ಶಾಲಿನಿ ರಘುನಾಥ

ವಿಕಿಪೀಡಿಯ ಇಂದ
Jump to navigation Jump to search

ಶಾಲಿನಿ ರಘುನಾಥ ಇವರು ೧೯೫೧ ಫೆಬ್ರುವರಿ ೧೪ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಿಲಾರ ಗ್ರಾಮದಲ್ಲಿ ಜನಿಸಿದರು. ಜಾನಪದ ವಿಭಾಗದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಇವರು ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು[ಬದಲಾಯಿಸಿ]

 • ಮಹಿಳೆ ಮತ್ತು ಶಿಕ್ಷಣ
 • ಉಪಭಾಷಾ ಅಧ್ಯಯನ
 • ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಹಾಡುಗಳು
 • ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ:ಒಂದು ಅಧ್ಯಯನ
 • ಸೌರಭ
 • ಸಮನ್ವಿತ
 • ಭಾಷೆ-ಸಾಹಿತ್ಯ-ಸಂಸ್ಕೃತಿ
 • ಅಭಿವ್ಯಕ್ತಿ
 • ನಾಟಕಕಾರ ಸಂಸ
 • ಬಿತ್ತರ
 • ಆಯ್ದ ಗಾದೆಗಳು
 • ಪಾರ್ತಿ ಸುಬ್ಬನ ಪಂಚವಟಿ
 • ಹಸುಬೆ

ಪ್ರಶಸ್ತಿ[ಬದಲಾಯಿಸಿ]

 • ಪ್ರೊ. ಸ.ಸ.ಮಾಳವಾಡ ಪ್ರಶಸ್ತಿ
 • ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ
 • ಕರ್ನಾಟಕ ಸಾಹಿತ್ಯ ಪರಿಷತ್ತಿನ ಲಲಿತಾ ಗುರುಸಿದ್ದಪ್ಪ ಸಿಂಧನೂರು ಪ್ರಶಸ್ತಿ
 • ಮೈಸೂರು ವಿಶ್ವವಿದ್ಯಾಲಯದ ಪ್ರೊ. ತೀ.ನಂ.ಶ್ರೀಕಂಠಯ್ಯ ಸ್ಮಾರಕ ಬಹುಮಾನ
 • ಶಾಶ್ವತೀ ಸಂಸ್ಥೆಯ ಸಮೋದಿತಾ ಪ್ರಶಸ್ತಿ
 • ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ ಮಹಿಳಾ ವರ್ಷದ ಬಹುಮಾನ