ವಿಷಯಕ್ಕೆ ಹೋಗು

ಎಂ.ಎಸ್.ವೇದಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಎಂ.ಎಸ್.ವೇದಾ ಕನ್ನಡ ಸಾಹಿತ್ಯದ ಗಂಭೀರ ವಿಚಾರಧಾರೆಯುಳ್ಳ ಸೃಜನಶೀಲ ಲೇಖಕಿ. ಇವರ ಸಾಹಿತ್ಯದ ಹರುಹು ದೊಡ್ಡದು. ಕವಿತೆ, ಕಥೆ, ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ.

ಜನನ, ಶಿಕ್ಷಣ

[ಬದಲಾಯಿಸಿ]

ಇವರು ಮೇ ೦೪- ೧೯೬೫ ಮೈಸೂರಿನಲ್ಲಿ ಜನಿಸಿದರು. ತಂದೆ ಸಿ.ಶಿವಣ್ಣ, ತಾಯಿ ದೇವಿರಮ್ಮ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿಯಲ್ಲಿ ಕನ್ನಡ ಎಂ.ಎ ಮತ್ತು ಪಿಎಚ್.ಡಿ ಪದವೀಧರೆಯಾಗಿದ್ದಾರೆ. ಕನ್ನಡ ಸಾಹಿತಿ ಬಿ.ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳನ್ನು ಕುರಿತು ಸಂಶೋಧನಾ ವ್ಯಾಸಂಗ ಮಾಡಿದ್ದಾರೆ.

ವೃತ್ತಿ ಜೀವನ

[ಬದಲಾಯಿಸಿ]

ಪಿರಿಯಾಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ), ಮೈಸೂರು ಇಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಾರ್ಥನಗರ ಮೈಸೂರು ಇಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ವೃತ್ತಿಯಿಂದ ನಿವೃತ್ತಿ ಹೊಂದಿ ಸಾಹಿತ್ಯ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೂಕ್ಷ್ಮ ಸಂವೇದನೆಯ ಲೇಖಕಿಯಾದ ವೇದಾ ತಮ್ಮ ರಚನಾ ಕೌಶಲ್ಯ ಮತ್ತು ಪ್ರತಿಭೆಗಳನ್ನು ಸ್ತ್ರೀ ಬದುಕಿನ ಮೀಮಾಂಸೆಗಾಗಿ ದುಡಿಸಿಕೊಳ್ಳುತ್ತಾರೆ.

ಕಥಾ ಸಂಕಲನಗಳು

[ಬದಲಾಯಿಸಿ]
  • ಪ್ರೀತಿ ಮತ್ತು ಸಾವು
  • ಪಾಲು (೧೯೯೭)
  • ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ(೨೦೦೨)
  • ಮುಳ್ಳ ಮನೆಯ ಮೇಲೆ(೨೦೦೯)
  • ಎಂ ಎಸ್ ವೇದಾರ ಸಣ್ಣಕಥೆಗಳು - ಈ ತನಕ(೨೦೧೦)
  • ಕಂಬಳಿಯೊಳಗೆ ಕೂಳ ಕಟ್ಟಿ (೨೦೧೮)

ಕಾದಂಬರಿಗಳು

[ಬದಲಾಯಿಸಿ]
  • ಜಮೀನು (೨೦೦೦)
  • ಜಯ (೨೦೦೪)
  • ಕಪ್ಪುಕಿವಿಯ ಬಿಳಿಯ ಕುದುರೆಗಳು (೨೦೦೭)
  • ರಾಜ ಒಡೆಯರು (೨೦೧೪)
  • ದೊಡ್ಡ ತಾಯಿ.

ಕವನ ಸಂಕಲನಗಳು

[ಬದಲಾಯಿಸಿ]
  • ಕಾವ್ಯಕೂಸು (೧೯೮೫)
  • ಗಂಗೋತ್ರಿಯಲ್ಲಿ (೧೯೮೭)
  • ಬಿಳಲುಗಳು (೧೯೮೯)
  • ದಾಖಲಾಗುವುದು ಬೇಡ(೨೦೦೪)
  • ಉತ್ತರ ಶಾಕುಂತಲಾ

ಪಿ.ಎಚ್ ಡಿ.ಮಹಾಪ್ರಬಂಧ

[ಬದಲಾಯಿಸಿ]
  • ಬಿ.ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳ ಸಮಗ್ರ ಅಧ್ಯಯನ (೧೯೯೨)

ಸಾಹಿತ್ಯ ವಿಮರ್ಶೆ

[ಬದಲಾಯಿಸಿ]
  • ಆರ್ದ್ರಗರ್ವದ ಹುಡುಗಿ (೨೦೧೦)
  • ಮಹಿಳಾ ಕಾವ್ಯ ಕಾರಣ (೨೦೧೬)

ವ್ಯಕ್ತಿ ಚಿತ್ರ

[ಬದಲಾಯಿಸಿ]
  • ಚದುರಂಗ (೨೦೦೧)

ಪ್ರಶಸ್ತಿಗಳು

[ಬದಲಾಯಿಸಿ]
  • ಗೀತಾದೇಸಾಯಿ ದತ್ತಿನಿಧಿ ಬಹುಮಾನ,
  • ಹೆಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ.
  • ತ್ರಿವೇಣಿ ಕಾದಂಬರಿ ಪ್ರಶಸ್ತಿ.
  • ಹೆಚ್.ವಿ. ಸಾವಿತ್ರಮ್ಮ ಪ್ರಶಸ್ತಿ (ಅಖಿಲ ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು).
  • ಮಾಣಿಕ್‌ಬಾಯಿ ಪಾಟೀಲ್ ಪ್ರಶಸ್ತಿ (ಕಲಬುರ್ಗಿ).
  • ಹಾವನೂರು ಪ್ರಶಸ್ತಿ (ಹಾವೇರಿ)
  • ಭಾರತೀಸುತ ಕಾದಂಬರಿ ಪ್ರಶಸ್ತಿ (ಕನ್ನಡ ಸಾಹಿತ್ಯ ಪರಿಷತ್ತು)
  • ಗೊರೂರು ಸಾಹಿತ್ಯ ಪ್ರಶಸ್ತಿ (ಬೆಂಗಳೂರು)
  • ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ (ವಿದ್ಯಾವರ್ಧಕ ಸಂಘ, ಧಾರವಾಡ)
  • ಇನ್ಫೋಸಿಸ್ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ (ಧಾರವಾಡ)
  • ದಕ್ಷಿಣ ಕೇಸರಿ (ಲಯನ್ಸ್ ಕ್ಲಬ್, ಪ್ರಶಸ್ತಿ ಮೈಸೂರು)
  • ಸಾಹಿತ್ಯಶ್ರೀ ಪ್ರಶಸ್ತಿ (ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ)

ಉಲ್ಲೇಖಗಳು

[ಬದಲಾಯಿಸಿ]
  • .