ವಿಷಯಕ್ಕೆ ಹೋಗು

ಹೂವಿನಹಡಗಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೂವಿನ ಹಡಗಲಿ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಬಳ್ಳಾರಿ ಇಂದ ಸುಮಾರು ೧೩೫ ಕಿ.ಮೀ. ದೂರದಲ್ಲಿದೆ. ಈ ಊರು ಮಲ್ಲಿಗೆ ಹೂವಿಗೆ ಪ್ರಸಿದ್ಧ.

ಈಗ ಇದು ವಿಜಯನಗರ ಜಿಲ್ಲೆಗೆ ಸೇರಿದೆ (೨೦೨೦).

ಈ ಊರಿನ ಹೆಸರಿನ ಮೂಲದ ಬಗೆಗೆ ಹಲವು ಕಥೆಗಳಿವೆ.

  • ಹಿಂದೆ ವಿಜಯನಗರ ರಾಜರ ಕಾಲದಲ್ಲಿ ಮಲ್ಲಿಗೆ ಹೂವುಗಳನ್ನು ದೋಣಿಯಲ್ಲಿ ತುಂಬಿ ವಿಜಯನಗರದ ಶ್ರೀ ವಿರುಪಾಕ್ಷ ದೇವರ ಪೂಜೆಗೆ ಪ್ರತಿನಿತ್ಯ ಈ ಊರಿನಿಂದ ತುಂಗಭದ್ರಾ ನದಿ ಮೂಲಕ ಕಳಿಸಿಕೊಡಲಾಗುತಿತ್ತು. ಈ "ಹೂವಿನ ಹಡಗು" ಇಂದ "ಹೂವಿನ ಹಡಗಲಿ" ಎಂಬ ಹೆಸರು ಬಂತು ಎನ್ನುವ ಮಾತು ಇದೆ.
  • ಈ ಊರಿಗೆ ಹೂವಿನ ಹಡಗಲಿ ಎಂದು ಹೆಸರು ಬರಲು ಈ ಊರಿನಿಂದ ಹಂಪೆಗೆ ಹೂ ಕಾರಣ ಅಲ್ಲ. ಹಂಪಿ ವಿಜಯನಗರ ನಗರ ಸಾಮ್ರಾಜ್ಯ ಸ್ಥಾಪನೆಯಾದ ಸುಮಾರು ೩೦೦ ವರ್ಷಗಳ ಮೊದಲೇ ಈ ಊರಿಗೆ ಹೂವಿನ ಹಡಗಲಿ (ಪೂವಿನ ಪಡಂಗಿಲೆ) ಎಂದು ಕಲ್ಯಾಣಿ ಚಾಲುಕ್ಯ ದೊರೆ ಆರನೆ ವಿಕ್ರಮಾದಿತ್ಯನ ಕಾಲದ ಚನ್ನಕೇಶವ ದೇವಸ್ಥಾನದ ಕುರಿತು ದಾಖಲಾಗಿದೆ. ಬಹಳಷ್ಟು ಪುರಾತನ ದೇವಾಲಯಗಳು ತಾಲೂಕೊನ ವಿವಿಧ ಕಡೆ ಇರುತ್ತವೆ. ಅವುಗಳನ್ನು ಮುಖ್ಯವಾಹಿನಿಗೆ ಸಂಭಂದಿಸಿದವರು ಮತ್ತು ಇತಿಹಾಸ ತಜ್ಞರು, ಸಾಹಿತಿಗಳು ಇದರ ಕಡೆ ಗಮನ ಹರಿಸಲು ವಿನಂತಿ.


ಹೂವಿನ ಹಡಗಲಿ ತಾಲೂಕಿನಲ್ಲಿ ಹಿರೇಹಡಗಲಿ ಎಂಬ ಗ್ರಾಮದಲ್ಲಿ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಜಕ್ಕಣಚಾರಿ ಕೆತ್ತಿದನೆಂದು ಹೇಳುತ್ತಾರೆ. ಈ ದೇವಸ್ಥಾನದಲ್ಲಿ ಶಾತವಾಹನರ ಮೂಲ ಯಾವುದೆಂದು ತಿಳಿಸುತ್ತದೆ. ಶಾತವಾಹನರ ಮೂಲ ಕನ್ನಡ ಎಂಬುದನ್ನು ಇದು ತಿಳಿಸುತ್ತದೆ.

