ವಿಷಯಕ್ಕೆ ಹೋಗು

ಸದಸ್ಯ:Praajna G/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಚನಗಳು

ಸತ್ಯಕ್ಕನ ವಚನಗಳು

[ಬದಲಾಯಿಸಿ]

ಸತ್ಯಕ್ಕ ೧೨ನೆಯ ಶತಮಾನದ ಶಿವಶರಣೆಯರಲ್ಲಿ ಒಬ್ಬಳು. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹೀರೆಜಂಬೂರು ಸತ್ಯಕ್ಕನ ಜನ್ಮಸ್ಥಳ. ಶಿವಭಕ್ತರ ಮನೆಯಂಗಳದ ಕಸ ಗುಡಿಸುತ್ತಾ ಶಿವಭಕ್ತಿಯನ್ನು ಆಚರಿಸುವುದು ಇವರ ಕಾಯಕವಾಗಿತ್ತು. "ಶಿವನಲ್ಲದೆ ಅನ್ಯ ದೈವವ ಪೂಜಿಸೆ; ಶಿವ ಶಬ್ದವಲ್ಲದೆ ಅನ್ಯ ದೈವದ ಶಬ್ದವ ಕೇಳೆ" ಎಂಬುದು ಅವರ ಪ್ರತಿಜ್ಞೆಯಾಗಿದೆ. ಸತ್ಯಕ್ಕನ ವಚನಗಳ ಅಂಕಿತನಾಮ "ಶಂಭುಜಕೇಶ್ವರ". ಇವರ ೨೭ ವಚನಗಳು ದೊರಕಿವೆ.


ಮುಕ್ತಾಯಕ್ಕ

[ಬದಲಾಯಿಸಿ]

ಮುಕ್ತಾಯಕ್ಕ ೧೨ನೆಯ ಶತಮಾನದಲ್ಲಿದ್ದ ಒಬ್ಬ ಶಿವಶರಣೆ. ಲಕ್ಕುಂಡಿ ಇವರ ಜನ್ಮಸ್ಥಳ. ಇವರ ಅಂಕಿತನಾಮ "ಅಜಗಣ್ಣ". ಅಜಗಣ್ಣ ಅಂಕಿತವಿರುವ ಇವರ ೩೭ ವಚನಗಳು ದೊರೆತಿವೆ. ಆಧ್ಯಾತ್ಮ ಸಾಧನೆಯ ಗುಪ್ತಭಕ್ತ ಅಜಗಣ್ಣನು ಮುಕ್ತಾಯಕ್ಕನ ಸಹೋದರ ಮತ್ತು ಗುರು. ಇವರಿಬ್ಬರ ಅನುಭಾವಿ ನಿಲುವಿಗೆ ಸಂಬಂಧಿಸಿದಂತೆ ಸೂಕ್ಶ್ಮ ಪದರಗಳನ್ನು ಬಿಡಿಸಿ ತೋರುವ ವಚನಗಳಿವು.ಶಿವಭಕ್ತನಿಗೆ ನಡೆನುಡಿಗಳು ಬಹಳ ಮುಖ್ಯ,ನಡೆನುಡಿಗಳ ಪರಿಶುದ್ಧತೆಯೇ ನಿಜವಾದ ವ್ರತ. ಇದು ಮಹಾಜ್ಞಾನ ಸಂಪಾದನೆಯ ಮಾರ್ಗ ಎಂಬುದನ್ನು ತಮ್ಮ ವಚನದಲ್ಲಿ ವ್ಯಕ್ತಪಡಿಸಿದ್ದಾರೆ.


[] []

ಉಲೇಖ

  1. https://www.udayavani.com/homepage-karnataka-edition/topnews-karnataka-edition/martial-environment-love-against-the-use-of-plastic
  2. ಬಸವಣ್ಣನ ವಚನಗಳು