ಒಪ್ಪಂದ (ಚಲನಚಿತ್ರ)
ಒಪ್ಪಂದ | |
---|---|
ನಿರ್ದೇಶನ | ಎಸ್. ಎಸ್. ಸಮೀರ್ |
ನಿರ್ಮಾಪಕ | ಫರೀನ್ ಫಾತಿಮಾ |
ಲೇಖಕ | ಎಸ್. ಎಸ್. ಸಮೀರ್ |
ಕಥೆ | ಎಸ್. ಎಸ್. ಸಮೀರ್ |
ಪಾತ್ರವರ್ಗ | ಅರ್ಜುನ್ ಸರ್ಜಾ , ರಾಧಿಕಾ ಕುಮಾರಸ್ವಾಮಿ , ಜೆ. ಡಿ. ಚಕ್ರವರ್ತಿ |
ಸಂಗೀತ | ಸುಭಾಷ್ ಆನಂದ್ |
ಛಾಯಾಗ್ರಹಣ | ಅಮ್ಮ ರಾಜಶೇಖರ್ |
ಸಂಕಲನ | ಪ್ರಭು |
ಸ್ಟುಡಿಯೋ | ಎಫ್. ಎಸ್. ಎಂಟರ್‌ಟೇನ್‍ಮೆಂಟ್ಸ್ |
ಬಿಡುಗಡೆಯಾಗಿದ್ದು | 2022 ರ ಫೆಬ್ರುವರಿ 11 |
ಅವಧಿ | 153 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಒಪ್ಪಂದ 2022 ರ ಕನ್ನಡ ರೋಮ್ಯಾಂಟಿಕ್-ಕ್ರೈಮ್ - ಆಕ್ಷನ್ ಚಲನಚಿತ್ರವಾಗಿದ್ದು, ಎಸ್.ಎಸ್. ಸಮೀರ್ ಬರೆದು ನಿರ್ದೇಶಿಸಿದ್ದಾರೆ, ಇದು ಅವರ ಮೊದಲ ಚಿತ್ರವಾಗಿದೆ. ಇದು ಅರ್ಜುನ್ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ[೧][೨] ಜೊತೆಗೆ ಜೆ.ಡಿ. ಚಕ್ರವರ್ತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೋಷಕ ಪಾತ್ರದಲ್ಲಿ ಸೋನಿ ಚರಿಸ್ತಾ ಮತ್ತು ಬಾಲಿವುಡ್ ನಟ ಫೈಸಲ್ ಖಾನ್ ಅವರು ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಚಿತ್ರಕ್ಕೆ ಸಂಗೀತಸಂಯೋಜನೆಯನ್ನು ಸುಭಾಷ್ ಆನಂದ್ ಮತ್ತು ಛಾಯಾಗ್ರಹಣವನ್ನು ಅಮ್ಮ ರಾಜಶೇಖರ್ ಮತ್ತು ಸಂಕಲನವನ್ನು ಪ್ರಭು ಮಾಡಿದ್ದಾರೆ.[೩] ಈ ಚಿತ್ರವನ್ನು ತಮಿಳಿನಲ್ಲಿ ಇರುವರ್ ಒಪ್ಪಂತಂ ಮತ್ತು ತೆಲುಗಿನಲ್ಲಿ ಇದ್ದರು ಎಂದು ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. [೪]
ಪಾತ್ರವರ್ಗ
[ಬದಲಾಯಿಸಿ]- ಸಂಜಯ್ ರಂಗಸ್ವಾಮಿ ಪಾತ್ರದಲ್ಲಿ ಅರ್ಜುನ್ ಸರ್ಜಾ
- ರಾಧಿಕಾ ಕುಮಾರಸ್ವಾಮಿ [೫] ಅಂಜಲಿಯಾಗಿ
- ಚಕ್ರಿಯಾಗಿ ಜೆಡಿ ಚಕ್ರವರ್ತಿ
- ರಂಗಸ್ವಾಮಿಯಾಗಿ ಕೆ.ವಿಶ್ವನಾಥ್
- ಎಸ್ ಎಸ್ ಸಮೀರ್
- ಫೈಸಲ್ ಖಾನ್
- ಸೋನಿ ಚರಿಸ್ಟಾ
ನಿರ್ಮಾಣ ಮತ್ತು ಬಿಡುಗಡೆ
