ನಾಶವಾದ ಅರಬ್ಬರು
ಗೋಚರ
ನಾಶವಾದ ಅರಬ್ಬರು (ಅರಬ್ಬಿ: العرب البائدة) ― ಅರೇಬಿಯನ್ ಪರ್ಯಾಯ ದ್ವೀಪದ ಮೂಲ ನಿವಾಸಿಗಳು. ಇವರ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದ್, ಸಮೂದ್, ತಸ್ಮ್, ಜದೀಸ್, ಉಮೈಮ್, ಒಂದನೇ ಜುರ್ಹುಂ, ಇಮ್ಲಾಕ್, ಮುಂತಾದ ಬುಡಕಟ್ಟುಗಳು ಈ ವಿಭಾಗದಲ್ಲಿ ಒಳಪಡುತ್ತದೆ.[೧][೨] ಇವರು ಅತ್ಯಂತ ಪ್ರಾಚೀನ ಅರಬ್ಬರಾಗಿದ್ದು ಸಂಪೂರ್ಣ ನಾಶವಾಗಿ ಹೋಗಿದ್ದಾರೆ. ಇವರ ಕುರುಹುಗಳು ಮತ್ತು ಸ್ಮರಣೆಗಳ ಹೊರತು ಬೇರೇನೂ ಬಾಕಿಯಾಗಿಲ್ಲ.
- ಆದ್ ಬುಡಕಟ್ಟಿನವರು ಆದ್ ಬಿನ್ ಔಸ್ (Uz) ಬಿನ್ ಇರಮ್ (Aram) ಬಿನ್ ಸಾಮ್ (Sam) ಬಿನ್ ನೋಹ್ (Noah) ರ ಸಂತತಿಗಳು.
- ಸಮೂದ್ ಬುಡಕಟ್ಟಿನವರು ಸಮೂದ್ ಬಿನ್ ಗಾಸಿರ್ (Gether) ಬಿನ್ ಇರಮ್ (Aram) ಬಿನ್ ಸಾಮ್ (Sam) ಬಿನ್ ನೋಹ್ (Noah) ರ ಸಂತತಿಗಳು.
- ತಸ್ಮ್ ಬುಡಕಟ್ಟಿನವರು ತಸ್ಮ್ ಬಿನ್ ಲಾವಿಝ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.
- ಜದೀಸ್ ಬುಡಕಟ್ಟಿನವರು ಜದೀಸ್ ಬಿನ್ ಗಾಸಿರ್ ಬಿನ್ ಇರಮ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.
- ಉಮೈಮ್ ಬುಡಕಟ್ಟಿನವರು ಉಮೈಮ್ ಬಿನ್ ಲಾವಿಝ್ ಬಿನ್ ಶೇಮ್ ಬಿನ್ ನೋಹ್ ರ ಸಂತತಿಗಳು.