ವಿಷಯಕ್ಕೆ ಹೋಗು

ಜಸ್ಟ್ ಮದುವೇಲಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಸ್ಟ್ ಮದುವೇಲಿ : ಎ ಜರ್ನಿ ಆಫ್ ಲವ್ (2015) ಕೋಲಾರ ಸೀನ ಅವರನಿರ್ದೇಶನದ ಮತ್ತು ಯೂನಿವರ್ಸಲ್ ಹ್ಯಾಟ್ರಿಕ್ ಕಂಬೈನ್ಸ್ ನಿರ್ಮಾಣದ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಸೀನ ಚಿತ್ರದ ಚಿತ್ರಕಥೆಯನ್ನೂ ಬರೆದಿದ್ದಾರೆ. [] [] []

ಪಾತ್ರವರ್ಗ

[ಬದಲಾಯಿಸಿ]

ಕಥಾವಸ್ತು

[ಬದಲಾಯಿಸಿ]

ಸಂತೋಷ್ ಮದುವೆಯ ವಿಡಿಯೋಗ್ರಾಫರ್ ಆಗಿದ್ದು, ಮದುವೆಯ ಚಿತ್ರೀಕರಣಕ್ಕೆ ಆಗಮಿಸಿದ ತಕ್ಷಣ ಅವನು ತುಂಬಾ ಆಕರ್ಷಕವಾಗಿ ಕಾಣುವ ಹುಡುಗಿ ನಂದಿನಿ ಯನ್ನು ಪ್ರೀತಿಸುತ್ತಾನೆ, ಅವಳೇ ವಧು ಎಂದು ನಂತರ ತಿಳಿಯುತ್ತದೆ. ಸಂತೋಷ್ ಅವಳೊಂದಿಗೆ ಸ್ನೇಹ ಬೆಳೆಸುತ್ತಾನೆ, ಅವಳು ಇನ್ನೊಬ್ಬ ವ್ಯಕ್ತಿ ರಾಹುಲ್ನನ್ನು ಪ್ರೀತಿಸುತ್ತಿದ್ದು ಈ ಮದುವೆಯನ್ನು ಬಯಸುತ್ತಿಲ್ಲ ಎಂದು ಅವನಿಗೆ ತಿಳಿದು ಬರುತ್ತದೆ,

ಈಗ ನಂದಿನಿಯನ್ನು ರಾಹುಲ್ ನತ್ತ ಸೇರಿಸುವುದಿ ಸಂತೋಷನ ಗುರಿಯಾಗುತ್ತದೆ. ಅವರು ಮದುವೆಯಿಂದ ತಪ್ಪಿಸಿಕೊಳ್ಳುತ್ತಾರೆ, ಮತ್ತು ಎಲ್ಲರೂ ಇವರುಗಳು ಪರಸ್ಪರ ಪ್ರೀತಿಸುತ್ತಾರೆ ಎಂದು ನಂಬಲು ಪ್ರಾರಂಭಿಸುತ್ತಾರೆ. ಮತ್ತೊಂದೆಡೆ, ನಂದಿನಿಯ ಪತಿಯಾಗಲಿದ್ದಾತ ಮತ್ತು ಅವನ ಗ್ಯಾಂಗ್ ಅವರನ್ನು ನಿರಂತರವಾಗಿ ಬೆನ್ನಟ್ಟುತ್ತಾರೆ. ಕೊನೆಯಲ್ಲಿ, ರಾಹುಲ್ ಕಾಣಿಸಿಕೊಳ್ಳುತ್ತಾನೆ ಮತ್ತು ಸಂತೋಷ್, ಅವಳನ್ನು ಅವನಿಗೆ ಒಪ್ಪಿಸಿದ ನಂತರ ಮನೆಗೆ ಹಿಂದಿರುಗುತ್ತಾನೆ. ಚಿತ್ರಕ್ಕೆ ಸುಖಾಂತ್ಯವಿಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. "Just Maduveli: A journey of love". The Times of India. Retrieved 10 February 2016.
  2. "'Just Maduveli' Review". Archived from the original on 6 ಏಪ್ರಿಲ್ 2015. Retrieved 10 February 2016.
  3. "Kannada cinema's new daredevil action hero". The Times of India. Retrieved 10 February 2016.