಎಂದು ಹೆಸರಿಟ್ಟರು. ಆದಿನಾಥರ ತಂದೆ ಅಯೋಧ್ಯೆಯ ಅರಸರು;ಹೆಸರು ನಾಭಿರಾಜ.ತಾಯಿಯ ಹೆಸರು ಮರುದೇವಿ.[]

ಹುಟ್ಟು

[ಬದಲಾಯಿಸಿ]

ಅಯೋಧ್ಯೆಯ ಅರಸು ನಾಭಿರಾಜ ಮತ್ತು ಅವನ ಪಟ್ಟದ ರಾಣಿ ಮರುದೇವಿಗೆ ಚೈತ್ರಮಾಸದ ಕೃಷ್ಣ ಪಕ್ಷದ ನವಮಿಯಂದು ಜನಿಸಿದರು. ವೃಷಭನಾಥರು ಜನಿಸಿದ ಘಳಿಗೆಯಲ್ಲಿ ಶುಭಶಕುನಗಳು ಘಟಿಸಿದವು ಎಂದು ನಂಬಲಾಗಿದೆ. ವೃಷಭನಾಥರ ಹುಟ್ಟಿನ ಘಳಿಗೆಯನ್ನು ಜನ್ಮ ಕಲ್ಯಾಣಕ ಎಂದು ಕರೆಯಲಾಗುತ್ತದೆ.[]

ಸಂಸಾರ ಬಾಳುವೆ

[ಬದಲಾಯಿಸಿ]

ವೃಷಭನಾಥ ರಿಗೆ ಇಬ್ಬರು ಹೆಂಡಿರು ಸುನಂದಾ ಮತ್ತು ಸುಮಂಗಲ. ಸುಮಂಗಲಾ ರಿಗೆ ತೊಂಬತ್ತೊಂಬತ್ತು ಮಂದಿ ಮಕ್ಕಳು ಮತ್ತು ಒಬ್ಬ ಮಗಳು ಸುಂದರಿ. ವೃಷಭ ನಾಥರು ಮೊದಲ ಹೆಂಡತಿಯ ಹಿರಿಮಗ ಭರತಚಕ್ರವರ್ತಿಗೆ ಪಟ್ಟ ಕಟ್ಟುತ್ತಾರೆ.

ವೈರಾಗ್ಯ

[ಬದಲಾಯಿಸಿ]

ವೃಷಭನಾಥನ ಆಸ್ಥಾನದಲ್ಲಿ ಇಂದ್ರನು ಸ್ವರ್ಗಲೋಕದ ನರ್ತಕಿಯರ ಸ್ಪರ್ಧೆಯೊಂದನ್ನು ಏರ್ಪಡಿಸುತ್ತಾನೆ. ಅವರಲ್ಲಿ ನೀಲಾಂಜನ ಎಂಬ ನರ್ತಕಿ ನೃತ್ಯ ಆಡುತ್ತಲೇ ತೀರಿಕೊಳ್ಳುತ್ತಾಳೆ. ಈ ಘಟನೆ ವೃಷಭನಾಥ ರಿಗೆ ವೈರಾಗ್ಯವನ್ನು ಉಂಟುಮಾಡುತ್ತದೆ. ಹಿರಿಮಗ ಭರತನಿಗೆ ಅಯೋಧ್ಯೆಯನ್ನು, ಕಿರಿಮಗ ಬಾಹುಬಲಿಗೆ ಪೌದನ ಪುರವನ್ನು ಪಟ್ಟ ಕಟ್ಟಿ ತಪಸ್ಸಿಗೆ ಹೊರಡುತ್ತಾರೆ.[] ೧000 ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿ ಕೈವಲ್ಯ ಜ್ಞಾನವನ್ನು ಪಡೆಯುತ್ತಾರೆ. ವೃಷಭನಾಥರು ತಪಸ್ಸಿನ ನಂತರ ಮೊದಲ ಬಾರಿಗೆ ಇಕ್ಷು ರಸ ಅಂದರೆ ಕಬ್ಬಿನ ಹಾಲನ್ನು ಅಕ್ಷಯ ತೃತೀಯ ದಿನದಂದು ಸ್ವೀಕರಿಸುತ್ತಾರೆ. ವೃಷಭನಾಥ ಆಹಾರಸೇವನೆಯ ದಿನವನ್ನು ಜೈನರು ಅತ್ಯಂತ ಪವಿತ್ರ ದಿನವಾಗಿ ಆಚರಿಸುತ್ತಾರೆ. ಕೃಷ್ಣ ಪಕ್ಷದ ಏಕಾದಶಿಯಂದು ಕೈಬಲಿ ಜ್ಞಾನವನ್ನು ಪಡೆಯುತ್ತಾರೆ ಈ ದಿನವನ್ನು ಬಹಳ ಪವಿತ್ರವಾಗಿ ಇಂದಿಗೂ ಆಚರಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. https://en.wikipedia.org/wiki/Rishabhanatha#CITEREFvon_Glasenapp1925
  2. https://en.wikipedia.org/wiki/Rishabhanatha#CITEREFJacobi1968
  3. http://www.ibiblio.org/sripedia/ebooks/mw/0200/mw__0259.html
  4. "ಆರ್ಕೈವ್ ನಕಲು". Archived from the original on 2019-04-19. Retrieved 2019-07-06.
"https://kn.wikipedia.org/w/index.php?title=ಆದಿನಾಥ&oldid=1171763" ಇಂದ ಪಡೆಯಲ್ಪಟ್ಟಿದೆ