ನಾಗೇಶ ಹೆಗಡೆ
ನಾಗೇಶ ಹೆಗಡೆ | |
---|---|
ಜನನ | ೧೪ ಫೆಬ್ರವರಿ, ೧೯೪೮ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಬಕ್ಕೆಮನೆ |
ವೃತ್ತಿ |
|
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯ |
ಪೌರತ್ವ | ಭಾರತೀಯ |
ವಿದ್ಯಾಭ್ಯಾಸ |
|
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ |
|
ಪ್ರಮುಖ ಪ್ರಶಸ್ತಿ(ಗಳು) | ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ನಾಗೇಶ ಹೆಗಡೆ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರು - ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸಿದವರು. ಇವರು ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿದ್ದಾರೆ ಮತ್ತು ಹಲವಾರು ಲೇಖಕರಿಗೆ ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಅವಕಾಶ ನೀಡಿ ಪ್ರೋತ್ಸಾಹ ನೀಡಿದ್ದಾರೆ. ಅಕ್ಷರ ಪ್ರಕಾಶನ ಪ್ರಕಟಿಸಿದ ಇವರ ಇರುವುದೊಂದೇ ಭೂಮಿ ಪುಸ್ತಕ ಕನ್ನಡದಲ್ಲಿ ಪರಿಸರ, ವಿಜ್ಞಾನದ ಬಗ್ಗೆ ಮೂಡಿ ಬಂದ ಮಹತ್ವದ ಕೃತಿಗಳಲ್ಲೊಂದು. ಪ್ರಜಾವಾಣಿಯಲ್ಲಿ ಪ್ರತಿ ಬುಧವಾರ ಬರುವ ವಿಜ್ಞಾನ ವಿಶೇಷ ಅಂಕಣ ಎಲ್ಲ ವಯೋಮಾನದವರಿಗೆ ವಿಜ್ಞಾನವನ್ನು ಅದರ ಸಾಮಾಜಿಕ ಆಯಾಮಗಳೊಂದಿಗೆ ಸರಳವಾಗಿ ವಿವರಿಸುತ್ತದೆ.[೧]
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ನಾಗೇಶ ಹೆಗಡೆಯರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕೆಮನೆ ಎಂಬ ಚಿಕ್ಕ ಹಳ್ಳಿ. ಜನ್ಮ ದಿನಾಂಕ ೧೪ ಫೆಬ್ರುವರಿ ೧೯೪೮. ಇವರು ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ್ದರು. ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು.
ಉದ್ಯೋಗ
[ಬದಲಾಯಿಸಿ]- ಅಮೆರಿಕದ ಲೈಬ್ರರಿ ಆಫ್ ಕಾಂಗ್ರೆಸ್‍ನ ದಿಲ್ಲಿಯ ಶಾಖೆಯಲ್ಲಿ ಕನ್ನಡ ಪುಸ್ತಕಗಳ ಆಯ್ಕೆ ಮಾಡುವ ಅರೆಕಾಲಿಕ ಉದ್ಯೋಗಿಯಾಗಿದ್ದರು.
- ನೈನಿತಾಲ್‍ನಲ್ಲಿರುವ ಕುಮಾಂವೊ ವಿಶ್ವವಿದ್ಯಾಲಯದಲ್ಲಿ ಪರಿಸರ ಭೂವಿಜ್ಞಾನ ಉಪನ್ಯಾಸಕರಾಗಿ ಒಂದು ವರ್ಷ ಕೆಲಸ ಮಾಡಿದರು.
- ನಂತರ ಬೆಂಗಳೂರಿನ 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ವಿಜ್ಞಾನ ಮತ್ತು ಅಭಿವೃದ್ಧಿ ಬಾತ್ಮೀದಾರರಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ೨೬ ವರ್ಷ 'ಪ್ರಜಾವಾಣಿ' ಮತ್ತು 'ಸುಧಾ' ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ೨೦೦೬ರಲ್ಲಿ ನಿವೃತ್ತರಾದರು.
- ೨೦೦೧ರಿಂದ ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಜರ್ನಲಿಸಂ ಆಂಡ್ ನ್ಯೂ ಮೀಡಿಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ (೨೦೧೭).
ಇವರ ಕೃತಿಗಳು
[ಬದಲಾಯಿಸಿ]- ಇರುವುದೊಂದೇ ಭೂಮಿ, (ಸಾಹಿತ್ಯ ಅಕಾಡೆಮಿ ವಿಜ್ಞಾನ ಸಾಹಿತ್ಯ ಬಹುಮಾನ)
- ಗಗನ ಸಖಿಯರ ಸೆರಗ ಹಿಡಿದು, (ವಿಶ್ವೇಶ್ವರಯ್ಯ ಪ್ರಶಸ್ತಿ)
- ನಮ್ಮೊಳಗಿನ ಬ್ರಹ್ಮಾಂಡ, (ಶಿವರಾಮ ಕಾರಂತ ಪ್ರಶಸ್ತಿ)
- ಕೆರೆಯಲಿ ಚಿನ್ನ ಕೆರೆಯೇ ಚಿನ್ನ (ಸಾಹಿತ್ಯ ಅಕಾಡೆಮಿ ಮಕ್ಕಳ ಸಾಹಿತ್ಯ ಬಹುಮಾನ)
- ಗುಳಿಗೆ ಗುಮ್ಮ (ಮಕ್ಕಳ ನಾಟಕ)
- ಗುರುಗ್ರಹದಲ್ಲಿ ದೀಪಾವಳಿ
- ಕ್ಯಾಪ್ಸೂಲಗಿತ್ತಿ
- ಮಿನುಗುವ ಮೀನು, ಕುಲಾಂತರಿ ಕೋತಿ
- ಅಂತರಿಕ್ಷದಲ್ಲಿ ಮಹಾಸಾಗರ
- ಮಂಗಳನಲ್ಲಿ ಜೀವಲೋಕ
- ಅದು ವಿಸ್ಮಯ, ಇದು ವಿಷಮಯ
- ಪ್ರತಿದಿನ ಪರಿಸರ ದಿನ
- ಮುಷ್ಟಿಯಲ್ಲಿ ಮಿಲೆನಿಯಂ
- ಸುರಿಹೊಂಡ, ಭರತಖಂಡ
- ಅಕ್ಕರೆ ಅಕ್ಕಿ, ಭಳಿರೇ ಭತ್ತ
- ಆಚಿನ ಲೋಕಕ್ಕೆ ಕ್ಕಾಲಕೋಶ
- ಶತ್ರುವಿಲ್ಲದ ಸಮರ (ಸಾಹಿತ್ಯ ಅಕಾಡೆಮಿ ವಿಜ್ಞಾನ ಸಾಹಿತ್ಯ ಬಹುಮಾನ)
- ಅಭಿವೃಧ್ದಿಯ ಅಂಧಯುಗ
- ಕೊಪೆನ್‌ಹೇಗನ್ ಋತುಸಂಹಾರ
- ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್
- ಮತ್ತೆ ಮತ್ತೆ ಕೂಗುಮಾರಿ
- ಹಳ್ಳಿ ಮುಕ್ಕ ಎಲ್ಲೆಲ್ ಹೊಕ್ಕ
- ಮನುಕುಲದ ರಕ್ಷಣೆಗೆ ಮಹತ್ವದ ದಿನಗಳು
- ಬರ್ಗರ್ ಭಾರತ
- ನಮ್ಮೊಳಗಿನ ದುಂದುಮಾರ
- ನರಮಂಡಲ ಬ್ರಹ್ಮಾಂಡ (ವಿಜ್ಞಾನ-ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ)
- ನಾಳೆಗಳ ಹಿಂದಿಕ್ಕಿ ನಾಗಾಲೋಟ
- ಆಸ್ಪತ್ರೆಗಳಲ್ಲಿ ಏಳು ಎಚ್ಚರಿಕೆಗಳು
- ಭೂಮಿಯೆಂಬ ಗಗನನೌಕೆ (೨೦೧೭)
- ಭೋಗಪ್ರಳಯ (೨೦೧೭)
- ಹಾರುವತಟ್ಟೆಯ ದಶಾವತಾರ (೨೦೧೭)
ಪ್ರಶಸ್ತಿಗಳು
[ಬದಲಾಯಿಸಿ]- ಶಾಮರಾವ್ ದತ್ತಿನಿಧಿ ಪ್ರಶಸ್ತಿ
- ಕೆನರಾ ಬ್ಯಾಂಕ್ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ
- ಕೆಯುಡಬ್ಲೂಜೆ ಮಾನವೀಯ ವರದಿಗಾರಿಕೆ ಪ್ರಶಸ್ತಿ
- ಕೆಂಪೇಗೌಡ ಪ್ರಶಸ್ತಿ
