ಸದಸ್ಯರ ಚರ್ಚೆಪುಟ:Vedaprakasha
ಸುಸ್ವಾಗತ!!
[ಬದಲಾಯಿಸಿ]ನಮಸ್ಕಾರ Vedaprakasha,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನು ಉಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.
ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೧೮:೨೩, ೨೭ April ೨೦೦೭ (UTC)
UAV Articles
[ಬದಲಾಯಿಸಿ]Hello, just wanted to say that you have done an awesome work with UAV related articles. Many good pictures and information.
I added a couple of links to your UAV Systems page to link it to the main UAV page. I hope this is okay.
Dronemvp ೦೩:೪೯, ೧೦ ಫೆಬ್ರುವರಿ ೨೦೦೮ (UTC)
ಧನ್ಯವಾದಗಳು
[ಬದಲಾಯಿಸಿ]ತಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು. ಪ್ರವೃತ್ತಿಯಲ್ಲಿ ನಾನು ವಿಜ್ಞಾನಿಯಾಗಿದ್ದರೂ, ನನ್ನ ವಿಜ್ಞಾನದ ಅಭ್ಯಾಸವನ್ನೆಲ್ಲಾ ಆಂಗ್ಲ ಭಾಷೆಯಲ್ಲಿಯೇ ಮಾಡಿದ್ದರಿಂದ ನನಗೆ ಕನ್ನಡದಲ್ಲಿ ವಿಜ್ಞಾನದ ಬಗ್ಗೆ ಬರೆಯಲು ಬರೆಯುವುದಿಲ್ಲ. ಹಾಗಾಗಿ ತಮ್ಮ ಉತ್ತಮ ವೈಜ್ಞಾನಿಕ ಲೇಖನಗಳನ್ನು ಓದುವುದು ಬಹಳ ಹರ್ಷದಾಯಕವಾಗಿದೆ. ನಾನು ನನ್ನ ಕೈಲಾದಷ್ಟು ಮಟ್ಟಕ್ಕೆ ಇಂತವುಗಳಲ್ಲಿ ಭಾಗವಹಿಸುತ್ತಿರುವೆ. ಪ್ರಸಕ್ತವಾಗಿ ಸದಸ್ಯ:VASANTH S.N. ಅವರು ಮೂಲಧಾತುಗಳ ಬಗ್ಗೆ ರಚಿಸುತ್ತಿರುವ ಲೇಖನಗಳ ವರ್ಗೀಕರಣ, ಟೆಂಪ್ಲೇಟ್ ಅಳವಡನೆ ಇತ್ಯಾದಿಗಳಲ್ಲಿ ಸಹಾಯ ಮಾಡುತ್ತಿರುವೆ. ತಮಗೆ ಈ ರೀತಿಯ ಸಹಾಯವೇನಾದರೂ ಬೇಕಿದ್ದರೆ ಅದನ್ನು ಮಾಡಲು ಉತ್ಸುಕನಾಗಿರುವೆ. ಮತ್ತೆ ಧನ್ಯವಾದಗಳು. ತಮ್ಮ, ಶುಶ್ರುತ \ಮಾತು \ಕತೆ ೦೨:೩೭, ೨೫ ಮಾರ್ಚ್ ೨೦೦೮ (UTC)
Re: ಕನ್ನಡ ಪದಗಳ ಕೊರತೆ
[ಬದಲಾಯಿಸಿ]ವೇದಪ್ರಕಾಶ ಅವರೆ, ಅರಳಿಕಟ್ಟೆಯಲ್ಲಿ ಕನ್ನಡ ಪದಗಳ ಬಗೆಗಿನ ನಿಮ್ಮ ಸಂದೇಶವನ್ನು ಇಂದೇ ನೋಡಿದೆ. ನಾನೂ ಮುಖ್ಯವಾಗಿ ವೈಜ್ಞಾನಿಕ/ತಾಂತ್ರಿಕ ಲೇಖನಗಳನ್ನೇ ಸಂಪಾದಿಸುವುದರಿಂದ, ನನಗೂ ಇದೇ ಥರದ ಸಮಸ್ಯೆ ಉಂಟಾಗುತ್ತದೆ.
ನಾನು ಖಂಡಿತ ಪದಗಳ ತಜ್ಞನಲ್ಲ. ಕಳೆದ ಬಾರಿ ಬೆಂಗಳೂರಿನಲ್ಲಿದ್ದಾಗ ನಾನು ನವಕರ್ನಾಟಕ ಪ್ರಕಾಶನದ "ವಿಜ್ಞಾನ ಪದವಿವರಣ ಕೋಶ"ವನ್ನು ಖರೀದಿಸಿದ್ದೆ. ಇದು ಸುಮಾರು ೫೦೦.ರೂ. ಗಳಷ್ಟು ಬೆಲೆಯಲ್ಲಿದ್ದು, ನನಗೆ ಇದರಿಂದ ಸಾಕಷ್ಟು ಸಹಾಯವುಂಟಾಗಿದೆ. ಇದರಲ್ಲಿ ಕನ್ನಡ-ಆಂಗ್ಲ ಮತ್ತು ಆಂಗ್ಲ-ಕನ್ನಡ ಎರಡೂ ಅನುವಾದಗಳು ಸಿಗುತ್ತವೆ.
ಯಾವುದೇ ಕಾರಣದಿಂದ ಈ ಪುಸ್ತಕವು ನಿಮಗೆ ಲಭ್ಯವಿಲ್ಲದಿದ್ದಲ್ಲಿ, ನಾನು ನಿಮಗೆ ಸಹಾಯ ಮಾಡಬಲ್ಲೆ. ಒಮ್ಮೆ ನೀವು ಕೆಲವು ಅನುವಾದಿಸಲು ಬೇಕಾಗಿರುವ ಪದಗಳನ್ನು ಸಂಗ್ರಹಿಸಿದೊಡನೆ ನನಗೆ ವಿಕಿಪೀಡಿಯದಿಂದ ದಯವಿಟ್ಟು ಸಂದೇಶ ಕಳುಹಿಸಿ. ನನಗೆ ಅದು ಕಂಡೊಡನೆಯೆ ನನ್ನ ಕೈಲಾದಷ್ಟು ಅನುವಾದಿತ ಪದಗಳನ್ನು ನಿಮಗೆ ತಿಳಿಸುವೆನು.
ನೀವು ವಿಕಿಪೀಡಿಯದಲ್ಲಿ ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿರುವಿರಿ. ಇದಕ್ಕೆ ನನ್ನಿಂದೇನಾದರೂ ಸಹಾಯವಾಗುವುದಾದರೆ ನಾನು ಸಂತೋಷದಿಂದ ಸಹಾಯ ಮಾಡುತ್ತೇನೆ.
- oscillator - ಆಂದೋಲಕ
- reference point - ನಿರ್ದೇಶಕ ಬಿಂದು
- modulation - ಮಾಡ್ಯುಲನ
- receiver - ಅಭಿಗ್ರಾಹಕ
ನಮಸ್ಕಾರ.
Dronemvp ೨೧:೩೫, ೨೮ ಏಪ್ರಿಲ್ ೨೦೦೮ (UTC)