ಶಾಲಿನಿ ರಘುನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಜಾನಪದ ವಿದ್ವಾಂಸರಾಗಿರುವ ಶಾಲಿನಿ ರಘುನಾಥ ಇವರು ೧೯೫೧ ಫೆಬ್ರುವರಿ ೧೪ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಿಲಾರ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶ್ರೀ.ರಾಮಚಂದ್ರ ಹೆಗಡೆ, ತಾಯಿ ಶ್ರೀಮತಿ.ವೇಣೂಬಾಯಿ. ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭಾಷಾವಿಜ್ಞಾನದಲ್ಲಿ 'ಹವ್ಯಕ ಭಾಷೆಯ ಸಾಮಾಜಿಕ ಅಧ್ಯಯನ' ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರ ಪತಿ ಪತಿ ಪ್ರೊ.ರಘುನಾಥ್ ಭಟ್ ಅವರು ಕರ್ನಾಟಕ ವಿಶ್ವವಿದ್ಯಾಲಯದ 'ಕನ್ನಡ ಸಂಶೋಧನಾ ಸಂಸ್ಥೆ' (ಕೆ.ಆರ್.ಐ) ಯ ನಿರ್ದೇಶಕರಾಗಿದ್ದರು.

ಅತ್ಯುತ್ತಮ ಕ್ರೀಡಾಪಟುವೂ ಆಗಿರುವ ಇವರು ವಿದ್ಯಾರ್ಥಿಯಾಗಿದ್ದಾಗ 'ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ಅಥ್ಲೆಟಿಕ್ ಚಾಂಪಿಯನ್' ಆಗಿ ಹೈಜಂಪ್ ಹಾಗೂ ಹರ್ಡಲ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಸೇವೆ[ಬದಲಾಯಿಸಿ]

  • ಸಿರ್ಸಿಯ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿ ಸೇವೆ-೧೯೭೩-೭೯
  • ಮೈಸೂರು ವಿಶ್ವವಿದ್ಯಾಲಯದ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿ ಸೇವೆ-೧೯೭೯-೮೭
  • ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರವಾಚಕಿಯಾಗಿ, ಪ್ರಾಧ್ಯಾಪಕಿಯಾಗಿ ಸೇವೆ-೧೯೯೯-೨೦೧೩
  • ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ೧೯೯೯ ರಿಂದ ಪ್ರಾಧ್ಯಾಪಕರಾಗಿ ಸೇವೆ.
  • ಜಾನಪದ ಅಧ್ಯಯನ ವಿಭಾಗದ ಅಧ್ಯಕ್ಷರಾಗಿ ಸೇವೆ-೨೦೦೦-೧೩
  • ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ವಸತಿಗೃಹದ ವಾರ್ಡನ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಸಂಶೋಧನಾ ಮಾರ್ಗದರ್ಶನ[ಬದಲಾಯಿಸಿ]

ಕನ್ನಡ, ಜಾನಪದ ಮತ್ತು ಭಾಷಾವಿಜ್ಞಾನದ ಪ್ರಾಧ್ಯಾಕರಾಗಿ ಅಪಾರ ಅನುಭವ ಹೊಂದಿರುವ ಇವರು ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸುಮಾರು ಹದಿನಾಲ್ಕು (೧೪) ಎಂ.ಫಿಲ್ ಹಾಗೂ ಇಪ್ಪತ್ತೆರಡು (೨೨) ಪಿಎಚ್.ಡಿ ಸಂಶೋಧನಾರ್ಥಿಗಳು ಮಹಾಪ್ರಬಂಧಗಳನ್ನು ರಚಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪದವಿ ಪಡೆದಿದ್ದಾರೆ.

ಸಂಶೋಧನಾ ಯೋಜನೆಗಳು[ಬದಲಾಯಿಸಿ]

  • ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಿರುಯೋಜನೆಯಡಿ 'ಉತ್ತರ ಕನ್ನಡ ಜಿಲ್ಲೆಯ ಕರ್ಕಿಮೇಳ'-೧೯೯೮-೯೯
  • ಸಹಭಾಗಿತ್ವ : ಕನ್ನಡ ಅಭಿವೃದ್ಧಿ ಯೋಜನೆಯಡಿ 'ಕನ್ನಡ ಸಂಶೋಧನಾ ಮಹಾಪ್ರಬಂಧಗಳ ಸಮೀಕ್ಷೆ', ಕನ್ನಡ ವಿಭಾಗ, ಕ.ವಿ.ವಿ ಧಾರವಾಡ-೨೦೧೦

ಕೃತಿಗಳು[ಬದಲಾಯಿಸಿ]

  • ಮಹಿಳೆ ಮತ್ತು ಶಿಕ್ಷಣ-(೧೯೭೫).
  • ಉಪ ಭಾಷಾ ಅಧ್ಯಯನ-(೧೯೭೯).
  • ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಹಾಡುಗಳು-(೧೯೭೯)
  • ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ:ಒಂದು ಅಧ್ಯಯನ-(೧೯೮೮)
  • ಸೌರಭ(ಸಂ)-(೧೯೯೨)
  • ಸಮನ್ವಿತ-(೧೯೯೪)
  • ಭಾಷೆ-ಸಾಹಿತ್ಯ-ಸಂಸ್ಕೃತಿ-(೧೯೯೪)
  • ಅಭಿವ್ಯಕ್ತಿ(ಸಂ)-(೧೯೯೫)
  • ನಾಟಕಕಾರ ಸಂಸ-೧೯೯೮)
  • ಬಿತ್ತರ-(೧೯೯೯)
  • ಆಯ್ದ ಗಾದೆಗಳು-(೨೦೦೦)
  • ಪಾರ್ತಿ ಸುಬ್ಬನ ಪಂಚವಟಿ(ಸಂ)-(೨೦೦೦)
  • ಪರಿಸರ ಮತ್ತು ಸಂಸ್ಕೃತಿ(ಸಂ)-(೨೦೦೧)
  • ಹಸುಬೆ-(೨೦೦೩)
  • ಹಸೆ-ಚಿತ್ತಾರ-(೨೦೦೫)
  • ಗಾದೆ-(೨೦೦೫)
  • ಜಾನಪದ ದೀಪಾರಾಧನೆ(ಸಂ)-(೨೦೦೬)
  • ಕನ್ನಡದ ಹಳಮೆ ಮತ್ತು ಇತರ ಸಂಪ್ರಬಂಧಗಳು-(೨೦೦೮)
  • ಮಹಿಳಾ ಜಾನಪದ(ಸಂ)-(೨೦೦೮)
  • ರವಿಮುಖಿ(ಸಂ)-(೨೦೦೯)
  • ಜಾನಪದ ಸಂಶೋಧನೆ(ಪ್ರ.ಸಂ)-(೨೦೦೯)
  • ಜನಪದ ವೈದ್ಯ(ಸಂ)-(೨೦೦೯)
  • ಜನಪದ ಸಾಮಾಜಿಕ ಕಥನ ಗೀತೆಗಳು(ಸಂ)-(೨೦೧೦)
  • ಜನಪದ ಕಲೆಗಳು(ಸಂ)-(೨೦೧೦)
  • ಧಾರವಾಡ ಜಿಲ್ಲೆಯ ಜನಪದ ಕಲಾವಿದರು-(೨೦೧೧)
  • ಶರೀರ ಜಾನಪದ(ಪ್ರ.ಸಂ)-(೨೦೧೩)
  • ಜಾನಪದ ಮತ್ತು ಪ್ರವಾಸೋದ್ಯಮ(ಪ್ರ.ಸಂ)-(೨೦೧೪)
  • ಕಾಲು ಹಾದಿ(ಜಾನಪದ ಸಂಶೋಧನಾ ಪ್ರಬಂಧಗಳು)-(೨೦೧೭)

ಕನ್ನಡ ಸಾಹಿತ್ಯ, ಜಾನಪದ, ಭಾಷಾವಿಜ್ಞಾನ, ಕ್ರೀಡೆ, ಮಹಿಳಾ ಅಧ್ಯಯನ ಇತ್ಯಾದಿ ವಿಷಯಗಳ ಕುರಿತು ೧೦೦ ಕ್ಕೂ ಹೆಚ್ಚು ಲೇಖನಗಳು ಈವರೆಗೆ ಪ್ರಕಟಗೊಂಡಿವೆ.

೨೦೧೩ ರಲ್ಲಿ ಡಾ.ಶಾಲಿನಿ ರಘುನಾಥ್ ಅಭಿನಂದನ ಸಮಿತಿ, ಧಾರವಾಡ ಇವರು 'ದೇಸೀ ಸಂಪದ ಶಾಲಿನಿ' ಎಂಬ ಅಭಿನಂದನ ಗ್ರಂಥವನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿ[ಬದಲಾಯಿಸಿ]

  • ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ 'ಮಹಿಳಾ ವರ್ಷ'ದ ಬಹುಮಾನ-೧೯೭೫
  • ಕರ್ನಾಟಕ ವಿದ್ಯಾವರ್ಧಕ ಸಂಘದ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ' ಬಹುಮಾನ-೧೯೮೮
  • ಪ್ರೊ. ಸ.ಸ.ಮಾಳವಾಡ ಪ್ರಶಸ್ತಿ-೧೯೯೫
  • ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ-೧೯೯೫
  • ಕರ್ನಾಟಕ ಸಾಹಿತ್ಯ ಪರಿಷತ್ತಿನ 'ಲಲಿತಾ ಗುರುಸಿದ್ದಪ್ಪ ಸಿಂಧನೂರು ಪ್ರಶಸ್ತಿ'-೧೯೯೫
  • ಮೈಸೂರು ವಿಶ್ವವಿದ್ಯಾಲಯದ 'ಪ್ರೊ. ತೀ.ನಂ.ಶ್ರೀಕಂಠಯ್ಯ' ಸ್ಮಾರಕ ಬಹುಮಾನ-೧೯೯೫
  • ಶಾಶ್ವತೀ ಸಂಸ್ಥೆಯ 'ಸದೋದಿತ' ಪ್ರಶಸ್ತಿ-೧೯೯೫
  • ಕನ್ನಡ ಸಾಹಿತ್ಯ ಪರಿಷತ್ತಿನ'ಲಕ್ಷ್ಮೀದೇವಿ ಶಾಂತರಸ ಹಂಬೆರಾಳು' ದತ್ತಿ ಪ್ರಶಸ್ತಿ-೨೦೦೯
  • ಸಮಗ್ರ ಸಂಶೋಧನಾ ಕೊಡುಗೆಗಾಗಿ 'ನಾ.ಶ್ರೀ.ರಾಜಪುರೋಹಿತ ಪ್ರಶಸ್ತಿ'-೨೦೧೪
  • ಗದ್ದಗಿಮಠ ಪ್ರಶಸ್ತಿ-೨೦೧೭
  • ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ (ಕಾಲುಹಾದಿ ಕೃತಿಗೆ)-೨೦೧೭
  • ಹೊನ್ನಾವರದ ಜಾನಪದ ಪ್ರತಿಷ್ಠಾನ ನೀಡುವ 'ಶಿವರಾಮ ಕಾರಂತ ದೀಪ ಪ್ರಶಸ್ತಿ-೨೦೨೦

ಸನ್ಮಾನ[ಬದಲಾಯಿಸಿ]