ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ಶಂಕರ ಬೈಚಬಾಳ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ ಶಂಕರ ಬೈಚಬಾಳ


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೭:೪೯, ೧೮ ಜುಲೈ ೨೦೨೧ (UTC)

ಹಿಂಸೆ -ಅಂಹಿಸೆ

[ಬದಲಾಯಿಸಿ]

ಪ್ರಾಣಿಗಳಗಳನ್ನು ಕೊಲ್ಲುವುದು, ಇಲ್ಲವೇ ಹಿಂಸಿಸುವುದು ಅತವಾ ಗಾಯಗೊಳಿಸುವುದನ್ನು ನಾವು ಹಿಂಸೆ ಎಂದು ಕರೆಯಲಾಗುತ್ತೆವೆ.ಜೀವಿಗಳನ್ನು ಕೊಲ್ಲದಿರುವುದು,ದಂಡಿಸದಿರುವುದು ,ದಯೆ ತೋರಿಸುವ ಬಗೆಗೆ ಅಹಿಂಸೆ ಎಂದು ಕರೆಯುತ್ತಾರೆ. ಇದಿಷ್ಟೇ ಇವುಗಳ ಅರ್ಥವೆ???ಚರ್ಚಿಸಿ!!! 2405:204:550C:BA7B:B8EB:6EA8:662E:E3C5 ೦೫:೫೪, ೧೨ ಡಿಸೆಂಬರ್ ೨೦೨೧ (UTC)

ನಿಮ್ಮ ಬಗ್ಗೆ ನೀವೇ ಬರೆಯಬೇಡಿ

[ಬದಲಾಯಿಸಿ]

ವಿಕಿಪೀಡಿಯ ಒಂದು ವಿಶ್ವಕೋಶ. ಇದನ್ನು ಜನರೇ ನಡೆಸುವುದು. ಇದು ಸ್ವಯಂಸೇವಕರಿಂದ ಬರೆದ ಲೇಖನಗಳಿಂದ ಆಗಿರುವುದು. ಇಲ್ಲಿ ಬರೆಯುವವರು ತಮ್ಮ ಬಗ್ಗೆ ತಾವೇ ಬರೆದುಕೊಳ್ಳುವಂತಿಲ್ಲ. ಆದುದರಿಂದ ನಿಮ್ಮ ಬಗ್ಗೆ ನೀವೇ ಸೇರಿಸಿದ ಮಾಹಿತಿಗಳನ್ನು ಅಳಿಸಲಾಗಿದೆ.--ಪವನಜ ಯು. ಬಿ. (ಚರ್ಚೆ) ೦೫:೫೩, ೨೮ ಮಾರ್ಚ್ ೨೦೨೨ (UTC) (ನಿರ್ವಾಹಕ)

ಶಿವಾನಂದೇಶ್ವರ ವಿರಕ್ತಮಠ ಮಸಬಿನಾಳ - ಸೊನ್ನ

[ಬದಲಾಯಿಸಿ]

