ಕೆ. ವಿಜಯರಾಘವನ್
ಕೃಷ್ಣಸ್ವಾಮಿ ವಿಜಯರಾಘವನ್ | |||||||||||
---|---|---|---|---|---|---|---|---|---|---|---|
3ನೇ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ
| |||||||||||
ಅಧಿಕಾರ ಅವಧಿ ಏಪ್ರಿಲ್ ೨೦೧೮ – ಏಪ್ರಿಲ್ ೨,೨೦೨೨ | |||||||||||
ರಾಷ್ಟ್ರಪತಿ | ರಾಮ್ ನಾಥ್ ಕೋವಿಂದ್ | ||||||||||
ಪ್ರಧಾನ ಮಂತ್ರಿ | ನರೇಂದ್ರ ಮೋದಿ | ||||||||||
ಪೂರ್ವಾಧಿಕಾರಿ | ರಾಜಗೋಪಾಲ ಚಿದಂಬರಂ | ||||||||||
ಉತ್ತರಾಧಿಕಾರಿ | ಅಜಯ್ ಕೆ. ಸೂದ್ | ||||||||||
ವೈಯಕ್ತಿಕ ಮಾಹಿತಿ | |||||||||||
ಜನನ | ೩ ಫೆಬ್ರವರಿ ೧೯೫೪ [ವಯಸ್ಸು ೬೮] | ||||||||||
ರಾಷ್ಟ್ರೀಯತೆ | ಭಾರತ
|
ಡಾ. ಕೃಷ್ಣಸ್ವಾಮಿ ವಿಜಯರಾಘವನ್ ಎಫ್‌ಆರ್‌ಎಸ್ [೧] (ಜನನ ೩ ಫೆಬ್ರವರಿ ೧೯೫೪) ಅವರು ಗೌರವಾನ್ವಿತ ಪ್ರಾಧ್ಯಾಪಕ ಮತ್ತು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ಮಾಜಿ ನಿರ್ದೇಶಕರು. [೨] ೨೬ ಮಾರ್ಚ್ ೨೦೧೮ ರಂದು, ಭಾರತ ಸರ್ಕಾರವು ವಿಜಯರಾಘವನ್ ಅವರನ್ನು ''ಡಾ. ಆರ್ ಚಿದಂಬರಂ'' ಅವರ ಉತ್ತರಾಧಿಕಾರಿಯಾಗಿ ಹಾಗು ಪ್ರಧಾನ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಿತು. ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ ಅವರ ಅವಧಿಯು ಏಪ್ರಿಲ್ ೨, ೨೦೨೨ ರಂದು ಕೊನೆಗೊಂಡಿತು. ೨೦೧೨ ರಲ್ಲಿ, ಅವರು ''ರಾಯಲ್ ಸೊಸೈಟಿಯ ಫೆಲೋ'' ಆಗಿ ಆಯ್ಕೆಯಾದರು ಮತ್ತು ಏಪ್ರಿಲ್ ೨೦೧೪ ರಲ್ಲಿ ಅವರು ''US ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ'' ವಿದೇಶಿ ಸಹವರ್ತಿಯಾಗಿ ಆಯ್ಕೆಯಾದರು. [೩] ವಿಜಯರಾಘವನ್ ಅವರು ೨೬ ಜನವರಿ ೨೦೧೩ ರಂದು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಹಾಗು ೨೦೦೯ ರಲ್ಲಿ ಜೀವ ವಿಜ್ಞಾನ ವಿಭಾಗದಲ್ಲಿ ''ಇನ್ಫೋಸಿಸ್ ಪ್ರಶಸ್ತಿಯನ್ನು'' ಸಹ ಪಡೆದಿದ್ದಾರೆ [೪] [೫]
ಹಿನ್ನೆಲೆ
[ಬದಲಾಯಿಸಿ]ವಿಜಯರಾಘವನ್ ಅವರು ೧೯೭೫ ರಲ್ಲಿ ಐಐಟಿ ಕಾನ್ಪುರದಿಂದ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿಯನ್ನು ಪಡೆದರು. ೧೯೭೭ ರಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ೧೯೮೩ ರಲ್ಲಿ ಆಣ್ವಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ತಮ್ಮ ಡಾಕ್ಟರೇಟ್ ಸಂಶೋಧನೆಯನ್ನು