ವಿಷಯಕ್ಕೆ ಹೋಗು

ಅರವಿಂದ ಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರವಿಂದ್ ಕೃಷ್ಣ
Born
ನಾರಾಯಣ

ಶಿಡ್ಳಘಟ್ಟ ಅಂದಿನ ಕೋಲಾರ ಈಗೀನ ಚಿಕ್ಕಬಳ್ಳಾಪುರ
Nationalityಭಾರತೀಯ
Educationಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ, ಕಾನ್ಪುರ್ ಐ.ಐ.ಟಿ.ಯಿಂದ ಸ್ನಾತಕೋತ್ತರ ಪದವಿ.
Alma materಕಾನ್ಪುರ್ ಐ. ಐ. ಟಿ. ಎಮ್.ಎಸ್.ಸಿ.(೧೯೬೮)
Occupation'ಬೆಂಗಳೂರಿನ ಇನ್ಫೋಸಿಸ್ ಕಂಪೆನಿಯ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ',
Known forಮಾದರಿ ಮಾಹಿತಿ-ತಂತ್ರಜ್ಞಾನೋದ್ಯಮಿ ಹಾಗೂ ಆದರ್ಶ-ಭಾರತೀಯ, ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ.
Websitewww.infosys.com

ಅರವಿಂದ್ ಕೃಷ್ಣ ಅವರು ಐಬಿಎಂ ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿರುವ ಭಾರತೀಯ-ಅಮೆರಿಕನ್ ವ್ಯವಹಾರ ಕಾರ್ಯನಿರ್ವಾಹಕರಾಗಿದ್ದಾರೆ. ಅವರು ಏಪ್ರಿಲ್ ೨೦೨೦ ರಿಂದ ಐಬಿಎಂ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿ ಕಾರ್ಯಾವಹಿಸುತ್ತಿದ್ದಾರೆ ಮತ್ತು ಜನವರಿ ೨೦೨೧ ರಲ್ಲಿ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಂಡರು.[] ಕೃಷ್ಣ ಅವರು ೧೯೯೦ ರಲ್ಲಿ ಐಬಿಎಂ ನಲ್ಲಿ ಥಾಮಸ್ ಜೆ. ವ್ಯಾಟ್ಸನ್ ಸಂಶೋಧನಾ ಕೇಂದ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಐಬಿಎಂ ಕ್ಲೌಡ್, ಕಾಗ್ನಿಟಿವ್ ಸಾಫ್ಟ್‌ವೇರ್ ಮತ್ತು ಐಬಿಎಂ ಸಂಶೋಧನಾ ವಿಭಾಗಗಳನ್ನು ನಿರ್ವಹಿಸುವ ಮೂಲಕ ೨೦೧೫ ರಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಬಡ್ತಿ ಪಡೆದರು. ಅವರು ರೆಡ್ ಹೆಟ್ ಸ್ವಾಧೀನದ ಪ್ರಮುಖ ವಾಸ್ತುಶಿಲ್ಪಿಯಾಗಿದ್ದರು, ಇದು ಕಂಪನಿಯ ಇತಿಹಾಸದಲ್ಲಿ ಅತಿ ದೊಡ್ಡ ಸ್ವಾಧೀನವಾಗಿದೆ.

ಆರಂಭಿಕ ಜೀವನ

[ಬದಲಾಯಿಸಿ]

ಕೃಷ್ಣ ಅವರು ಭಾರತದ ಕರಾವಳಿ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ತೆಲುಗು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ಮೇಜರ್ ಜನರಲ್ ವಿನೋದ್ ಕೃಷ್ಣ, ಭಾರತೀಯ ಸೇನೆಗಾಗಿ ಕೆಲಸ ಮಾಡಿದ ಸೇನಾ ಅಧಿಕಾರಿ ಮತ್ತು ಅವರ ತಾಯಿ, ಆರತಿ ಕೃಷ್ಣ, ಸೇನಾ ವಿಧವೆಯರ ಕಲ್ಯಾಣಕ್ಕಾಗಿ ಕೆಲಸ ಮಾಡಿದರು.

