ಪನಬಾಕಾ ಲಕ್ಷ್ಮೀ
ಡಾ.ಪನಬಾಕಾ ಲಕ್ಷ್ಮೀ | |
---|---|
ಕೇಂದ್ರ ಜವಳಿ ಖಾತೆ ರಾಜ್ಯ ಸಚಿವರು
| |
ಅಧಿಕಾರ ಅವಧಿ ೨೦೦೯ – ೨೦೧೪ | |
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರು
| |
ಅಧಿಕಾರ ಅವಧಿ ೨೦೦೪ – ೨೦೦೯ | |
ಉತ್ತರಾಧಿಕಾರಿ | ದಿನೇಶ್ ತ್ರಿವೇದಿ |
ಸಂಸತ್ ಸದಸ್ಯ, ಲೋಕಸಭೆ
| |
ಅಧಿಕಾರ ಅವಧಿ ೨೦೦೯ – ೨೦೧೪ | |
ಪೂರ್ವಾಧಿಕಾರಿ | ದಗ್ಗುಬಾಟಿ ಪುರಂದರೇಶ್ವರಿ |
ಉತ್ತರಾಧಿಕಾರಿ | ಮಾಲ್ಯಾದ್ರಿ ಶ್ರೀರಾಮ್ |
ಮತಕ್ಷೇತ್ರ | ಬಾಪಟ್ಲ |
ಸಂಸತ್ ಸದಸ್ಯ, ಲೋಕಸಭೆ
| |
ಅಧಿಕಾರ ಅವಧಿ ೧೯೯೬ – ೧೯೯೮ | |
ಪೂರ್ವಾಧಿಕಾರಿ | ಪದ್ಮಶ್ರೀ ಕುಡುಮುಲ |
ಅಧಿಕಾರ ಅವಧಿ ೧೯೯೮ – ೧೯೯೯ | |
ಉತ್ತರಾಧಿಕಾರಿ | ವುಕ್ಕಲ ರಾಜೇಶ್ವರಮ್ಮ |
ಅಧಿಕಾರ ಅವಧಿ ೨೦೦೪ – ೨೦೦೯ | |
ಪೂರ್ವಾಧಿಕಾರಿ | ವುಕ್ಕಲ ರಾಜೇಶ್ವರಮ್ಮ |
ಉತ್ತರಾಧಿಕಾರಿ | ಮೇಕಪತಿ ರಾಜಮೋಹನ್ ರೆಡ್ಡಿ |
ಮತಕ್ಷೇತ್ರ | ನೆಲ್ಲೂರು |
ವೈಯಕ್ತಿಕ ಮಾಹಿತಿ | |
ಜನನ | ಕವಲಿ, ಆಂಧ್ರ ಪ್ರದೇಶ | ೬ ಅಕ್ಟೋಬರ್ ೧೯೫೮
ರಾಜಕೀಯ ಪಕ್ಷ | ತೆಲುಗು ದೇಶಂ ಪಕ್ಷ (೨೦೧೯ ರಿಂದ) |
ಇತರೆ ರಾಜಕೀಯ ಸಂಲಗ್ನತೆಗಳು |
*ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (೨೦೧೯ ರ ವರೆಗೆ) |
ಸಂಗಾತಿ(ಗಳು) | ಪನಬಾಕಾ ಕೃಷ್ಣಯ್ಯ |
ಮಕ್ಕಳು | ೨ ಹೆಣ್ಣು ಮಕ್ಕಳು |
ವಾಸಸ್ಥಾನ | ನೆಲ್ಲೂರು |
ಡಾ. ಪನಬಾಕಾ ಲಕ್ಷ್ಮೀ (ಜನನ ೬ ಅಕ್ಟೋಬರ್ ೧೯೫೮) ಇವರು ಒಬ್ಬ ಭಾರತೀಯ ರಾಜಕಾರಣಿ. ಇವರು ಮಾಜಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ (೨೦೦೪-೨೦೦೯) ಮತ್ತು ಕೇಂದ್ರ ಜವಳಿ ರಾಜ್ಯ ಸಚಿವೆ (೨೦೦೯-೨೦೧೪) ಆಗಿದ್ದರು .ಇವರು ಆಂಧ್ರಪ್ರದೇಶದ ಬಾಪಟ್ಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಸಂಯೋಜಿತ ಆಂಧ್ರಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. ಈಗ ಇವರು ತೆಲುಗು ದೇಶಂ ಪಕ್ಷದ (ಟಿಡಿಪಿ)ದಲ್ಲಿ ಭಾಗಿಯಾಗಿದ್ದಾರೆ. [೧]
ವೈಯಕ್ತಿಕ ಜೀವನ
[ಬದಲಾಯಿಸಿ]ಡಾ. ಪನಬಾಕಾ ಲಕ್ಷ್ಮೀ ಅವರು ಕಾವಲಿಯ ನೆಲ್ಲೂರಿ(ಆಂಧ್ರ ಪ್ರದೇಶ)ನಲ್ಲಿ ಜನಿಸಿದರು. ಡಾ. ಪಿ. ಕೃಷ್ಣಯ್ಯ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಆಂಧ್ರ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಎಂ.ಎ ಮುಗಿಸಿದರು. [೨]