ಪೂರ್ಣಗೊಳಿಸಿದರು. ಮತ್ತು ''ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನಿಂದ'' ಪಿಎಚ್‌ಡಿ ಪದವಿ ಪಡೆದಿದ್ದಾರೆ. ಅವರ ಡಾಕ್ಟರೇಟ್ ನಂತರದ ಕೆಲಸದ ಸಮಯದಲ್ಲಿ, ೧೯೮೪ ರಿಂದ ೧೯೮೫ ರವರೆಗೆ, ಅವರು ಸಂಶೋಧನಾ ಸಹೋದ್ಯೋಗಿಯಾಗಿದ್ದರು. ನಂತರ, ೧೯೮೬ ರಿಂದ ೧೯೮೮, ರವರೆಗೆ ''ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ'' ಹಿರಿಯ ಸಂಶೋಧನಾ ಸಹೋದ್ಯೋಗಿಯಾಗಿದ್ದರು.[ಸಾಕ್ಷ್ಯಾಧಾರ ಬೇಕಾಗಿದೆ]
ವೃತ್ತಿ
[ಬದಲಾಯಿಸಿ]ವಿಜಯರಾಘವನ್ ರವರು ೧೯೮೮ ರಲ್ಲಿ, ''ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ಗೆ'' ರೀಡರ್ ಆಗಿ ನೇಮಕಗೊಂಡರು. ೧೯೯೨ ರಲ್ಲಿ, ''ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ'' ಅಧೀನದಲ್ಲಿರುವ ''ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (ಎನ್‌ಸಿಬಿಎಸ್)'' ಸ್ಥಾಪನೆಯಾದಾಗ ಎನ್‌ಸಿಬಿಎಸ್ ಸೇರಿದರು. ಆಗಸ್ಟ್ ೧೯೯೧ ರಲ್ಲಿ, ಅವರು ಬೆಂಗಳೂರಿಗೆ ತೆರಳಿದರು ಮತ್ತು ಬೆಂಗಳೂರಿನಲ್ಲಿರುವ NCBS ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. [೬] ಅವರು ಡೆವಲಪ್‌ಮೆಂಟಲ್ ಜೆನೆಟಿಕ್ಸ್ ಕ್ಷೇತ್ರದಲ್ಲಿ ಎಮೆರಿಟಸ್ ಪ್ರೊಫೆಸರ್ ಆಗಿದ್ದಾರೆ. ಮತ್ತು ನ್ಯಾಷನಲ್ ಸೆಂಟರ್ ಆಫ್ ಬಯೋಲಾಜಿಕಲ್ ಸೈನ್ಸಸ್‌ನ ಮಾಜಿ ನಿರ್ದೇಶಕರಾಗಿದ್ದಾರೆ.
ಅವರ ವಿಶೇಷತೆಯ ಕ್ಷೇತ್ರಗಳು ಅಭಿವೃದ್ಧಿಯ ಜೀವಶಾಸ್ತ್ರ, ತಳಿಶಾಸ್ತ್ರ ಮತ್ತು ನ್ಯೂರೋಜೆನೆಟಿಕ್ಸ್ . ಅವರ ಸಂಶೋಧನೆಯು ಪ್ರಾಥಮಿಕವಾಗಿ ಅಭಿವೃದ್ಧಿಯ ಅವಧಿಯಲ್ಲಿ ನರಮಂಡಲ ಮತ್ತು ಸ್ನಾಯುಗಳನ್ನು ನಿಯಂತ್ರಿಸುವ ಪ್ರಮುಖ ತತ್ವಗಳು ಮತ್ತು ಕಾರ್ಯವಿಧಾನಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ನರಸ್ನಾಯುಕ ವ್ಯವಸ್ಥೆಗಳು ನಿರ್ದಿಷ್ಟ ಲೊಕೊಮೊಟರ್ ನಡವಳಿಕೆಗಳನ್ನು ಹೇಗೆ ನಿರ್ದೇಶಿಸುತ್ತವೆ ಎ೦ದು ಸಂಶೋಧನೆ ಮಾಡಿದ್ದಾರೆ. ಇದನ್ನು ಸಾದಿಸಲು ಹಣ್ಣು ನೊಣ, ''ಡ್ರೊಸೊಫಿಲಾ ಮೆಲನೊಗ್ಯಾಸ್ಟರ್'' ಅನ್ನು ಮಾದರಿ ವ್ಯವಸ್ಥೆಯಾಗಿ ಬಳಸಿಕೊಂಡಿದ್ದಾರೆ. ಫ್ಲೈ ಬಾಡಿ ಪ್ಲಾನ್‌ನ ಸೆಗ್ಮೆಂಟಲ್ ಸಂಘಟನೆಯನ್ನು ರೂಪಿಸುವ ಮೂಲಕ, ಅವರ ಸಂಶೋಧನೆಯು ನರಸ್ನಾಯುಕ ಸಂಪರ್ಕ ಮತ್ತು ಮೋಟಾರು ನಡವಳಿಕೆಗಳನ್ನು ನಿರ್ದೇಶಿಸುವಲ್ಲಿ ಹಾಕ್ಸ್ ಜೀನ್‌ಗಳ ಕಾರ್ಯಗಳ ಮೇಲೆ ಹೆಚ್ಚು ಬೆಳಕು ಚೆಲ್ಲಲು ಸಾಧ್ಯವಾಗಿದೆ.
