Relax ಸತ್ಯ (ಚಲನಚಿತ್ರ)
ರಿಲ್ಯಾಕ್ಸ್ ಸತ್ಯ 2019 ರ ಭಾರತೀಯ ಕನ್ನಡ ಭಾಷೆಯ ಕ್ರೈಮ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ನವೀನ್ ರೆಡ್ಡಿ ಜಿ ಬರೆದು ನಿರ್ದೇಶಿಸಿದ್ದಾರೆ.[೧] ಚಲನಚಿತ್ರವನ್ನು ರೆಡ್ ಡ್ರ್ಯಾಗನ್ ಬ್ಯಾನರ್ ಅಡಿಯಲ್ಲಿ ಮೋಹನ್ ಕುಮಾರ್ ಎಚ್ ಆರ್, ಜಿ. ಮೋಹನ್ ರೆಡ್ಡಿ ಮತ್ತು ಚೇತನ್ ಬಿಆರ್ ನಿರ್ಮಿಸಿದ್ದಾರೆ. ಇದರಲ್ಲಿ ಪ್ರಭು ಮುಂಡ್ಕೂರ್ ಮತ್ತು ಮಾನ್ವಿತಾ ಕಾಮತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಹಿನ್ನೆಲೆಸಂಗೀತ ಆನಂದ್ ರಾಜವಿಕ್ರಮ್ ಅವರದ್ದು ಮತ್ತು ಛಾಯಾಗ್ರಹಣ ಯೋಗಿ ಅವರದ್ದು. ಚಿತ್ರಕ್ಕೆ ಸಂಕಲನವನ್ನು ಶ್ರೀಕಾಂತ್ ಮಾಡಿದ್ದಾರೆ. ಚಿತ್ರವು 15 ನವೆಂಬರ್ 2019 ರಂದು ಬಿಡುಗಡೆಯಾಯಿತು. ಈ ಚಲನಚಿತ್ರವು ಬ್ರಿಟಿಷ್ ಚಲನಚಿತ್ರ ದಿ ಡಿಸ್ಪಿಯರೆನ್ಸ್ ಆಫ್ ಆಲಿಸ್ ಕ್ರೀಡ್ (2019) ನಿಂದ ಪ್ರೇರಿತವಾಗಿದೆ ಎಂದು ವರದಿಯಾಗಿದೆ.[೨]
ಪಾತ್ರವರ್ಗ
[ಬದಲಾಯಿಸಿ]- ಸತ್ಯ ಪಾತ್ರದಲ್ಲಿ ಪ್ರಭು ಮುಂಡ್ಕೂರ್ [೩]
- ಮಾಯಾ ಪಾತ್ರದಲ್ಲಿ ಮಾನ್ವಿತಾ ಕಾಮತ್
ಬಿಡುಗಡೆ ಮತ್ತು ವಿಮರ್ಶೆಗಳು
[ಬದಲಾಯಿಸಿ]ಚಲನಚಿತ್ರವು 15 ನವೆಂಬರ್ 2019 ರಂದು ಬಿಡುಗಡೆಯಾಯಿತು.[೪]
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು 5 ರಲ್ಲಿ 3 ನಕ್ಷತ್ರಗಳನ್ನು ನೀಡಿತು, "ತ್ವರಿತ-ಗತಿಯ ನಿರೂಪಣೆಯು ಚಲನಚಿತ್ರಕ್ಕೆ ಉತ್ತಮವಾಗಿ ಕೆಲಸ ಮಾಡಿರಬಹುದು. ಇದು ಸಸ್ಪೆನ್ಸ್ ಅಂಶವನ್ನು ಹೆಚ್ಚಿಸುತ್ತದೆ ಮತ್ತು ಪ್ರೇಕ್ಷಕರನ್ನು ಅವರ ಆಸನಗಳ ತುದಿಯಲ್ಲಿ ಇರಿಸುತ್ತದೆ. ಕ್ರೈಮ್ ಥ್ರಿಲ್ಲರ್‌ಗಳು ನಿಮ್ಮ ಇಷ್ಟ ಆಗಿದ್ದರೆ, ಈ ಚಿತ್ರ ನೋಡಿರಿ. ಚಿತ್ರದ ಉದ್ದವು ಹೆಚ್ಚೇ ಆಗಿದ್ದರೂ, ಇದು ಉತ್ತಮ ಪ್ರಯತ್ನವಾಗಿದೆ ಮತ್ತು ಕನ್ನಡ ಪ್ರೇಕ್ಷಕರಿಗೆ ತುಲನಾತ್ಮಕವಾಗಿ ತಾಜಾ ಕಥೆಯಾಗಿದೆ." [೫]
ಹಿನ್ನೆಲೆಸಂಗೀತ
[ಬದಲಾಯಿಸಿ]ಚಿತ್ರದ ಹಿನ್ನೆಲೆ ಸಂಗೀತವನ್ನು ಆನಂದ್ ರಾಜವಿಕ್ರಮ್ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಆನಂದ ಆಡಿಯೋ ಪಡೆದುಕೊಂಡಿದೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
1. | "ಓ ವಿಧಿಯೇ ಕ್ಷಮಿಸು" | K. ನವೀನ್ ಕುಮಾರ್ | ಸಂಜಿತ್ ಹೆಗ್ಡೆ | 3:14 |
2. | "ಅರೆ ಅರೆ ಮೌನವೇ" | ಶಂಕರ್ ರಾಮನ್ | ವ್ಯಾಸರಾಜ್ | 3:40 |
3. | "ಕಷ್ಣ ಕಷ್ಣ" | ಧನಂಜಯ್ ರಂಜನ್ | ಸುಪ್ರಿಯಾ ಲೋಹಿತ್, ಸಂಜಿತ್ ಹೆಗ್ಡೆ | 3:30 |
4. | "ಅಯ್ಯೋ ಸತ್ಯ" | ನವೀನ್ ರೆಡ್ಡಿ ಜಿ. | ಚೇತನ್ ಗಂಧರ್ವ | 3:36 |
5. | "ಸತ್ಯ ಥೀಮ್" | --- | ||
ಒಟ್ಟು ಸಮಯ: | 15:34 |
ಉಲ್ಲೇಖಗಳು
[ಬದಲಾಯಿಸಿ]- ↑ "'A crime-based subject can't get outdated, says Relax Satya director". The New Indian Express. Retrieved 2019-11-23.
- ↑ "Relax Sathya movie review: A compact crime thriller that won't disappoint". Bangalore Mirror.
- ↑ Yerasala, Ikyatha (2019-11-20). "Mangaluru huduga scores big!". Deccan Chronicle (in ಇಂಗ್ಲಿಷ್). Retrieved 2019-11-23.
- ↑ Manjula (2019-11-15). "Kannada Movies Releasing Today On November 15". www.thehansindia.com (in ಇಂಗ್ಲಿಷ್). Retrieved 2019-11-23.
- ↑ Relax Satya Movie Review {3.0/5}: Critic Review of Relax Satya by Times of India, retrieved 2019-11-23
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Relax ಸತ್ಯ at IMDb