[ಬದಲಾಯಿಸಿ]ಈ ಚಿತ್ರವನ್ನು ಮೇ 2017 ರಲ್ಲಿ ಕಾಂಟ್ರ್ಯಾಕ್ಟ್ ಶೀರ್ಷಿಕೆಯಡಿಯಲ್ಲಿ ಘೋಷಿಸಲಾಯಿತು. ಚಿತ್ರೀಕರಣವು ಸೆಪ್ಟೆಂಬರ್ 2017 ರ ಸುಮಾರಿಗೆ ಪ್ರಾರಂಭವಾಯಿತು. [೬] ಮಾರ್ಚ್ 2018 [೭] ಹೊತ್ತಿಗೆ ಸಾಂಕ್ರಾಮಿಕ ರೋಗದ ಮೊದಲು ಚಲನಚಿತ್ರವನ್ನು ಮುಗಿಸಲಾಯಿತು. ಈ ಚಿತ್ರದಲ್ಲಿ ಮೊದಲು ಅರ್ಜುನ್ ಸರ್ಜಾ ನಾಯಕನಾಗಿ ನಟಿಸಿದ್ದರು. [೮] [೯] ನಂತರ ರಾಧಿಕಾ ಕುಮಾರಸ್ವಾಮಿ ಅವರನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಲಾಯಿತು. [೧೦] ನಂತರ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರವನ್ನು ನಿರ್ವಹಿಸಲು JD ಚಕ್ರವರ್ತಿಯನ್ನು ತೆಗೆದುಕೊಂಡರು. ಬೆಂಗಳೂರು, ಮೈಸೂರು, ಹೈದರಾಬಾದ್ ಮತ್ತು ಬ್ಯಾಂಕಾಕ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರದ 1ನೇ ಟ್ರೈಲರ್ ಅನ್ನು 9ನೇ ಏಪ್ರಿಲ್ 2021 ರಂದು ಬಿಡುಗಡೆ ಮಾಡಲಾಯಿತು ಮತ್ತು ಎರಡನೇ ಟ್ರೈಲರ್ ಅನ್ನು 15ನೇ ಅಕ್ಟೋಬರ್ 2021 ರಂದು ಬಿಡುಗಡೆ ಮಾಡಲಾಯಿತು [೧೧] [೧೨] ಚಲನಚಿತ್ರದ ಬಿಡುಗಡೆಯು ಹಲವಾರು ಬಾರಿ ವಿಳಂಬವಾಯಿತು [೧೩] ಕೊನೆಗೆ ಚಲನಚಿತ್ರವು 11 ಫೆಬ್ರವರಿ 2022 ರಂದು ಬಿಡುಗಡೆಯಾಯಿತು. [೧೪] [೧೫] ಚಿತ್ರದ ಶೀರ್ಷಿಕೆಯಲ್ಲಿ ಕಾಂಟ್ರ್ಯಾಕ್ಟ್ ದಿಂದ ಒಪ್ಪಂದ ಎಂದು ಬದಲಾವಣೆ ಮಾಡಲಾಗಿದೆ. [೧೬]
ಧ್ವನಿಮುದ್ರಿಕೆ
[ಬದಲಾಯಿಸಿ]ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿಮುದ್ರಿಕೆಯ ಸಂಗೀತವನ್ನು ಸುಭಾಷ್ ಆನಂದ್ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಎಫ್ ಸಿರೀಸ್ ಆಡಿಯೋ ಪಡೆದುಕೊಂಡಿದೆ.
ಹಾಡುಗಳ ಪಟ್ಟಿ | ||
---|---|---|
ಸಂ. | ಹಾಡು | ಸಮಯ |
1. | "ಸೂರ್ಯ ಒಬ್ಬನೇ" | |
2. | "ಏನೊಂಥರ ಕನಸು" | |
3. | "ಚಲ್ ಸಾಥ್ ಸಾಥ್" | |
4. | "ಮನಸಿನ ಪುಟ ಪುಟ" | |
5. | "ಕಂಡು ಕೇಳದ" | |
6. | "ಗುಂಡಿಗೆ ಇರುವ ಗಂಡೇ" | |
ಒಟ್ಟು ಸಮಯ: | 27:41 |
ಉಲ್ಲೇಖಗಳು
[ಬದಲಾಯಿಸಿ]- ↑ "Radhika or Radhika Kumaraswamy, eventually it's me as an actress who matters - Times of India". The Times of India (in ಇಂಗ್ಲಿಷ್). Retrieved 2022-02-09.