- ರಾಜ್ಯ ಪರಿಸರ ಪತ್ರಕರ್ತ ಪ್ರಶಸ್ತಿ
- ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ
- ಪಿಆರ್‍ಎಸ್‍ಐ ಪ್ರಶಸ್ತಿ
- ಮಾಧ್ಯಮ ಅಕಾಡೆಮಿಯ ಜೀವಮಾನ ಪ್ರಶಸ್ತಿ
- ಪ್ರೆಸ್‍ಕ್ಲಬ್ ಪ್ರಶಸ್ತಿ
- ರಾಜ್ಯೋತ್ಸವ ಪ್ರಶಸ್ತಿ
- ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
- ವಿಜ್ಞಾನ ಅಕಾಡೆಮಿ ಪ್ರಶಸ್ತಿ [೨]
- ವಿಶ್ವೇಶ್ವರಯ್ಯ ಪ್ರಶಸ್ತಿ
- ಶಿವರಾಮ ಕಾರಂತ ಪ್ರಶಸ್ತಿ
- ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ [೩]
- ೨೦೧೬ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ[೪]
- ವಿ. ಕೃ. ಗೋಕಾಕ್ ಪ್ರಶಸ್ತಿ - ೨೦೧೭[೫]
- ಬಿಗ್ ಲಿಟ್ಟಲ್ ಬುಕ್ ಪ್ರಶಸ್ತಿ - ೨೦೧೮[೬] (ಟಾಟಾ ಟ್ರಸ್ಟ್‌ನ ಪರಾಗ್ ಇನಿಷಿಯೇಟಿವ್ ವತಿಯಿಂದ, ಮಕ್ಕಳ ಶ್ರೇಷ್ಠ ಸಾಹಿತಿಗಳಿಗೆ ನೀಡುವ ವಾರ್ಷಿಕ ಪ್ರಶಸ್ತಿ)
ಉಲ್ಲೇಖಗಳು
[ಬದಲಾಯಿಸಿ]- ↑ "ವಿಜ್ಞಾನ ವಿಶೇಷ - ನಾಗೇಶ ಹೆಗಡೆ ಅಂಕಣ, ಪ್ರಜಾವಾಣಿಯ ಅಂಕಣದ ಕೊಂಡಿ". Archived from the original on 2012-12-10. Retrieved 2012-12-07.
- ↑ ಐವರು ಲೇಖಕರಿಗೆ ವಿಜ್ಞಾನ ಅಕಾಡೆಮಿ ಪ್ರಶಸ್ತಿ ಪ್ರಕಟ, ಪ್ರಜಾವಾಣಿ, 04/21/2015
- ↑ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರು Archived 2015-02-13 ವೇಬ್ಯಾಕ್ ಮೆಷಿನ್ ನಲ್ಲಿ., ಕರ್ನಾಟಕ-ವಾರ್ತೆ
- ↑ ನಾಗೇಶ್ ಹೆಗಡೆ, ಒಎಲ್‌ಎನ್, ಲೋಕಾಪುರ ಸೇರಿ ಐವರಿಗೆ ಪ್ರಶಸ್ತಿ, ವಿಜಯ ಕರ್ನಾಟಕ, ೧೧ಜನವರಿ೨೦೧೭
- ↑ ನಾಗೇಶ್ ಹೆಗಡೆಗೆ ವಿ. ಕೃ. ಗೋಕಾಕ್ ಪ್ರಶಸ್ತಿ, ಪ್ರಜಾವಾಣಿ, ೬ ಸೆಪ್ಟೆಂಬರ್ ೨೦೧೭
- ↑ ನಾಗೇಶ್ ಹೆಗಡೆಗೆ 'ಬಿಗ್ ಲಿಟ್ಟಲ್ ಬುಕ್' ಪ್ರಶಸ್ತಿ ಪ್ರದಾನ, ಲೋಕಧ್ವನಿ, ೨೩ ನವೆಂಬರ್, ೨೦೧೮