ಶಿಕ್ಷಣ

[ಬದಲಾಯಿಸಿ]

ಕೃಷ್ಣಅವರು ತಮಿಳುನಾಡಿನ ಕಣ್ಣುರನ ಸ್ಟೇನ್ಸ್ ಆಂಗ್ಲೋ ಇಂಡಿಯನ್ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಮತ್ತು ಡೆಹ್ರಾಡೂನ್‌ನ ಸೇಂಟ್ ಜೋಸೆಫ್ಸ್ ಅಕಾಡೆಮಿಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ೧೯೮೫ರಲ್ಲಿ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದರು . ಅವರು ತರುವಾಯ ೧೯೯೧ ರಲ್ಲಿ ಅರ್ಬಾನಾ-ಚಾಂಪೇನ್‌ನಲ್ಲಿರುವ ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಗಳಿಸಲು ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದರು. ಅವರು ಐಐಟಿ ಕಾನ್ಪುರ್ ಮತ್ತು ಇಲಿನಾಯ್ಸ್ ಅರ್ಬಾನಾ-ಚಾಂಪೇನ್ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಗಳ ಪ್ರಶಸ್ತಿಗಳನ್ನು ಪಡೆದಿದ್ದಾರೆ.[]

ವೃತ್ತಿಪರ ಜೀವನ

[ಬದಲಾಯಿಸಿ]

ಕೃಷ್ಣ ೧೯೯೦ ರಲ್ಲಿ ಐ.ಬಿ.ಎಂ ಗೆ ಸೇರಿದರು, ಐ.ಬಿ.ಎಂ ನ ಥಾಮಸ್ ಜೆ. ವ್ಯಾಟ್ಸನ್ ಸಂಶೋಧನಾ ಕೇಂದ್ರದಲ್ಲಿ, ಮತ್ತು ೨೦೦೯ ರವರೆಗೆ ೧೮ ವರ್ಷಗಳ ಕಾಲ ವ್ಯಾಟ್ಸನ್ ಸಂಶೋಧನೆಯಲ್ಲಿ ಮುಂದುವರೆದರು. ಮುಂದೆ ಅವರು ಐ.ಬಿ.ಎಂ ನ ಮಾಹಿತಿ ನಿರ್ವಹಣೆ ಸಾಫ್ಟ್‌ವೇರ್ ಮತ್ತು ಸಿಸ್ಟಮ್ಸ್ ಮತ್ತು ತಂತ್ರಜ್ಞಾನ ಗುಂಪಿನಲ್ಲಿ ಜನರಲ್ ಮ್ಯಾನೇಜರ್ ಪಾತ್ರವನ್ನು ನಿರ್ವಹಿಸಿದರು. ೨೦೧೫ ರಲ್ಲಿ, ಅವರು ಐ.ಬಿ.ಎಂ ರಿಸರ್ಚ್‌ನ ಹಿರಿಯ ಉಪಾಧ್ಯಕ್ಷರಾಗಿ ಬಡ್ತಿ ಪಡೆದರು. ನಂತರ ಅವರು ಐ.ಬಿ.ಎಂನ ಕ್ಲೌಡ್ ಮತ್ತು ಕಾಗ್ನಿಟಿವ್ ಸಾಫ್ಟ್‌ವೇರ್ ವಿಭಾಗದ ಹಿರಿಯ ಉಪಾಧ್ಯಕ್ಷರಾದರು.‌