- ↑ Upadhyaya, Prakash (2018-05-19). "Radhika Kumaraswamy back with a bang [photos]". www.ibtimes.co.in (in ಇಂಗ್ಲಿಷ್). Retrieved 2022-02-13.
- ↑ admin (2021-10-21). "Oppanda Movie (2021) Cast, Roles, Trailer, Story, Release Date, Poster". Indian Talents (in ಅಮೆರಿಕನ್ ಇಂಗ್ಲಿಷ್). Retrieved 2022-02-09.
- ↑ "Arjun Sarja-Radhika Kumaraswamy's film Kontract undergoes a title change". www.indulgexpress.com (in ಇಂಗ್ಲಿಷ್). Retrieved 2022-02-09.
- ↑ Udayavani. "'ಒಪ್ಪಂದ' ಮುಗಿಸಿದ ರಾಧಿಕಾ ಕುಮಾರಸ್ವಾಮಿ". Udayavani. Retrieved 2022-02-09.
- ↑ vaishnavi. "ಅರ್ಜುನ್ ಸರ್ಜಾ- ರಾಧಿಕಾ ಕುಮಾರಸ್ವಾಮಿ ವಿಡಿಯೋಗಳು ವೈರಲ್!". Asianet News Network Pvt Ltd. Retrieved 2022-02-09.
- ↑ "Kontract in last leg of shoot". The New Indian Express (in ಇಂಗ್ಲಿಷ್). Retrieved 2022-02-09.
- ↑ "Radhika Kumaraswamy and Arjun Sarja pair up for a multi-lingual film - Times of India". The Times of India (in ಇಂಗ್ಲಿಷ್). Retrieved 2022-02-09.
- ↑ "Arjun Sarja-Radhika Kumaraswamy starrer 'Kontract' to release next month?". The News Minute (in ಇಂಗ್ಲಿಷ್). 2019-03-28. Retrieved 2022-02-09.
- ↑ R, Shilpa Sebastian (2017-06-29). "New moves". The Hindu (in Indian English). ISSN 0971-751X. Retrieved 2022-02-09.
- ↑ "ಅರ್ಜುನ್ ಸರ್ಜಾ & ರಾಧಿಕಾ ಕುಮಾರಸ್ವಾಮಿ ನಟನೆಯ 'ಒಪ್ಪಂದ' ಸಿನಿಮಾದ ಆಡಿಯೋ ರಿಲೀಸ್!". Vijaya Karnataka. Retrieved 2022-02-09.
- ↑ divya.perla. "Arjun Sarja: ರಾಧಿಕಾ ಅಭಿನಯದ ಒಪ್ಪಂದ ಚಿತ್ರದ ಆಡಿಯೋ, ಟ್ರೇಲರ್ ಬಿಡುಗಡೆ". Asianet News Network Pvt Ltd. Retrieved 2022-02-09.
- ↑ "Radhika Kumaraswamy-Arjun's Kontract to hit the screens in April". The New Indian Express (in ಇಂಗ್ಲಿಷ್). Retrieved 2022-02-09.
- ↑ "Arjun Sarja, Radhika Kumaraswamy's Oppanda gets a release date - Times of India". The Times of India (in ಇಂಗ್ಲಿಷ್). Retrieved 2022-02-09.
- ↑ ibcworldnews (2022-02-09). "Arjun Sarja, Radhika Kumaraswamy's Oppanda gets a release date". IBC World News (in ಬ್ರಿಟಿಷ್ ಇಂಗ್ಲಿಷ್). Archived from the original on 2022-02-09. Retrieved 2022-02-09.
- ↑ "Arjun Sarja-Radhika Kumaraswamy's film undergoes a title change". The New Indian Express. Retrieved 2022-02-09.