ವಿಜಯರಾಘವನ್ ಅವರು ''ಓಕಿನಾವಾ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ'' ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. [೭] ಹಾಗು eLife ಜರ್ನಲ್‌ನ ಹಿರಿಯ ಸಂಪಾದಕರಾಗಿದ್ದಾರೆ. [೮] ವಿಜಯರಾಘವನ್ ಅವರು ಜನವರಿ ೨೦೧೩ ರಿಂದ ೨೦೧೮ ರವಾರೆಗು, ಭಾರತದ ''ಮಹಾರಾಜ್ ಕಿಶನ್ ಭಾನ್'' ಅವರ ಸ್ಥಾನಕ್ಕೆ ಬಯೋಟೆಕ್ನಾಲಜಿ ಇಲಾಖೆಗೆ (DBT), ಭಾರತದ ಕಾರ್ಯದರ್ಶಿ [೯] ಆಗಿದ್ದರು.
ಗೌರವಗಳು ಮತ್ತು ಸಾಧನೆಗಳು
[ಬದಲಾಯಿಸಿ]೧೯೯೭ ರಲ್ಲಿ, ಅವರು ಅಫ಼್ ಇ೦ಡಿಯನ್ ಅಕಡೇಮಿ ಅಫ಼್ ವಿಜ್ಞಾನದಲ್ಲಿ ಫ಼ೆಲ್ಲೊಅಗಿ ಆಯ್ಕೆಯಾದರು. [೧೦]
೧೯೯೮ ರಲ್ಲಿ, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ನಿಂದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಭಟ್ನಾಗರ್ ಪ್ರಶಸ್ತಿ ಲಭಿಸಿತು . [೧೧] ೧೯೯೯ ರಲ್ಲಿ, ಅವರು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್‌ನ ಗೌರವ ಅಧ್ಯಾಪಕ ಸದಸ್ಯರಾದರು. ಅದೇ ವರ್ಷದಲ್ಲಿ, ಅವರು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸಹವರ್ತಿಯಾದರು. ಅವರು ೨೦೦೦ ರಲ್ಲಿ ಜರ್ನಲ್ ಆಫ್ ಜೆನೆಟಿಕ್ಸ್‌ನ ಸಂಪಾದಕೀಯ ಮಂಡಳಿಯ ಸದಸ್ಯರಾದರು ಮತ್ತು ೨೦೦೧ [೧೨] ಏಷ್ಯಾ-ಪೆಸಿಫಿಕ್ ಇಂಟರ್ನ್ಯಾಷನಲ್ ಮಾಲಿಕ್ಯುಲರ್ ಬಯಾಲಜಿ ನೆಟ್‌ವರ್ಕ್‌ನ ಸದಸ್ಯರಾದರು.
೨೦೦೩ ರಲ್ಲಿ, ಅವರು ಐಐಟಿ ಕಾನ್ಪುರದ ಡಿಸ್ಟಿಂಗ್ವಿಶ್ಡ್ ಅಲುಮ್ನಸ್ ಪ್ರಶಸ್ತಿಯನ್ನು ಪಡೆದರು. [೧೩]
೨೦೦೬ ರಲ್ಲಿ, ಅವರಿಗೆ JCBose ಫೆಲೋಶಿಪ್ ನೀಡಲಾಯಿತು. [೧೪]
೨೦೧೦ ರಲ್ಲಿ, ಅವರು ಅಭಿವೃದ್ಧಿಶೀಲ ಪ್ರಪಂಚದ ಅಕಾಡೆಮಿ ಆಫ್ ಸೈನ್ಸಸ್‌ನ TWAS ನ ಫೆಲೋ ಆಗಿ ಆಯ್ಕೆಯಾದರು. [೧೫]
೨೦೧೨ ರಲ್ಲಿ, ಅವರು "ಜೀವ ವಿಜ್ಞಾನ ಕ್ಷೇತ್ರಕ್ಕೆ, ವಿಶೇಷವಾಗಿ ಅಭಿವೃದ್ಧಿಶೀಲ ಜೀವಶಾಸ್ತ್ರ, ತಳಿಶಾಸ್ತ್ರ ಮತ್ತು ನ್ಯೂರೋಜೆನೆಟಿಕ್ಸ್‌ಗೆ ಅವರ ಮೂಲ ಕೊಡುಗೆಗಳಿಗಾಗಿ" HK ಫಿರೋಡಿಯಾ ಪ್ರಶಸ್ತಿಯನ್ನು ಪಡೆದರು. [೧೬] ಅದೇ ವರ್ಷದಲ್ಲಿ ಅವರು ರಾಯಲ್ ಸೊಸೈಟಿಯ ಫೆಲೋ ಆದರು.