ಅವರು ಕೃತಕ ಬುದ್ಧಿಮತ್ತೆ (ಆರ್ಟಿಫಿಶಲಗ ಇಂಟಲಿಜೆಂನ್ಸ), ಕ್ಲೌಡ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಐ.ಬಿ.ಎಂ ಗಾಗಿ ಹೊಸ ಮಾರುಕಟ್ಟೆಗಳ ನಿರ್ಮಾಣ ಮತ್ತು ವಿಸ್ತರಣೆಗೆ ಕಾರಣರಾದರು. ಜುಲೈ ೨೦೧೯ ರಲ್ಲಿ ಮುಚ್ಚಲ್ಪಟ್ಟ ರೆಡ ಹ್ಯಾಟ ನ ಐ.ಬಿ.ಎಂ ನ $೩೪ ಶತಕೋಟಿ ಸ್ವಾಧೀನದ ಹಿಂದೆ ಅವರು ಪ್ರೇರಕ ಶಕ್ತಿಯಾಗಿದ್ದರು.[]

ಅವರು ಜನವರಿ ೨೦೨೦ ರಲ್ಲಿ ಐ.ಬಿ.ಎಂ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿ.ಇ.ಒ) ಆಗಿ ನೇಮಕಗೊಂಡರು, ಇದು ಏಪ್ರಿಲ್ ೬, ೨೦೨೦ ರಿಂದ ಜಾರಿಗೆ ಬರಲು, ೨೦೧೨ ರಿಂದ ಸಿ.ಇ.ಒ ಆಗಿ ಸೇವೆ ಸಲ್ಲಿಸಿದ ಗಿನ್ನಿ ರೊಮೆಟ್ಟಿ ಅವರ ಉತ್ತರಾಧಿಕಾರಿಯಾದರು.[] ಅವರು ಸತ್ಯ ನಾಡೆಲ್ಲಾ, ಶಾಂತನು ನಾರಾಯಣ್ ಮತ್ತು ಸುಂದರ್ ಪಿಚೈ ಅವರನ್ನು ಪ್ರಮುಖ ಯುನೈಟೆಡ್ ಸ್ಟೇಟ್ಸ್ ತಂತ್ರಜ್ಞಾನ ಕಂಪನಿಯ ಭಾರತೀಯ-ಅಮೇರಿಕನ್ ಸಿ.ಇ.ಒ ಆಗಿ ಸೇರಿಕೊಂಡರು.[][] ೨೦೨೧ ರಲ್ಲಿ, ಅವರನ್ನು ಸಿ‌ ಅರ್‌ ಎನ್ ವರ್ಷದ "ಅತ್ಯಂತ ಪ್ರಭಾವಶಾಲಿ ಕಾರ್ಯನಿರ್ವಾಹಕ" ಎಂದು ಹೆಸರಿಸಿತು.[]

ಸಂಶೋಧನೆ

[ಬದಲಾಯಿಸಿ]

ಅವರು ಹತ್ತಾರು ಪೇಟೆಂಟ್‌ಗಳಲ್ಲಿ ಸಹ-ಲೇಖಕರಾಗಿದ್ದಾರೆ, ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಮತ್ತು ಅಸೋಸಿಯೇಷನ್ ಫಾರ್ ಕಂಪ್ಯೂಟಿಂಗ್ ಮೆಷಿನರಿ ಜರ್ನಲ್‌ಗಳ ಸಂಪಾದಕರಾಗಿದ್ದಾರೆ ಮತ್ತು ತಾಂತ್ರಿಕ ನಿಯತಕಾಲಿಕಗಳಲ್ಲಿ ವ್ಯಾಪಕವಾಗಿ ಪ್ರಕಟಿಸಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2023-01-07. Retrieved 2023-01-07.
  2. https://www.prajavani.net/technology/technology-news/indian-origin-arvind-krishna-named-ibm-ceo-701976.html
  3. https://www.analyticsinsight.net/the-ibm-red-hat-acquisition-what-it-means-for-cloud-computing-and-beyond/
  4. https://kannada.asianetnews.com/technology/indian-origin-arvind-krishna-new-ceo-of-ibm-company-q4zcpo
  5. https://vijaykarnataka.com/business/news/indian-aravind-krishna-is-new-chief-for-ibm/articleshow/73810610.cms
  6. ೬.೦ ೬.೧ https://news13.in/archives/202381
  7. https://grainger.illinois.edu/alumni/distinguished/9575