ವಿಷಯಕ್ಕೆ ಹೋಗು

ರೂಪಾ ಮಂಜರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೂಪಾ ಮಂಜರಿ
ಜನನ
ಶ್ರೀ ರೂಪಾ ಮಂಜರಿ

ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಚಲನಚಿತ್ರ ನಟಿ, ರೂಪದರ್ಶಿ
ಸಕ್ರಿಯ ವರ್ಷಗಳು೨೦೦೯–೨೦೧೫
ಎತ್ತರ೧.೫೮

ರೂಪಾ ಮಂಜರಿ ಇವರು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇವರ ಮಾತೃಭಾಷೆ ತಮಿಳು.[] ನಾನ್ (೨೦೧೨) ಮತ್ತು ಯಾಮಿರುಕ್ಕ ಬಾಯಾಮೆ (೨೦೧೪) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೊದಲು, ನಂದಿನಿ ಅವರ ಚಿತ್ರವಾದ ತಿರು ತಿರು ತುರು ತುರು (೨೦೦೯) ದಲ್ಲಿ ಪಾದಾರ್ಪಣೆ ಮಾಡಿದರು.[]

ವೃತ್ತಿಜೀವನ

[ಬದಲಾಯಿಸಿ]

ರೂಪಾ ಮಂಜರಿಯವರಿಗೆ ತಿರು ತಿರು ತುರು ತುರು ಚಿತ್ರದ ಆಡಿಷನ್‌ನಲ್ಲಿ ನಂದಿನಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು ಮತ್ತು ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯು ದೊರೆಯಿತು. ಆಡಿಷನ್‌ಗೆ ಬಂದ ಇತರ ೩೦ ಕ್ಕೂ ಹೆಚ್ಚು ಹುಡುಗಿಯರಲ್ಲಿ ರೂಪಾ ಮಂಜರಿಯವರನ್ನು ಆಯ್ಕೆ ಮಾಡಲು ನಾಲ್ಕು ತಿಂಗಳು ಬೇಕಾಯಿತು.[] ರೊಮ್ಯಾಂಟಿಕ್ ಹಾಗೂ ಹಾಸ್ಯಮಯವಾದ ಈ ಚಿತ್ರದಲ್ಲಿ ಅವರಿಗೆ ಅಜ್ಮಲ್‌‌ರವರೊಂದಿಗೆ ಕಳೆದುಹೋದ ಮಗುವನ್ನು ಹುಡುಕುತ್ತಿರುವ ಪಾತ್ರ ದೊರೆಯಿತು. ರೂಪಾ ಅವರು ಅಭಿನಯದಲ್ಲಿ ಅತ್ಯುತ್ತಮ ನಟಿಗಾಗಿ ವಿಜಯ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ವಿಮರ್ಶಕರು ಅವರ ಅರ್ಚನಾ ಪಾತ್ರವನ್ನು- "ಕೋಪ, ಹಾಸ್ಯ, ಕೋಮಲತೆ ಮತ್ತು ಮೃದು ಪ್ರಣಯದ ಎಲ್ಲಾ ಸೂಕ್ಷ್ಮತೆಗಳೊಂದಿಗೆ ಜೀವಂತಗೊಳಿಸುತ್ತಾರೆ" ಎಂದು ಬಣ್ಣಿಸಿದರು.[]

ತದನಂತರ, ಅವರು ಲಾಲ್‌ರವರು ನಿರ್ದೇಶಿಸಿ ನಿರ್ಮಿಸಿದ ೨೦೧೦ ರ ಮಲಯಾಳಂ ಚಿತ್ರ ಟೂರ್ನಮೆಂಟ್‌ನಲ್ಲಿ ಕಾಣಿಸಿಕೊಂಡರು. ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾದ ಪುರುಷರ ಗುಂಪನ್ನು ಭೇಟಿಯಾಗುವ ವನ್ಯಜೀವಿ ಛಾಯಾಗ್ರಾಹಕನ ಪಾತ್ರವನ್ನು ನಿರ್ವಹಿಸಿದರು.[] ಈ ಚಿತ್ರವು ನಕಾರಾತ್ಮಕ ವಿಮರ್ಶೆಗಳಿಗೆ ತೆರೆದುಕೊಂಡಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿತು.[] ಅವರು ದೀರ್ಘಕಾಲದಿಂದ ವಿಳಂಬವಾದ ವಿಜಯ್ ಆಂಟೋನಿಯವರ ಅಭಿನಯದ ನಾನ್ ಚಿತ್ರದಲ್ಲಿ ನೀಲಾ ನೀಲಾ ಹಾಡಲ್ಲಿ ಅಭಿನಯಿಸಿದರು ಮತ್ತು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ಬಿಡುಗಡೆಯಾದ "ಮಕ್ಕಯಾಲ ಮಕ್ಕಯಾಲ" ಎಂಬ ಹಾಡಿನ ವೀಡಿಯೊದಲ್ಲಿ ಭಾಗಿಯಾಗಿದ್ದರು. ಈ ಚಿತ್ರವು ೨೦೧೦ ರ ಆರಂಭದಲ್ಲಿ, ನಿರ್ಮಾಣವನ್ನು ಪ್ರಾರಂಭಿಸಿತು ಮತ್ತು ೨೦೧೨ ರಂದು ಆನ್‌ಲೈನ್‌ನಲ್ಲಿ ಬಿಡುಗಡೆಯಾಯಿತು.[][][೧೦] ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ೨೦೧೨ ರಲ್ಲಿ, ಬಿಡುಗಡೆಯಾದ ಎರಡು ಮಲಯಾಳಂ ಚಿತ್ರಗಳಲ್ಲಿ ಮಲ್ಲು ಸಿಂಗ್‌‌ನಲ್ಲಿ ಕಾಣಿಸಿಕೊಂಡರು ಹಾಗೂ ಮಲಯಾಳಂ ಚಿತ್ರವಾದ ಐ ಲವ್ ಮಿಯಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ೨೦೧೪ ರಲ್ಲಿ, ಅವರ ಮೊದಲ ಹಾಸ್ಯ-ಥ್ರಿಲ್ಲರ್ ಚಲನಚಿತ್ರವಾದ, ಯಾಮಿರುಕ್ಕ ಬಾಯಾಮೆ ವಾಣಿಜ್ಯಿಕವಾಗಿ ಯಶಸ್ವಿಯಾಯಿತು.