೨೦೧೩ ರಲ್ಲಿ, ಅವರು ಭಾರತದ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. [೧೭]
ಏಪ್ರಿಲ್ ೨೦೧೪ ರಲ್ಲಿ, ಅವರು US ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ವಿದೇಶಿ ಸಹವರ್ತಿಯಾಗಿ [೧೮] ಆಯ್ಕೆಯಾದರು.
ಮಾರ್ಚ್ ೨೦೧೮ ರಲ್ಲಿ, ಅವರು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ [೧೯] ನೇಮಕಗೊಂಡರು.
೨೦೨೧ ರಲ್ಲಿ ಅವರು ಅಮೇರಿಕನ್ ಫಿಲಾಸಫಿಕಲ್ ಸೊಸೈಟಿಗೆ ಆಯ್ಕೆಯಾದರು. [೨೦]
ಉಲ್ಲೇಖಗಳು
[ಬದಲಾಯಿಸಿ]- ↑ Professor Krishnaswamy VijayRaghavan FRS. Royal Society. Retrieved on 1 October 2019.
- ↑ "Management and Administration of NCBS".
- ↑ "April 29, 2014: NAS Members and Foreign Associates Elected". 2015-08-18. Archived from the original on 2015-08-18. Retrieved 2020-05-28.
- ↑ "List of Padma Awardees – NDTV". Retrieved 26 January 2013.
- ↑ "Infosys Prize laureate in life sciences in 2009 – Prof. K. VijayRaghavan". Archived from the original on 20 April 2011. Retrieved 17 January 2012.
- ↑ "History of National Centre of Biological Sciences". Retrieved 18 January 2012.
- ↑ Board of Governors | Okinawa Institute of Science and Technology Graduate University OIST. Oist.jp. Retrieved on 8 October 2013.
- ↑ K Vijay Raghavan, Senior editor – Genetics & genomics Archived 4 March 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. elifesciences.org
- ↑ "Secretary, Department of Biotechnology (DBT, India)". Archived from the original on 2020-11-29. Retrieved 2022-07-28.
- ↑ "Fellow Profile of Prof. Krishnaswamy VijayRaghavan". Retrieved 18 January 2012.
- ↑ "Recipients of S. S. Bhatnagar Award in biological sciences". Archived from the original on 10 February 2012. Retrieved 19 January 2012.
- ↑ "Recipients of Prizes, Travelships, Scholarships (April'99-March'01) in NCBS". Archived from the original on 13 January 2012. Retrieved 19 January 2012.
- ↑ "Distinguished Alumnus Award of IIT Kanpur". Archived from the original on 27 September 2011. Retrieved 19 January 2012.
- ↑ "Research Fellowships granted under the Research & Development Support (SERC) scheme during 2006–07" (PDF). Archived from the original (PDF) on 30 November 2011.
- ↑ "News- K. VijayRaghavan elected Fellow of TWAS". International Centre for Theoretical Sciences. 20 October 2010.
- ↑ "H K Firodia award for scientists Ramakrishnan and Raghavan". The Times of India. 30 August 2012. Archived from the original on 26 January 2013.
- ↑ "Padma Awards" (PDF). Ministry of Home Affairs, Government of India. 2015. Archived from the original (PDF) on 15 October 2015. Retrieved 21 July 2015.
- ↑ "Archived copy". Archived from the original on 18 August 2015. Retrieved 2016-12-31.
{{cite web}}
: CS1 maint: archived copy as title (link) - ↑ "ಆರ್ಕೈವ್ ನಕಲು". Archived from the original on 2013-11-09. Retrieved 2022-07-28.
- ↑ "The American Philosophical Society Welcomes New Members for 2021".