ವಿಷಯಕ್ಕೆ ಹೋಗು

ಸಾರ್ವಜನಿಕ ಸಂಪಾದಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾರ್ವಜನಿಕ ಸಂಪಾದಕ ಎಂಬುದು ಕೆಲವು ಸುದ್ದಿ ಪ್ರಕಟಣೆಯ ಕಚೇರಿಗಳಲ್ಲಿ ಅಸ್ತಿತ್ವದಲ್ಲಿರುವ ಹುದ್ದೆ/ಸ್ಥಾನ. ಈ ಸ್ಥಾನವನ್ನು ಹೊಂದಿರುವ ವ್ಯಕ್ತಿಯು ಸುದ್ದಿಯ ಪ್ರಕಟಣೆಯಲ್ಲಿ ಸರಿಯಾಗಿ ಪತ್ರಿಕೋದ್ಯಮದ ನೀತಿಗಳು ಅನುಷ್ಠಾನವಾಗಿದೆಯೇ ಎಂದು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ವಿಮರ್ಶಾತ್ಮಕ ದೋಷಗಳನ್ನು ಅಥವಾ ಲೋಪಗಳನ್ನು ಗುರುತಿಸುವುದು ಮತ್ತು ಪರಿಶೀಲಿಸುವುದು ಹಾಗೂ ಸಾರ್ವಜನಿಕರಿಗೆ ಸಂಪರ್ಕದಾರನಾಗಿ ಕಾರ್ಯನಿರ್ವಹಿಸುವುದು ಈ ಹುದ್ದೆಯಲ್ಲಿರುವವರ ದಿನ ನಿತ್ಯದ ಕಾರ್ಯವಾಗಿದೆ. ಸಾಮಾನ್ಯವಾಗಿ, ಸಾರ್ವಜನಿಕ ಸಂಪಾದಕರು ಈ ಕೆಲಸವನ್ನು ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ನಿಯಮಿತ ವೈಶಿಷ್ಟ್ಯದ ಮೂಲಕ ಕಾರ್ಯ ನಿರ್ವಹಿಸುತ್ತಾರೆ. ಸಾಮಾನ್ಯವಾಗಿ ಸಂಪಾದಕರು ಟೀಕೆಗೊಳಗಾಗುವ ಪತ್ರಿಕೆಯ ಉದ್ಯೋಗಿಗಳಾಗಿರುವುದರಿಂದ, ಅವರ ಕೆಲಸವು ಇತರರಿಗೆ ಪಕ್ಷಪಾತ ಮಾಡಿದಂತೆ ತೋರುತ್ತದೆ. ಒಂದು ಉನ್ನತ ಮಟ್ಟದ ನೈತಿಕತೆಯನ್ನು ಹೊಂದಿರುವ ಪತ್ರಿಕೆಯು ಪತ್ರಿಕೆಯ ಟೀಕೆಗಾಗಿ ಸಾರ್ವಜನಿಕ ಸಂಪಾದಕರನ್ನು ವಜಾ ಮಾಡುವುದಿಲ್ಲ.

ಯು.ಎಸ್ ನ ಅನೇಕ ಪ್ರಮುಖ ಪತ್ರಿಕೆಗಳು ಸಾರ್ವಜನಿಕ ಸಂಪಾದಕರ ಅಂಕಣವನ್ನು ತಮ್ಮ ಒಂಬಡ್ಸ್‌ಮನ್ ಧ್ವನಿಯಾಗಿ ಬಳಸುತ್ತಾರೆ. ಸ್ಥಾಯಿ ಒಂಬಡ್ಸ್‌ಮನ್ ಆಗಿ ಅರ್ಹತೆ ಪಡೆಯಲು ಯಾರಾದರು ಒಬ್ಬರು ಸುದ್ದಿ ಒಂಬಡ್ಸ್‌ಮನ್ ಸಂಘಟನೆಯ ಸದಸ್ಯರಾಗಿರಬೇಕು.

೧೯೨೨ ರಲ್ಲಿ ಟೋಕಿಯೊದ ಅಸಾಹಿ ಶಿಂಬುನ್ ಎಂಬ ಪತ್ರಿಕೆಯು ಒಂಬಡ್ಸ್‌ಮನ್ಅನ್ನು ನೇಮಿಸಿದ ಮೊದಲ ಪತ್ರಿಕೆ. ೧೯೬೭ರಲ್ಲಿ ಲೂಯಿಸ್ವಿಲ್ಲೆ ಕೊರಿಯರ್-ಜರ್ನಲ್ ಮತ್ತು ಲೂಯಿಸ್ವಿಲ್ ಟೈಮ್ಸ್ ಸಾರ್ವಜನಿಕ ಸಂಪಾದಕರನ್ನು ನೇಮಿಸಿದ ಮೊದಲ ಅಮೆರಿಕನ್ ಪತ್ರಿಕೆಗಳಾಗಿವೆ.[]

ಜೇಸನ್ ಬ್ಲೇರ್ ಹಗರಣ ಪ್ರತಿಕ್ರಿಯೆಯಾಗಿ ದಿ ನ್ಯೂಯಾರ್ಕ್ ಟೈಮ್ಸ್ ಈ ಸ್ಥಾನವನ್ನು ರೂಪಿಸಿತು. ಟೈಮ್ಸ್ ನ ಮೊದಲ ಸಾರ್ವಜನಿಕ ಸಂಪಾದಕರಾದಂತಹ ಡೇನಿಯಲ್ ಓಕ್ರೆಂಟ್ ಅವರು ಅದಕ್ಕೂ ಮೊದಲು ಪುಸ್ತಕ ಪ್ರಕಟಣೆಗಳಲ್ಲಿ ಕೆಲಸ ಮಾಡಿದ್ದರು. ಓಕ್ರೆಂಟ್ ಡಿಸೆಂಬರ್ ೨೦೦೩ ರಿಂದ ಮೇ ೨೦೦೫ ರವರೆಗೆ ಈ ಸ್ಥಾನವನ್ನು ಅಲಂಕರಿಸಿದ್ದರು. ಮುಂದಿನ ಹನ್ನೆರಡು ವರ್ಷಗಳಲ್ಲಿ ಅಕ್ರಮವಾಗಿ ಐವರು ಈ ಸ್ಥಾನವನ್ನು ಅಲಂಕರಿಸಿದರು. ನಂತರ ೨೦೧೭ ರ ಮೇ ೩೧ ರಂದು ಟೈಮ್ಸ್ ಪತ್ರಿಕೆಯು ಸಾರ್ವಜನಿಕ ಸಂಪಾದಕ ಸ್ಥಾನವನ್ನು ತೆಗೆದುಹಾಕುತ್ತಿರುವುದಾಗಿ ಘೋಷಿಸಿತು.[]

ಉಲ್ಲೇಖಗಳು

[ಬದಲಾಯಿಸಿ]
  1. Ananny, Mike (2016-03-17). "It's time to reimagine the role of a public editor, starting at The New York Times". Nieman Lab. Neiman Foundation at Harvard.
  2. Daniel Victor (May 31, 2017). "New York Times Will Offer Employee Buyouts and Eliminate Public Editor Role". The New York Times. Retrieved 2018-09-21.


ಮುಂದೆ ಓದಿ

[ಬದಲಾಯಿಸಿ]