ರೂಪಾ ಮಂಜರಿಯವರು ತಮಿಳಿನ ಸಿವಪ್ಪು ಚಿತ್ರದಲ್ಲಿ ನಿರ್ಮಾಣ ಕಾರ್ಮಿಕನ ಪಾತ್ರವನ್ನು ನಿರ್ವಹಿಸಿದ್ದಾರೆ.[೧೧]

ಚಲನಚಿತ್ರಗಳು

[ಬದಲಾಯಿಸಿ]
ವರ್ಷ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿಗಳು
೨೦೦೯ ತಿರು ತಿರು ತುರು ತುರು ಅರ್ಚನಾ ತಮಿಳು ಭಾಷೆ ಅತ್ಯುತ್ತಮ ಚೊಚ್ಚಲ ನಟಿಗಾಗಿ ವಿಕಟನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಹಾಗೂ ಅತ್ಯುತ್ತಮ ಚೊಚ್ಚಲ ನಟಿಗಾಗಿ ವಿಜಯ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
೨೦೧೦ ಮಾಸ್ಕೋವಿನ್ ಕಾವೇರಿ ತಮಿಳು "ಗ್ರಾಮಂ ಥೆಡಿ ವಾಡಾ" ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟೂರ್ನಮೆಂಟ್ - ಪ್ಲೇ & ರೀಪ್ಲೇ ಅಶ್ವಥಿ ಅಲೆಕ್ಸ್ ಮಲಯಾಳಂ
೨೦೧೨ ಮಲ್ಲು ಸಿಂಗ್ ಪೂಜಾ ಮಲಯಾಳಂ
ನಾನ್ ರೂಪಾ ತಮಿಳು
ಐ ಲವ್ ಮಿ ಸಮೀರ ಮಲಯಾಳಂ
೨೦೧೪ ಯಾಮಿರುಕ್ಕ ಬಯಾಮೆ ಸ್ಮಿತಾ ತಮಿಳು
೨೦೧೫ ಸಿವಪ್ಪು ಪಾರ್ವತಿ ತಮಿಳು

ಉಲ್ಲೇಖಗಳು

[ಬದಲಾಯಿಸಿ]
  1. "A breezy entertainer: Rupa Manjari". Sify. 23 September 2009. Archived from the original on 21 August 2012. Retrieved 23 August 2012.
  2. "I still prefer Kollywood: Rupa Manjari". The Times of India. Archived from the original on 3 December 2013.
  3. "Actress Rupa Manjari – Tamil Movie Actress Interview – Thiru Thiru Thuru Thuru Rupa Manjari". Videos.behindwoods.com. Retrieved 23 August 2012.
  4. SINDHU VIJAYAKUMAR (5 October 2009). "Acting was my dream: Rupa". The Times of India. Archived from the original on 7 July 2012. Retrieved 23 August 2012.
  5. "Movie Review:Thiru Thiru Thuru Thuru". Sify. Archived from the original on 9 May 2014. Retrieved 23 August 2012.
  6. "Rupa Manjari goes to Malluwood". Sify. Archived from the original on 28 October 2010. Retrieved 9 August 2022.
  7. P Sangeetha (27 October 2010). "Rupa Manjari is game for a tournament!". The Times of India. Archived from the original on 3 December 2013. Retrieved 23 August 2012.
  8. Shankaran Malini. "No time for lyrics, but my music is from the heart: Vijay Antony". The Times of India. Archived from the original on 3 December 2013. Retrieved 23 August 2012.
  9. "Cinema Plus / Columns : ITSY-BITSY". The Hindu. Chennai, India. 20 March 2011. Archived from the original on 23 March 2011. Retrieved 23 August 2012.
  10. Shankaran Malini (17 December 2011). "Rupa Manjari has no regrets". The Times of India. Archived from the original on 2 December 2013. Retrieved 23 August 2012.
  11. "Rupa Manjari to play labourer in Tamil movie". Archived from the original on 28 November 2013.

ಬಾಹ್ಯ ಕೊಂಡಿ

[ಬದಲಾಯಿಸಿ]