ಹೂವಿನಹಡಗಲಿ ಪ್ರಾಚ್ಯವಸ್ತು ಸಂಗ್ರಹಾಲಯದ ಕುರಿತು

[ಬದಲಾಯಿಸಿ]

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಪ್ರಾಚ್ಯವಸ್ತು ಸಂಗ್ರಹಾಲಯವನ್ನು ದಿನಾಂಕ: ೧೧-೦೭-೧೯೯೯ರಂದು ಅಂದಿನ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಉದ್ಘಾಟಿಸಿದರು. ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲೂಕುಗಳಲ್ಲಿ ದೊರೆತ ಪ್ರಾಚ್ಯವಸ್ತುಗಳನ್ನು ಸಂರಕ್ಷಿಸಿ ಇಲ್ಲಿ ಪ್ರದರ್ಶಿಸಲಾಗಿದೆ.

ಹೂವಿನಹಡಗಲಿ ವಸ್ತುಸಂಗ್ರಹಾಲಯದಲ್ಲಿರುವ ವಿಭಾಗಗಳು

[ಬದಲಾಯಿಸಿ]
  • ಒಂದನೇ ಮೂರ್ತಿ ಶಿಲ್ಪಗಳ ಗ್ಯಾಲರಿ

ಒಂದನೇ ಮೂರ್ತಿ ಶಿಲ್ಪಗಳ ಗ್ಯಾಲರಿಯಲ್ಲಿ ಚಾಲುಕ್ಯ, ಹೊಯ್ಸಳ ಹಾಗೂ ವಿಜಯನಗರ ಕಾಲದ ನಾಗಶಿಲ್ಪ, ಭೈರವಿ, ಕೃಷ್ಣ ಮತ್ತು ಗೋಪಿಕಾಸ್ತ್ರೀ, ಶಿವ, ಪಂಚಲಿಂಗ, ಲಕ್ಷ್ಮಿನರಸಿಂಹ, ಕಾಳಿ, ರಾಮ, ದಕ್ಷಬ್ರಹ್ಮ, ಆಂಜನೇಯ, ರಾಜದಂಪತಿ ಇನ್ನು ಮುಂತಾದ ಮೂರ್ತಿ ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ.

  • ಎರಡನೇ ಮೂರ್ತಿ ಶಿಲ್ಪಗಳ ಗ್ಯಾಲರಿ

ಎರಡನೇ ಮೂರ್ತಿ ಶಿಲ್ಪಗಳ ಗ್ಯಾಲರಿಯಲ್ಲಿ ಮೈಲಾರ ಗ್ರಾಮದ ಪ್ರದೇಶದಲ್ಲಿ ಸಂಗ್ರಹಿಸಿದ ವೀರಗಲ್ಲು, ಗಜಲಕ್ಷ್ಮಿ, ನಂದಿ, ಮೈಲಾರಲಿಂಗ, ಉಗ್ರ ನರಸಿಂಹ, ಗರುಡಪೀಠ, ವಿಷ್ಣು, ಗಣೇಶ ಇನ್ನು ಮುಂತಾದ ಮೂರ್ತಿ ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ.

  • ಹೊರಭಾಗದ ಗಾರ್ಡ್‍ನಲ್ಲಿ ಪ್ರದರ್ಶಿಸಿರುವ ಶಿಲ್ಪಗಳು

ಚಾಲುಕ್ಯ, ಹೊಯ್ಸಳ, ವಿಜಯನಗರ ಕಾಲದ ಕನ್ನಡ ಶಿಲಾಶಾಸನಗಳು, ನಂದಿ, ನಾಗಶಿಲ್ಪ, ರಾಮ, ಲಕ್ಷ್ಮಣ ಗಣೇಶ, ವೀರಗಲ್ಲು, ತೀರ್ಥಂಕರ ಮೂರ್ತಿ ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ.[]

ತಾಲೂಕಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]
  • ಕಲ್ಲೇಶ್ವರ ದೇವಸ್ಥಾನ
  • ಚನ್ನಕೇಶವ ದೇವಸ್ಥಾನ
  • ಗ್ರಾಮದೇವತೆ ದೇವಸ್ಥಾನ
  • ಕೋಟೆ ಆಂಜನೇಯ ದೇವಸ್ಥಾನ
  • ಪಾತಾಳ ಲಿಂಗೇಶ್ವರ ದೇವಸ್ಥಾನ
  • ಸೂರ್ಯನಾರಾಯಣ ದೇವಸ್ಥಾನ
  • ಶ್ರೀ ಗೋಣಿಬಸವೇಶ್ವರ ದೇವಸ್ಥಾನ
  • ಶಾಖಾ ಗವಿಮಠ, ಗವಿಸಿದ್ದೇಶ್ವರ ದೇವಸ್ಥಾನ
  • ಮುದೇನೂರು ಕೆರೆ
  • ಹಗರನೂರು ಕೆರೆ
  • ಹಿರೆಹಡಗಲಿ ಕೆರೆ ಮತ್ತು ಕಲ್ಲೇಶ್ವರ ದೇವಸ್ಥಾನ
  • ಮಾಗಳದ ಸೂರ್ಯನಾರಾಯಣ ದೇವಸ್ಥಾನ
  • ಮಾಗಳ, ರಂಗಾಪುರದ ಉಗ್ರನರಸಿಂಹ ದೇವಸ್ಥಾನ
  • ಮದಲಘಟ್ಟ ಆಂಜನೇಯಸ್ವಾಮಿ
  • ಬೆಟ್ಟದ ಮಲ್ಲೇಶ್ವರ ದೇವಸ್ಥಾನ,ಸೋಗಿ
  • ನಡುವಿನಹಳ್ಳಿ ಆಂಜೆನೇಯ ದೇವಸ್ಥಾನ

ತಾಲೂಕಿನ ಪ್ರಮುಖ ಹಳ್ಳಿಗಳು

[ಬದಲಾಯಿಸಿ]

ಹನಕನಹಳ್ಳಿ, ದೇವಗೊಂಡನಹಳ್ಳಿ, ಹುಗಲೂರು, ನಂದಿಹಳ್ಳಿ, ನಾಗತಿಬಸಾಪುರ, ಕೊಮಾರನಹಳ್ಳಿ ತಾಂಡ, ನಡುವಿನಹಳ್ಳಿ ಮಾನ್ಯರ ಮಸಲವಾಡ, ಹ್ಯಾರಡ, ಗಿರಿಯಾಪುರ ಮಠ, ಬೂದನೂರು, ಹೊಳಲು, ತಿಪ್ಪಾಪುರ, ಉಪನಾಯಕನಹಳ್ಳಿ, ಶಿವಪುರ, ಶಿವಪುರ ತಾಂಡ, ಅಲ್ಲಿಪುರ, ಕರಡಿ ಅಯ್ಯನಹಳ್ಳಿ, ರಾಜವಾಳ, ಹೊಸಹಳ್ಳಿ, ಅಂಗೂರು, ಕೋಟಿಹಾಳ, ಮೈಲಾರ, ಕುರುವತ್ತಿ, ಲಿಂಗನಾಯಕನಹಳ್ಳಿ, ಹೊನ್ನಾಯಕನಹಳ್ಳಿ, ಕಾಗನೂರು, ಕೊಂಬಳಿ, ನವಲಿ, ಹೊಸ ಹೊನ್ನೂರು, ಮಾಗಳ, ಹಿರೇಹಡಗಲಿ, ಇಟ್ಟಗಿ, ಮುದೇನೂರು, ಸೋಗಿ, ವರಕನಹಳ್ಳಿ, ಅಡವಿಮಲ್ಲನಕೆರೆ, ಅಡವಿಮಲ್ಲನಕೆರೆ ತಾಂಡ, ಹಿರೇಮಲ್ಲನಕೇರಿ,ಹಕ್ಕಂಡಿ, ಮುದ್ಲಾಪುರ ತಾಂಡ, ಗೊವಿಂದಪುರ ತಾಂಡ, ಮದಲಗಟ್ಟಿ (ಮೊದಲಘಟ್ಟ), ಹೊಳಗುಂದಿ, ಬಾವಿಹಳ್ಳಿ, ಉತ್ತಂಗಿ, ಇಟ್ಟಿಗಿ ಇತ್ಯಾದಿ.

ಉಲ್ಲೇಖಗಳು

[ಬದಲಾಯಿಸಿ]
  1. https://archaeology.karnataka.gov.in/page/Government+Museums/Government+Museum+Huvinahadagali/kn