ಹೊಸಹೊಳಲು
ಗೋಚರ
ಹೊಸಹೊಳಲು ಮಂಡ್ಯ ಜಿಲ್ಲೆಯ, ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಇಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜನಾದ ವೀರ ಬಲ್ಲಾಳ ಕಟ್ಟಿಸಿದ ಹೊಯ್ಸಳ ಶೈಲಿಯ ತ್ರಿಕೂಟಾಚಲ ಮಾದರಿಯ ಲಕ್ಷ್ಮಿನಾರಾಯಣ ದೇವಾಲಯವಿದೆ. ದೇವಾಲಯದಲ್ಲಿ ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣರ ಗುಡಿಗಳೂ ಇವೆ. ಈ ದೇವಾಲಯವನ್ನು ೧೩ನೆಯ ಶತಮಾನದಲ್ಲಿ ಕಟ್ಟಲಾಗಿದೆ. ಅನುಪಮ ಕೆತ್ತನೆಯಿಂದ ನೋಡುಗರ ಗಮನ ಸೆಳೆಯುತ್ತದೆ. ಬೇಲೂರು ಗುಡಿ ಒಳಗೆ ನೋಡು, ಹಳೇಬೀಡು ಗುಡಿ ಹೊರಗೆ ನೋಡು. ಆದರೆ ಹೊಸಹೊಳಲನ್ನು ಒಳಗೂ, ಹೊರಗೂ ನೋಡು ಎಂಬ ಮಾತಿದೆ. ಹೆಬ್ಬೆರಳಿನ ಗಾತ್ರದ ಕೋತಿ ಎಳನೀರು ಕುಡಿಯುತ್ತಿರುವ ಕೆತ್ತನೆ ಶಿಲ್ಪಿಗಳ ಕೈಚಳಕಕ್ಕೆ ಸಾಕ್ಷಿಯಾಗಿದೆ. ಹೊಸಹೊಳಲು ಹಾಸನದಿಂದ ೬೦ ಕಿ.ಮಿ ದೂರದಲ್ಲಿದ್ದು, ಮೈಸೂರಿನಿಂದ ೫೩ ಕಿ.ಮಿ ದೂರದಲ್ಲಿದೆ. ತಾಲ್ಲೂಕು ಕೇಂದ್ರದಿಂದ ೨ ಕಿ.ಮಿ ದೂರದಲ್ಲಿದೆ.
ಪ್ರಮುಖ ದೇವಾಲಯಗಳು
[ಬದಲಾಯಿಸಿ]- ಸೋಮನಾಥ
- ಕೋಟೆಭೈರವೇಶ್ವರ
- ಆಂಜನೇಯ