ಆದಿಕಾಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆದಿಕಾಂಡ ಎಂಬುದು ಬೈಬಲ್ನಲ್ಲಿನ ಹಳೆ ಒಡಂಬಡಿಕೆ ಎಂಬ ಭಾಗದ ಪ್ರಥಮ ಪುಸ್ತಕವಾಗಿದೆ. ಯೆಹೂದ್ಯರ ಪದ್ಧತಿಯ ಪ್ರಕಾರ ಬೈಬಲ್‌ನ ಮೊದಲಿನ ಐದು ಪುಸ್ತಕಗಳನ್ನು ಮೋಸೆಸ್(ಮೋಶೆ) ಬರೆದದ್ದು ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದ ಆದಿಕಾಂಡವನ್ನು ಕೆಲವೊಮ್ಮೆ ಮೋಸೆಸ್‌ನ ಪ್ರಥಮ ಪುಸ್ತಕವೆಂದು ಸಹ ಕರೆಯಲಾಗುತ್ತದೆ. ಆದಿಕಾಂಡವು ಜಗತ್ತಿನ ಸೃಷ್ಟಿಯಿಂದ ಹಿಡಿದು ಇಸ್ರಾಯೇಲ್ಯರು ಪುರಾತನ ಈಜಿಪ್ಟ್ ದೇಶವನ್ನು ಸೇರಿದ ಚರಿತ್ರೆಯನ್ನು ಹೇಳುತ್ತದೆ. ಈ ವಿಷಯಗಳಲ್ಲಿ ಆದಾಮ ಮತ್ತು ಹವ್ವಳು, ಕಾಯಿನ ಮತ್ತು ಹೆಬೇಲ, ನೋಹನ ನಾವೆ, ಬಾಬೆಲ್ ಗೋಪುರ, ಅಬ್ರಹಾಮ, ಇಸಾಕ, ಯಾಕೋಬ ಮತ್ತು ಜೋಸೆಫ್ ಇವರ ಚರಿತ್ರೆಗಳು ಸೇರಿವೆ. ಇದಲ್ಲದೆ ಪುರಾತನ ಇಸ್ರಾಯೇಲ್ಯರ ಧಾರ್ಮಿಕ ಚರಿತ್ರೆಯ ಬಗೆಗಿನ ಪ್ರಮುಖವಾದ ವಿಷಯಗಳು ಇದರಲ್ಲಿ ಅಡಕವಾಗಿವೆ. ಅವುಗಳಲ್ಲಿ ದೇವರ ಮತ್ತು ದೇವರಿಂದ ಆರಿಸಲ್ಪಟ್ಟ ಜನಾಂಗಗಳ ನಡುವಿನ ಒಡಂಬಡಿಕೆ ಮತ್ತು ತನ್ನ ಜನರನ್ನು ವಾಗ್ದಾನ ಮಾಡಿದ ದೇಶಕ್ಕೆ ಕರೆದೊಯ್ಯುವ ದೇವರ ಒಡಂಬಡಿಕೆಯು ಪ್ರಮುಖವಾದುದು.

ಶೀರ್ಷಿಕೆ[ಬದಲಾಯಿಸಿ]

"ಆದಿಕಾಂಡ" Genesis ಎಂಬ ಪದವು ಗ್ರೀಕ್ ಭಾಷೆಯಿಂದ ಉದ್ಭವಿಸಿದೆ. ಗ್ರೀಕ್ ಭಾಷೆಯ ಪದವು "ಜನನ", "ಸೃಷ್ಟಿ", "ಮೂಲ", "ಆದಿ" ಮುಂತಾದ ಅರ್ಥಗಳನ್ನು ಹೊಂದಿದೆ. ಹಿಬ್ರೂ ಭಾಷೆಯಲ್ಲಿ 'ಬರೆಶಿತ್' ಅಂದರೆ "ಆದಿಯಲ್ಲಿ" ಎಂಬುದಾಗಿ ಅರ್ಥವಿದೆ.

ಚರಿತ್ರೆ[ಬದಲಾಯಿಸಿ]

"ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದನು. ಭೂಮಿಯು ಕ್ರಮವಿಲ್ಲದೆಯೂ, ಬರಿದಾಗಿಯೂ ಇತ್ತು ಮತ್ತು ಲೋಕದಲ್ಲಿ ಕತ್ತಲಿತ್ತು. ಇದಲ್ಲದೆ ದೇವರಾತ್ಮನು ಆದಿಸಾಗರದ ಮೇಲೆ ಚಲಿಸುತ್ತಿದ್ದನು." ದೇವರು ಮೊದಲನೆಯ ದಿನದಂದು ಬೆಳಕನ್ನು ಉಂಟುಮಾಡಿದನು.

ಉಲ್ಲೇಖ[ಬದಲಾಯಿಸಿ]

| ಸೃಷ್ಟಿ ಮತ್ತು ಬೈಬಲ್

"https://kn.wikipedia.org/w/index.php?title=ಆದಿಕಾಂಡ&oldid=1198582" ಇಂದ ಪಡೆಯಲ್ಪಟ್ಟಿದೆ