ವೃತ್ತಿ
[ಬದಲಾಯಿಸಿ]ಇವರು ನೆಲ್ಲೂರಿನಿಂದ ೧೧, ೧೨, ಮತ್ತು ೧೪ ನೇ ಲೋಕಸಭೆಗೆ ಮತ್ತು ಬಾಪಟ್ಲಾದಿಂದ ೧೫ ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರು ಯು.ಪಿ.ಎ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (೨೦೦೪-೨೦೦೯), ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಜವಳಿ ಸಚಿವಾಲಯ (೨೦೧೪) ರಾಜ್ಯ ಸಚಿವೆಯಾಗಿದ್ದರು . [೩]
ಇವರು ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ವೈ.ಎಸ್.ಆರ್.ಸಿ.ಪಿ.ಯ ಬಲ್ಲಿ ದುರ್ಗಾ ಪ್ರಸಾದ್ ರಾವ್ ವಿರುದ್ಧ ಟಿ.ಡಿ.ಪಿ ಯ ಅಭ್ಯರ್ಥಿಯಾಗಿ ತಿರುಪತಿಯಿಂದ ಸ್ಪರ್ಧಿಸಿ ವಿಫಲರಾದರು. [೪] ೨೦೨೧ ರಲ್ಲಿ, ಹಾಲಿ ಸಂಸದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರ ನಿಧನದ ನಂತರ ತೆರವಾಗಿರುವ ಅದೇ ತಿರುಪತಿ ಕ್ಷೇತ್ರದಿಂದ ಅವರು ಲೋಕಸಭಾ ಉಪಚುನಾವಣೆಯಲ್ಲಿ ವಿಫಲರಾದರು. [೫]
ಉಲ್ಲೇಖಗಳು
[ಬದಲಾಯಿಸಿ]- ↑ Samdani MN (Mar 14, 2019). "Panabaka Lakshmi in TDP: Congress leaders Panabaka Lakshmi, Harsha Kumar join TDP | Vijayawada News - Times of India". The Times of India (in ಇಂಗ್ಲಿಷ್). Retrieved 2021-04-20.
- ↑ "Detailed Profile: Smt. Lakshmi Panabaka". Archived from the original on 16 Jan 2019.
- ↑ "Minister of State". Ministry of Petroleum and Natural Gas. Archived from the original on 28 September 2013. Retrieved 17 September 2013.
- ↑ "Tirupati Election Results 2019: YSRCP's Balli Durga Prasad Rao has won with 228376 votes". www.timesnownews.com (in ಇಂಗ್ಲಿಷ್). Retrieved 2021-04-20.
- ↑ Murali, S. (2021-04-06). "Panabaka Lakshmi blames YSRCP, BJP for rise in prices of essential commodities". The Hindu (in Indian English). ISSN 0971-751X. Retrieved 2021-04-20.