ವಿಷಯಕ್ಕೆ ಹೋಗು

ಸದಸ್ಯ:Nagarajakaraya/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ನದಿಗಳ ಪಟ್ಟಿ

[ಬದಲಾಯಿಸಿ]

ದಕ್ಷಿಣ ಕನ್ನಡಮತ್ತು ಉಡುಪಿ ಜಿಲ್ಲೆಗಳಲ್ಲಿ ಹರಿಯುವ ಕೆಲವು ನದಿಗಳ ಪಟ್ಟಿಮಾಡಲಾಗಿದೆ.ಪ್ರವಹಿಸುವ ಭೌಗೋಳಿಕ ಪ್ರದೇಶಗಳಿಗನುಸಾರವಾಗಿ ಈ ನದಿಗಳ ಹೆಸರುಗಳು ವ್ಯತ್ಯಾಸಗೊಂಡಿವೆ.ಈ ಜಿಲ್ಲೆಗಳಲ್ಲಿನ ಬಹುತೇಕ ನದಿಗಳು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀಸಮುದ್ರವನ್ನು ಸೇರುತ್ತವೆ.

ನೇತ್ರಾವತಿ

[ಬದಲಾಯಿಸಿ]

ಭಾರತದ ಕರ್ನಾಟಕ ರಾಜ್ಯದಲ್ಲಿ ಕಂಡುಬರುವ ಪಶ್ಚಿಮಘಟ್ಟಗಳಲ್ಲಿ ನೇತ್ರಾವತಿ ನದಿಯು ತನ್ನದೇ ಆದ ಮೂಲ ಉಗಮಸ್ಥಾನವನ್ನು ಹೊಂದಿದೆ.ಕುಮಾರಧಾರ,ನೇತ್ರಾವತಿ,ಮಣಿಹಳ್ಳ ಹಾಗೂ ಗುರುಪುರ ನದಿಗಳು ನೇತ್ರಾವತಿ ನದಿಯೊಂದಿಗೆ ಸೇರಿಕೊಳ್ಳುತ್ತವೆ.ಈ ನದಿಪಾತ್ರಗಳಲ್ಲಿ ಮಂಗಳೂರು,ಬಂಟ್ವಾಳ,ಉಪ್ಪಿನಂಗಡಿ,ಧರ್ಮಸ್ಥಳ ಹಾಗೂ ಉಳ್ಳಾಲ ಪ್ರದೇಶಗಳು ಇವೆ.ನೇತ್ರಾವತಿ ನದಿಯು ದಕ್ಷಿಣ ಕನ್ನಡದ ಜೀವನದಿ ಎಂದೇ ಗುರುತಿಸಲ್ಪಟ್ಟಿದೆ.ಇದು ೧೦೩ ಕಿ ಮೀ ನಷ್ಟು ದೂರದವರೆಗೆ ಹರಿಯುತ್ತದೆ.ಇದು ಸರಿಸುಮಾರು ೧೩೫೨ ಚ ಮೈಲುಗಳಷ್ಟು ವ್ಯಾಪ್ತಿಯ ಪ್ರದೇಶವನ್ನು ಹೊಂದಿದೆ.ಇದು ಮೀನುಗಾರಿಕೆ,ವಿದ್ಯುತ್ ಉತ್ಪಾದನೆ,ಕುಡಿಯುವ ನೀರು ಹಾಗೂ ಇತರೆ ಸ್ಥಳಗಳಿಗೆ ಜಲಮೂಲವಾಗಿ ಬಳಕೆಯಾಗುತ್ತಿದೆ.

ಕುಮಾರಧಾರ

[ಬದಲಾಯಿಸಿ]

ಪಶ್ಚಿಮ ಘಟ್ಟಗಳಲ್ಲಿ ಉಗಮಸ್ಥಾನ ಹೊಂದಿದ ಕುಮಾರಧಾರ ನದಿಯು ನೇತ್ರಾವತಿ ನದಿಗೆ ಬಂದು ಸೇರುತ್ತದೆ.ಈ ನದಿತೀರದಲ್ಲಿ ಕುಕ್ಕೆಸುಬ್ರಹ್ಮಣ್ಯ ಶ್ರೀಕ್ಷೇತ್ರವು ಬೆಳೆದು ನಿಂತಿದೆ.

ಗುರುಪುರ ಅಥವಾ ಫಲ್ಗುಣಿ

[ಬದಲಾಯಿಸಿ]

ಗುರುಪುರ ನದಿಯು ಗುರುಪುರ,ಮಂಗಳೂರು ಹಾಗೂ ತಣ್ಣೀರುಬಾವಿ ಪ್ರದೇಶಗಳಲ್ಲಿ ಹರಿಯುತ್ತದೆ.ಇದು ಬೆಂಗ್ರೆ ಸಮೀಪ ನೇತ್ರಾವತಿ ನದಿಯನ್ನು ಸೇರುತ್ತದೆ.

ನಂದಿನಿ ಅಥವಾ ಪಾಂವಜೆ

[ಬದಲಾಯಿಸಿ]

ನಂದಿನಿ ಅಥವಾ ಪಾಂವಜೆ ನದಿಯು ಸಸಿಹಿತ್ಲು,ಕೊಳುವಾಯಿ ಸಮೀಪ ಅರಬ್ಬೀಸಮುದ್ರವನ್ನು ಕೂಡುತ್ತದೆ.

ಶಾಂಭವಿ

[ಬದಲಾಯಿಸಿ]

ಶಾಂಭವಿ ನದಿಯು ಮುಲ್ಕಿ ನಗರವನ್ನು ಬಳಸಿಕೊಂಡು ಪ್ರವಹಿಸುತ್ತದೆ.

ಪಂಗಾಳ

[ಬದಲಾಯಿಸಿ]

ಈ ನದಿಯು ಪಂಗಳ ‍ಗ್ರಾಮವನ್ನು ತಲುಪಿ ಅಲ್ಲಿಂದ ಮತ್ತಿ ಪ್ರದೇಶದ ಮೂಲಕ ಅರಬ್ಬೀಸಮುದ್ರವನ್ನು ಸೇರುತ್ತದೆ.