ವರ್ಗ ಚರ್ಚೆಪುಟ:ನಿರ್ದೇಶಕರು
ನಿರ್ದೇಶಕರು ವರ್ಗದಲ್ಲಿ ಭಾರತದ ಕನ್ನಡೇತರ ಭಾಷೆಗಳ ಚಿತ್ರಗಳನ್ನು ನಿರ್ದೇಶಿಸಿದವರ ಪುಟಗಳ ಸಂಪರ್ಕವಿದೆ, ಹಾಗೆಯೇ ಅಮೆರಿಕ, ಜಪಾನ್ ಗಳ ನಿರ್ದೇಶಕರೂ ಸಹ ಇದ್ದಾರೆ. ಈಗ ಇದೇ ಪಟ್ಟಿಯಲ್ಲಿ ಕೆಲವು ಕನ್ನಡ ನಿರ್ದೇಶಕರ ಪುಟಗಳು ಸೇರಿವೆ, ಇವುಗಳನ್ನು ಈಗ ಕನ್ನಡ ಚಿತ್ರ ನಿರ್ದೇಶಕರು ಎಂಬ ವರ್ಗಕ್ಕೂ ಸೇರಿಸಲಾಗಿದೆ, ಆ ವರ್ಗದಲ್ಲಿ ಇನ್ನು ಹೆಚ್ಚು ಕನ್ನಡ ನಿರ್ದೇಶಕರ ಹೆಸರುಗಳಿವೆ. ಈಗ 'ಕನ್ನಡ ಚಿತ್ರ ನಿರ್ದೇಶಕರು' ವರ್ಗವನ್ನು 'ನಿರ್ದೇಶಕರು' ವರ್ಗದ ಉಪವರ್ಗವನ್ನಾಗಿಸಿ ಬಿಟ್ಟು, 'ನಿರ್ದೇಶಕರು' ವರ್ಗಕ್ಕೆ ಕೊಂಡಿ ಇರುವ ಕೆಲವೇ ಕೆಲವು ಕನ್ನಡ ಚಿತ್ರ ನಿರ್ದೇಶಕರ ಪುಟಗಳಿಂದ ಅದನ್ನು ತೆಗೆಯಬಹುದಲ್ಲವೇ ? ಕನ್ನಡದ ಜೊತೆ ಇತರ ಭಾಷೆಗಳ ಚಿತ್ರಗಳನ್ನು ನಿರ್ದೇಶಿಸಿರುವ (ಉದಾ: ಗಿರೀಶ್ ಕಾರ್ನಾಡ್, ಜಿ.ವಿ.ಅಯ್ಯರ್) ಕೆಲವರ ಪುಟಗಳಲ್ಲಿ ಇದನ್ನು ಹಾಗೇ ಉಳಿಸಿಕೊಳ್ಳಬಹುದು. ಇಲ್ಲವಾದರೆ Consistencyಗಾಗಿ ಕಳೆದ ೩-೪ ತಿಂಗಳು ಸೇರ್ಪಡೆಯಾಗಿರುವ ಕನ್ನಡ ಚಿತ್ರ ನಿರ್ದೇಶಕರ ಪುಟಗಳಲ್ಲೆಲ್ಲಾ 'ನಿರ್ದೇಶಕರು' ವರ್ಗವನ್ನು ಹಾಕುತ್ತಾ ಬರಬೇಕು. ಇದೇ ಮಾತು 'ನಿರ್ಮಾಪಕರು' ವರ್ಗಕ್ಕೂ ಅನ್ವಯಿಸುತ್ತದೆ. (ಪಾರ್ವತಮ್ಮ, ದ್ವಾರಕೀಶ್ ಇವರ ಪುಟಗಳಲ್ಲಿ ನಿರ್ಮಾಪಕರು, ಹಾಗು ಕನ್ನಡ ಚಿತ್ರ ನಿರ್ಮಾಪಕರು - ಹೀಗೆ ಎರಡು ವರ್ಗಗಳಿಗೆ ಸಂಪರ್ಕವಿದೆ). ಇತರ ಚಲನಚಿತ್ರ ತಂತ್ರಜ್ಞರ ವರ್ಗಗಳೂ ಇವೆ(ಸಾಹಸ ನಿರ್ದೇಶಕ, ಛಾಯಾಗ್ರಾಹಕ ಇತ್ಯಾದಿ), ಆದರೆ ಹೆಚ್ಚು ಪುಟಗಳು ಸದ್ಯಕ್ಕಿಲ್ಲ, ಮುಂದೆ ಸೇರಿಸುವಾಗ ಈಗ ತೆಗೆದುಕೊಳ್ಳುವ ನಿರ್ಣಯ ಸಹಾಯಕವಾಗುತ್ತದೆ. -ಹಂಸವಾಣಿದಾಸ ೦೬:೨೯, ೫ ಆಗಸ್ಟ್ ೨೦೦೬ (UTC)
- ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಿರುವ ನಿರ್ದೇಶಕರನ್ನು ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು ವರ್ಗಕ್ಕೆ ಹಾಕುವ ಸಲಹೆ ಸೂಕ್ತವಾಗಿದೆ. ಕನ್ನಡ ಚಿತ್ರಗಳೊಂದಿಗೆ ಇತರ ಭಾಷೆಯಲ್ಲೂ ಚಿತ್ರಗಳನ್ನು, ಧಾರಾವಾಹಿಗಳನ್ನು ನಿರ್ದೇಶಿಸಿರುವರನ್ನು(ಗಿರೀಶ್ ಕಾರ್ನಾಡ್, ಜಿ.ವಿ.ಅಯ್ಯರ್, ಶಂಕರನಾಗ್ ಇತ್ಯಾದಿ ಲೇಖನಗಳನ್ನು) ಈ ವರ್ಗದಲ್ಲಿ ಹಾಕಬಹುದು.
- ಇದೇ ನೀತಿಯನ್ನು ವರ್ಗ:ನಿರ್ಮಾಪಕರು ಮತ್ತು ವರ್ಗ:ಕನ್ನಡ ಚಲನಚಿತ್ರ ನಿರ್ಮಾಪಕರು ವರ್ಗಗಳಿಗೂ ಅನ್ವಯಿಸಬೇಕಿದೆ. - ಮನ|Mana Talk - Contribs ೧೭:೫೩, ೫ ಆಗಸ್ಟ್ ೨೦೦೬ (UTC)
Start a discussion about ವರ್ಗ:ನಿರ್ದೇಶಕರು
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ವರ್ಗ:ನಿರ್ದೇಶಕರು.