ಎಂ.ಎಸ್.ವೇದಾ

ವಿಕಿಪೀಡಿಯ ಇಂದ
Jump to navigation Jump to search

ಡಾ. ಎಂ.ಎಸ್.ವೇದಾ ಕನ್ನಡ ಸಾಹಿತ್ಯದ ಗಂಭೀರ ವಿಚಾರಧಾರೆಯುಳ್ಳ ಸೃಜನಶೀಲ ಲೇಖಕಿ. ಇವರ ಸಾಹಿತ್ಯದ ಹರುಹು ದೊಡ್ಡದು. ಕವಿತೆ, ಕಥೆ, ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ.

ಜನನ, ವಿದ್ಯಾಭ್ಯಾಸ[ಬದಲಾಯಿಸಿ]

ಇವರು ೧೯೬೫ ರಲ್ಲಿ ಜನಿಸಿದರು. ಎಂ.ಎ(ಕನ್ನಡ), ಪಿಎಚ್.ಡಿ ಪದವೀಧರೆಯಾಗಿದ್ದಾರೆ. ಕನ್ನಡ ಸಾಹಿತಿ ಬಿ.ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳನ್ನು ಕುರಿತು ಸಂಶೋಧನಾ ವ್ಯಾಸಂಗ ಮಾಡಿದ್ದಾರೆ. ಪ್ರಸ್ತುತ ಪಿರಿಯಾಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿದ್ದಾರೆ. ಸೂಕ್ಷ್ಮ ಸಂವೇದನೆಯ ಲೇಖಕಿಯಾದ ವೇದಾ ತಮ್ಮ ರಚನಾ ಕೌಶಲ್ಯ ಮತ್ತು ಪ್ರತಿಭೆಗಳನ್ನು ಸ್ತ್ರೀ ಬದುಕಿನ ಮೀಮಾಂಸೆಗಾಗಿ ದುಡಿಸಿಕೊಳ್ಳುತ್ತಾರೆ.

ಕೃತಿಗಳು[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

  • ಪ್ರೀತಿ ಮತ್ತು ಸಾವು
  • ಪಾಲು

ಕಾದಂಬರಿಗಳು[ಬದಲಾಯಿಸಿ]

  1. ಜಯ.
  2. ಕಪ್ಪುಕಿವಿಯ ಬಿಳಿಯ ಕುದುರೆ. # ರಾಜ ಒಡೆಯರು.

ಕಾವ್ಯ ಸಂಕಲನಗಳು[ಬದಲಾಯಿಸಿ]

  • ಕಾವ್ಯಕೂಸು
  • ಗಂಗೋತ್ರಿಯಲ್ಲಿ
  • ಬಿಳಲುಗಳು

ನಾಟಕ[ಬದಲಾಯಿಸಿ]

  • ಉತ್ತರ ಶಾಕುಂತಲಾ

ಸಂಶೋಧನಾ ಕೃತಿ[ಬದಲಾಯಿಸಿ]

  • ಬಿ.ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳ ಸಮಗ್ರ ಅಧ್ಯಯನ