ಶಿವಾನಂದೇಶ್ವರ ವಿರಕ್ತಮಠ ಮಸಬಿನಾಳ-ಸೊನ್ನ ವ್ಯವಸ್ಥೆಯ ಸ್ವಾಸ್ಥ್ಯವನ್ನು ಹಾಳು ಮಾಡುವುದು ‘ಅಸಮಾನತೆ’ ಎನ್ನುವುದನ್ನು ಸೊನ್ನದ ಶಿವಾನಂದ ಅಪ್ಪಗಳು ಮನಗಂಡಿದ್ದರು. 1865 ರಿಂದ 1979ರ ಅವಧಿಯಲ್ಲಿ ಬಾಳಿಬದುಕಿದ ಶಿವಯೋಗಿಗಳು ಅಸಮಾನತೆಗೆ ತಕ್ಕ ಚಿಕಿತ್ಸೆಯನ್ನು ಸತ್ಯಶುದ್ಧ ಕಾಯಕದ ಆಚರಣೆ, ದಾಸೋಹದ ಸಮರ್ಪಣೆ ಹಾಗೂ ಸರ್ವ ಸಮಾನತೆಯ ಧೋರಣೆಯಲ್ಲಿ ಕಂಡುಕೊಂಡಿದ್ದರು. ‘ಸರ್ವರಿಗೆ ಸಮ ಪಾಲು ಸರ್ವರಿಗೆ ಸಮ ಬಾಳು’ ಎನ್ನುವ ಸರ್ವಸಮಾನತೆಯ ಸಾಮಾಜಿಕ ದೃಷ್ಟಿಕೋನದ ಪರಿಣಾಮವಾಗಿ ಅವರ ಶಾಖಾಮಠಗಳಿರುವ ಸೊನ್ನ, ಮಸಬಿನಾಳ, ಎಲ್ಲಾನೂರುಗಳು ಅವರಿಂದ ಒಂದು ಹೊಸ ಆಯಾಮವನ್ನೇ ಪಡೆದುಕೊಂಡವು. ‘ಕಾಯಕದಲ್ಲಿ ನಿರತನಾದಡೆ ಜಂಗಮ ಮುಂದಿದ್ದರೂ ಹಂಗು ಹರಿಯಬೇಕು’ ಎನ್ನುವ ಶರಣರ ಆದರ್ಶ ಇವರ ಬದುಕಿನಲ್ಲಿ ದಟ್ಟವಾಗಿ ಧ್ವನಿಸುತ್ತದೆ. ಕಾಯವನ್ನು ದಂಡಿಸದೆ ಅನ್ನವನ್ನು ಉಣ್ಣುವ ಹಕ್ಕು ಭಕ್ತನಾಗಲಿ, ಜಂಗಮವಾಗಲಿ, ಗುರುವಾಗಲಿ ಪಡೆದಿಲ್ಲ, ಪಡೆಯಬಾರದು. ಕಾರೆಯ ಸೊಪ್ಪಾದರೂ ಸರಿ ಕಾಯಕದಿಂದ ಬಂದುದು ಲಿಂಗಾರ್ಪಿತವಲ್ಲದೇ ದುರಾಸೆಯಿಂದ ಬಂದುದು ಅನರ್ಪಿತ. ಕಾಯಕವೆಂದು ಕಾಯವ ಬಳಲಿಸದೆ, ತನುಕರಗದೆ, ಮನ ನೋಯದೆ, ಕಾಡಿಬೇಡಿ ಮಾಡುವದು ದಾಸೋಹವೆ!? ಎಂದು ಶರಣ ಶಿವಲೆಂಕ ಮಂಚಣ್ಣ ಪ್ರಶ್ನಿಸುವಂತೆ ಎಲ್ಲರೂ ‘ಕಾಯಕಕ್ಕೆ ಒಳಗು’ ಆಮೇಲೆ ದಾಸೋಹ. ಈ ಪರಿಯ ಉತ್ಪಾದನೆಯ ‘ದಾಸೋಹ ಪರಂಪರೆ’ ಸೊನ್ನ ಹಾಗೂ ಮಸಬಿನಾಳ ಮಠಗಳಲಿತ್ತು ಜೇವರ್ಗಿ ತಾಲೂಕಿನ ಸೊನ್ನ, ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಸೊನ್ನದ ಶಿವಾನಂದ ಶಿವಯೋಗಿಗಳ ಪ್ರಮುಖ ಕಾರ್ಯಕ್ಷೇತ್ರಗಳು. ಪುಣ್ಯ ಹಾಗೂ ಕೀರ್ತಿ ಲಾಲಸೆಗಾಗಿ ದಾನ ಮಾಡುವ ಪರಂಪರೆಯನ್ನು ಬೇರುಸಮೇತ ಕಿತ್ತೊಗೆದು ಸೇವಾಭಾವನೆಯ ಪರ್ಯಾಯಭಾವವನ್ನು ಜಾರಿಗೆ ತಂದವರು ಶರಣರು. ಅವರ ಆದರ್ಶ ಪರಂಪರೆಯನ್ನೇ ತಮ್ಮ ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ‘ಶತಾಯುಷಿ ಸೊನ್ನದ ಶಿವಾನಂದ ಅಪ್ಪಗಳು’ ತಾವು ಇನ್ನು ವಟುವಾಗಿದ್ದಾಗಲೇ ದಾಸೋಹದ ಕಟ್ಟುನಿಯಮಗಳಿಗೆ ಕಂಕಣಬದ್ಧರಾಗುತ್ತಾರೆ. 1885ರ ಸುಮಾರು ಅವರಿಗೆ 20 ವರ್ಷವಿದ್ದಾಗ ಸೊನ್ನದ ಮಠದಲ್ಲಿ ಒಂದು ಘಟನೆ ನಡೆಯುತ್ತದೆ. ಮಣ್ಣಿನ ಹಳೆಯಮಠ ಅಭಿವೃದ್ಧಿ ಹೊಂದಿಲ್ಲ. ಮಠಕ್ಕೆ ಸ್ವಲ್ಪ ಜಮೀನಿದೆಯಾದರೂ ಬರಗಾಲದ ನಿಮಿತ್ಯ ಬೆಳೆಯಿಲ್ಲ, ಧಾನ್ಯವು ಇಲ್ಲ. ಆಗಿನ ಪರಂಗಿ ಸರ್ಕಾರ ಢೊಲಿಯನ್ನು (ಧಾನ್ಯ) ಅವ್ಯವಸ್ಥಿತ ರೀತಿಯಿಂದ ಸ್ಥಳೀಯ ಗ್ರಾಮಸ್ಥರಿಗೆ ಕೊಡುತ್ತಿತ್ತು. ಮಠದ ಸ್ವಾಮಿಗಳಿಗೆ (ವಟು) ಇದೂ ಸಹ ಬರುತ್ತಿರಲಿಲ್ಲ. ಅಲೆಮಾರಿ ಜನಾಂಗದವರಿಗಂತೂ ಇಲ್ಲವೇ ಇಲ್ಲ. ಕಂತಿಭಿಕ್ಷೆಯೊಂದೇ ಇವರ ಹೊಟ್ಟೆಗೆ ಆಧಾರ. ಸ್ವಾಮಿಗಳು ದಿನಕ್ಕೆ ಒಮ್ಮೆ ಉಂಡರೆ ಪುನಃ ಮರುದಿನವೇ ಉಣ್ಣುವುದು, ಪರಿಸ್ಥಿತಿ ಹೀಗಿರುವಾಗ ಇವರಿಗೆ ಕಂತಿಭೀಕ್ಷೆಯನ್ನು ಬೇಡಲು ಸಹ ಮುಜುಗುರವಾಗುತ್ತಿತ್ತು. ಈ ಸಂದರ್ಭದಲ್ಲಿ ಮಠದ ಮಗ್ಗಲು ಇರುವ ಖಾಲಿ ಜಾಗದಲ್ಲಿ, ಕೊಡ–ತಗಡಿನಡೆಬ್ಬಿ ಮಾಡಿ ಕೊಡುವ ಒಂದು ಅಲೆಮಾರಿ ಕುಟುಂಬ 2–3 ದಿನಗಳಿಂದ ವಾಸವಾಗಿತ್ತು. ರಾತ್ರಿ ಸಮಯದಲ್ಲಿ ಅವರ ಸಣ್ಣ ಮಕ್ಕಳು ಹಸಿವಿನಿಂದ ಅಳುತ್ತಿದ್ದವು. ಅವು ರೊಟ್ಟಿ, ನುಚ್ಚು, ಗಂಜಿ ಎಂದು ಹಲುಬುವ ಶಬ್ದ ಮಠದ ಕಿಟಕಿಯಿಂದ ಕೇಳಿದ ವಟುಗಳ ಹೃದಯ ಜುಮ್ಮೆಂದಿತು. ಎಲ್ಲಿ ಹುಡುಕಿದರೂ ಮಠದಲ್ಲಿ ಊಟಕ್ಕೆ ಏನೂ ಇಲ್ಲ. ಹಿಂದಿನ ದಿನ ಬರೀ ಗಂಜಿಯನ್ನು ಕುಡಿದು ದಿನಸಾಗಿಸಿದ ವಟುಗಳು ಪರಸ್ಥಿತಿಯ ಕಠೋರತನಕ್ಕೆ ಧಿಙ್ಮೂಢರಾಗುತ್ತಾರೆ! ತಡಕಾಡುತ್ತಾರೆ!! ಗೊಂದಲಕ್ಕೀಡಾಗುತ್ತಾರೆ!!! ಏನು? ಹೇಗೆ??.... ತಿಳಿಯಲೊಲ್ಲದು. ಹಿಂದಿನ ವರ್ಷ ಬೆಳೆ ಸರಿಯಾಗಿ ಬಾರದ ಸಂದರ್ಭದಲ್ಲೂ ಐದು ಬಂಕಡತೆನೆ (ಬಾಗಿದತೆನೆ)ಗಳನ್ನು ಸಂಗ್ರಹಿಸಿ ಜಗುಲಿಯ ಮೇಲೆ ಕಟ್ಟಿದ್ದರು. ಈ ತೆನೆಗಳನ್ನು ಬಸವಜಯಂತಿ ದಿನವೇ ಕಾಳು ಉದುರಿಸಿ ಕುಟ್ಟಿ, ಕಿಚಡಿಮಾಡಿ ಎತ್ತುಗಳಿಗೆ ತಿನಿಸುವ ಪದ್ಧತಿ (ಹೊನ್ನುಗ್ಗಿ ಕಿಚಡಿ). ಉತ್ತರ ಕರ್ನಾಟಕದ ಅನೇಕ ಕಡೆ ಈ ಸಂಪ್ರದಾಯ ಇದೆ. ಜಗುಲಿಯ ಮೇಲೆ ಇರುವ ಈ ತೆನೆಗಳು ವಟುಗಳಿಗೆ ನೆನಪಾದವು. ರಾತ್ರೋರಾತ್ರಿ ಈ ತೆನೆಗಳಿಂದ ಕಾಳು ಬೇರ್ಪಡಿಸಿ ಸ್ವತಃ ತಾವೇ ಮಠದಲ್ಲಿಯ ಬೀಸುಕಲ್ಲಿನಿಂದ ಬೀಸಿ ನುಚ್ಚು ಮಾಡಿ ಆ ಮಕ್ಕಳಿಗೆ ಉಣಿಸುತ್ತಾರೆ. ಅವರ ಹೊಟ್ಟೆಯ ಹಸಿವಿನ ನೋವನ್ನು ತಣಿಸುತ್ತಾರೆ. ಅಂದಿನಿಂದ ಮಠದಲ್ಲಿ ‘ನುಚ್ಚು ಮಜ್ಜಿಗೆ’ ಪ್ರಸಾದ ಪ್ರಾರಂಭವಾದುದು ಮಠದ ದಾಸೋಹ ಇತಿಹಾಸದಲ್ಲಿ ಪ್ರಮುಖ ಘಟನೆಯಾಗುತ್ತದೆ ಅವರ ದಾಸೋಹ ಸೇವೆಗೆ ಪ್ರೇರಣೆಯಾಗುತ್ತದೆ. ಬಸವಜಯಂತಿಯ ನಿಜವಾದ ಅಚರಣೆ ನಮ್ಮ ಅನೇಕ ಲಿಂಗಾಯತ ಮಠಗಳಿಗೂ ಗೊತ್ತಿಲ್ಲದ ಅಂದಿನ ಮೂಢ ಸಂಪ್ರದಾಯವನ್ನು ವಟುಗಳು ಮುರಿದದ್ದು ಹೀಗೆ. ನಾಲ್ಕು ಕಾಲಿನ ಎತ್ತುಗಳಿಗೆ ಮೈತೊಳೆದು ಪೂಜೆ ಮಾಡಿ ಕಿಚಡಿ ತಿನ್ನಿಸುವುದೆ ಬಸವಜಯಂತಿ ಎಂದು ತಿಳಿದಿದ್ದ ಕಾಲ ಅದಾಗಿತ್ತು. ಇಲ್ಲಿ ಅವರ ಅರಿವು ಮತ್ತು ಸೇವಾಭಾವನೆ ಮುಖ್ಯವಾಗಿ ಎದ್ದುಕಾಣುತ್ತದೆ. ಒಡಲ ಹಸಿವನು ನೀಗಿಸುವುದು ಅಷ್ಟೆ ಪ್ರಧಾನವಾಗಿರುತ್ತದೆ. ಆದರೆ! ಒಂದುವರೆ ಶತಮಾನದ ಹಿಂದೆ ಈ ವಟು ದಾಸೋಹದ ಬಗ್ಗೆ ಯೋಚಿಸಿದ್ದು ಒಂದು ರೀತಿಯ ವೈಚಾರಿಕತೆಯೇ ಎನ್ನಬಹುದು. 22 ಜುಲೈ 1869ರಲ್ಲಿ ಸಂಗಣ್ಣ ರೇವಮ್ಮ ದಂಪತಿಗಳ ಮೂರನೇಯ ಮಗನಾಗಿ ಭಕ್ತಕುಲದಲ್ಲಿ ಸೊನ್ನದಲ್ಲಿ ಹುಟ್ಟಿದ ಈ ಮಗುವೆ ಮುಂದೆ “ಸೊನ್ನದ ದಾಸೋಹ ವಿರಕ್ತಮಠದ” ಆರನೇ ಪೀಠಾಧ್ಯಕ್ಷರಾಗಿ, ‘ಶತಾಯುಷಿ ಸೊನ್ನದ ಶಿವಾನಂದ ಶಿವಯೋಗಿ’ಗಳಾಗಿ ಈ ದಾಸೋಹ ಪರಂಪರೆಯನ್ನು ಆರಂಭಮಾಡಿ ಪೂಜ್ಯರಾಗಿ ಇತಿಹಾಸದಲ್ಲಿ ಕಂಗೊಳಿಸುತ್ತಾರೆ. ಈ ಪೀಠಾಧಿಪತಿಗಳು ಈ ದಾಸೋಹಪರಂಪರೆ ಪ್ರಾರಂಭ ಮಾಡಿದ್ದರಿಂದ ನಂತರದ ಪೀಠಾಧಿಪತಿಗಳು ಈ ದಾಸೋಹ ಪರಂಪರೆಗೆ “ಸೊನ್ನದ ಶಿವಾನಂದ ದಾಸೋಹ ಪರಂಪರೆ” ಎಂದು ಮರುನಾಮಕರಣ ಮಾಡಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಮುಂದೆ ಇದೇ ದಾಸೋಹ ಮಠದಲ್ಲಿ ಓದಿ ಬೆಳೆದ ಯುವಕನೊಬ್ಬ ತನ್ನ ಸದ್ವರ್ತನೆಯಿಂದ ಶಿವಾನಂದ ಶಿವಯೋಗಿಗಳ ನಂತರದ ಪೀಠಾಧಿಪತಿಯಾಗಿ ಶಿವಾನಂದ ಶಿವಯೋಗಿಗಳು ಬದುಕಿರುವಾಗಲೇ ಅವರ ದಾಸೋಹ ಪರಂಪರೆಯ ಉನ್ನತ ಆದರ್ಶಗಳನ್ನು ಕಾರ್ಯರೂಪಕ್ಕೆ ತರುವ ಮಹಾವ್ಯಕ್ತಿಯಾಗುತ್ತಾರೆ. ಅವರೇ “ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು” ಇವರ ಸೇವೆ ಸೊನ್ನ–ಮಸಬಿನಾಳ ದಾಸೋಹ ಪರಂಪರೆಯಲ್ಲಿ ಬಹಳ ಪ್ರಮುಖವಾದುದು. ಪೂಜ್ಯರು ಅಹಂಕಾರವನ್ನು ಬಿಟ್ಟು ತಾನು ಶಿವಾನಂದ ಶಿವಯೋಗಿಗಳ ಸೇವಕನೆಂಬ ಪ್ರಜ್ಞೆಯನ್ನು ಹೊಂದಿ ಸದಾ ಜಾಗೃತರಾಗಿ ದುಡಿದು ಈ ಪರಂಪರೆ ಬೆಳೆಸಿದವರು, ಇನ್ನಷ್ಟು ಗಟ್ಟಿಗೊಳಿಸಿದರು. ಸೋಹಂ ಎಂಬುದು ಅಂತರಂಗದ ಮದ ನೋಡಯ್ಯಾ ಶಿವೋಹಂ ಎಂಬುದು ಬಹಿರಂಗದ ಮದ ನೋಡಯ್ಯಾ ಈ ದ್ವಂದ್ವವನಳಿದು ದಾಸೋಹಂ ಎಂದೆನಿಸಯ್ಯಾ ಎಂದು ಸಿದ್ಧರಾಮ ಶಿವಯೋಗಿ ಹೇಳಿದರೆ, ಬಸವಣ್ಣ “ಸೋಹಂ ಎಂದೆನಿಸದಿರಯ್ಯಾ ದಾಸೋಹಂ ಎಂದೆನಿಸಯ್ಯಾ” ಎನ್ನುತ್ತಾನೆ. ಈ ನಿಲುವಿನಲ್ಲಿ ನಿರಹಂಭಾವ ನಿಸ್ವಾರ್ಥ ನೆಲೆಗೊಂಡಿದೆ. ಮಾಡಿದೆನೆಂಬ ಅಹಂಭಾವ ಒಂದೆಡೆಯಾದರೆ ಬಿಟ್ಟುಕೊಟ್ಟಿದ್ದನ್ನು ತೆಗೆದುಕೊಂಡೆನೆಂಬ ದಾಸ್ಯಭಾವ ಇನ್ನೊಂದೆಡೆ. ದಾಸೋಹದಲ್ಲಿ ಕಾಯಕ, ಕಾಯಕದಲ್ಲಿ ದಾಸೋಹ, ಅಡಕವಾದದ್ದು ಸೊನ್ನದ ಶಿವಾನಂದ ದಾಸೋಹ ಪರಂಪರೆಯಲ್ಲಿ ಎದ್ದುಕಾಣುತ್ತದೆ. ದಾಸೋಹ ಒಂದು ಕಡೆ ಕ್ರಿಯಾಶೀಲ ವ್ಯಕ್ತಿಯನ್ನು, ಇನ್ನೊಂದು ಕಡೆ ಸಮಾಜವನ್ನು ಪ್ರತಿನಿಧಿಸುತ್ತದೆ. ಶರಣರೆಲ್ಲ ಹೇಳುವ ಗುರು-ಲಿಂಗ-ಜಂಗಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಇಲ್ಲಿ ಜಂಗಮ ಕ್ರಿಯಾಶೀಲ ಸಮಾಜದ ಪ್ರತಿನಿಧಿ. ಲಿಂಗವನ್ನು (ಶಿವ) ಕಾಣಲು ಸಾಧನೆ ಜಂಗಮ ದಾಸೋಹ. ವಚನಕಾರರ ಅಭಿಪ್ರಾಯದಲ್ಲಿ ಬರುವ ‘ಲಿಂಗದ ಬಾಯಿ ಜಂಗಮ’ ಎಂಬ ಮಾತು ಲಿಂಗ-ಜಂಗಮರಲ್ಲಿ ಅಭೇದ ಕಲ್ಪಿಸುತ್ತದೆ. ಇಂತಹ ಗಟ್ಟಿ ಮೌಲ್ಯಗಳನ್ನು ಅಪ್ಪಿಕೊಂಡ ಈ ದಾಸೋಹ ನಡೆಸಲು ಕಂಡುಕೊಂಡ ಪ್ರಮುಖ ಸಂಪನ್ಮೂಲ “ಕೃಷಿ ಆಧಾರಿತ ಕಾಯಕ ಹಾಗೂ ಭಕ್ತರ ದೇಣಿಗೆ (ವರ್ಗಣಿ)” ಸೊನ್ನ–ಮಸಬಿನಾಳ, ಇಜೇರಿ, ಜಾಲವಾದಿ, ನೆಲೋಗಿ, ಯಲ್ಲಾನೂರ (ಆಂಧ್ರಪ್ರದೇಶ)–ಮುಂತಾದ ಶಾಖಾಮಠಗಳಲ್ಲಿರುವ ಮಠದ ಜಮೀನುಗಳ ಸುಧಾರಣೆ ಆಧುನಿಕ ಕೃಷಿ-ಪದ್ಧತಿಯಿಂದ ಸಾವಿರಾರು ಚೀಲ ಧಾನ್ಯ ಮಠಗಳ ಹೊಲದಿಂದ ಬಂದರೆ, ಇನ್ನೂ ಸಾವಿರಾರು ಚೀಲ ಸುತ್ತಮುತ್ತಲ ಹಳ್ಳಿಗಳ ರೈತರು ಪ್ರತಿವರ್ಷ ವರ್ಗಣಿ ಎಂದು ಸ್ವಯಂ ಪ್ರೇರಣೆಯಿಂದ ಆಯಾ ಶಾಖಾಮಠಗಳಿಗೆ ತಂದೊಪ್ಪಿಸಿ ಈ ದಾಸೋಹ ಪರಂಪರೆ ಜೀವಂತವಿರುವ ಹಾಗೆ ನೋಡಿಕೊಳ್ಳುತ್ತಲಿದ್ದಾರೆ. ಮಠದ ಪೀಠಾಧಿಪತಿಗಳ ಕಾಯಕದ ಜೊತೆಗೆ ದಾಸೋಹ ಪರಂಪರೆಯನ್ನು ಬೆಳೆಸುವ ಲಕ್ಷಾಂತರ ಭಕ್ತರು ಆಯಾಭಾಗದ ಊರೂರುಗಳಲ್ಲಿದ್ದದ್ದು ಗಮನಿಸಬೇಕಾದ ಹಾಗೂ ಮೆಚ್ಚಲೇಬೇಕಾದ ಸಂಗತಿಯಾಗಿದೆ. ಶಿವಾನಂದ ಶಿವಯೋಗಿಗಳು ಅಪ್ಪಿಕೊಂಡು ಬಂದ ಈ ಪರಂಪರೆಯ ಮೌಲ್ಯಗಳನ್ನು ಅವರ ನಂತರದ ಸ್ವಾಮಿಗಳೂ ಕೂಡಾ ಅಷ್ಟೆ ಜನತದಿಂದ ಮುಂದುವರೆಸಿಕೊಂಡು ಬಂದಿರುವರು. ಎಂತವು ಮೌಲ್ಯಗಳು? ಬಡವರ ಮಕ್ಕಳನ್ನು ದಾಸೋಹ ಮನೆಗೆ ಸೇರಿಕೊಂಡು ಉಣಿಸಿ ವಿದ್ಯೆಕಲಿಸಿ ಕಾಯಕಕ್ಕೆ ಹಚ್ಚುವ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಠದಲ್ಲಿರಿಸಿಕೊಂಡು ಉನ್ನತ ಶಿಕ್ಷಣ ನೀಡಿ ನೌಕರಿ ಹಚ್ಚುವ, ಇದೆಲ್ಲಕ್ಕೂ ಹೆಚ್ಚು ದಾಸೋಹದಲ್ಲಿರುವ ವಿದ್ಯಾರ್ಥಿಗಳಿಗೆ ದೇಶಪ್ರೇಮದ ಜಾಗೃತಿ ಮೂಡಿಸುವ ರಚನಾತ್ಮಕ ಮೌಲ್ಯಗಳು. ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಖಾದಿ ಪ್ರಚಾರ, ಚರಕಾ ಸಂಘ ಸ್ಥಾಪನೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೋತ್ಸಾಹ, ‘ವಂದೇ ಮಾತರಂ ಚಳುವಳಿ’ಗೆ ಪ್ರಸಾದನಿಲಯದಲ್ಲಿದ್ದ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಾರೆ. ರಾಷ್ಟ್ರೀಯ ಶಿಕ್ಷಣ ಈ ದಾಸೋಹ ಪರಂಪರೆಯಲ್ಲಿ ಪ್ರಾರಂಭವಾದದ್ದು ಹೆಮ್ಮೆಪಡಬೇಕಾದ ಸಂಗತಿ. ಬಿಜಾಪೂರ ಜಿಲ್ಲೆ ಉಕ್ಕಲಿಯಲ್ಲಿ ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ. ಫ.ಗು. ಹಳಕಟ್ಟಿ ಅವರು ಸೇರಿ 1924ರಲ್ಲಿ ಒಂದು ಸಂಸ್ಕøತ ಪಾಠಶಾಲೆ ಪ್ರಾರಂಭಿಸುತ್ತಾರೆ. ಅದು ಎರಡು–ಮೂರು ವರ್ಷ ನಡೆದು ವಿದ್ಯಾರ್ಥಿಗಳ ಪ್ರಸಾದ ವ್ಯವಸ್ಥೆ ಸರಿ ಇರದ ಕಾರಣ ನಿಲ್ಲುತ್ತದೆ. ಆ ಶಾಲೆಯನ್ನು ಈ ದಾಸೋಹ ಪರಂಪರೆಯ ಮಗ್ಗಲುಹಳ್ಳಿ ‘ಮಸಬಿನಾಳ’ ಮಠದಲ್ಲಿ ಶಿವಾನಂದ ಶಿವಯೋಗಿಗಳು ಪುನಃ ಪ್ರಾರಂಭಿಸುತ್ತಾರೆ. ಸುಮಾರು ಐವತ್ತು ಜನ ವಿದ್ಯಾರ್ಥಿಗಳಿಗೆ ತಮ್ಮ ಮಠದ ದಾಸೋಹದಲ್ಲಿ ಪ್ರಸಾದದ ವ್ಯವಸ್ಥೆ ಮಡುತ್ತಾರೆ. ಹೀಗೆ ಅಂದು ಐವತ್ತು ಜನ ಇದ್ದ ಈ ದಾಸೋಹ ಪರಂಪರೆಯಲ್ಲಿ ಈಗ ಎಲ್ಲಾ ಶಾಖಾಮಠಗಳು ಸೇರಿ ಸುಮಾರು 700 ವಿದ್ಯಾರ್ಥಿಗಳು ಓದುತ್ತಾರೆ. ಆಂಧ್ರಪ್ರದೇಶದ ಯಲ್ಲಾನೂರಿನಲ್ಲಿ 1949ರಲ್ಲಿ ಹತ್ತು ಸಾವಿರ ರೂಪಾಯಿಗಳ ದಾಸೋಹ ಕೊಠಡಿ (ಈಗ ಶಾಲೆ) ಕಟ್ಟಿಸಿ ಅಲ್ಲಿ ಮೂವತ್ತು ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯಾನಂತರ 1971ರಲ್ಲಿ ತಮ್ಮದೇ ಆದ ಒಂದು ವಿದ್ಯಾವರ್ಧಕ ಸಂಸ್ಥೆ ಅಸ್ತಿತ್ವಕ್ಕೆ ತಂದು ಅದರಡಿಯಲ್ಲಿ ಹಲವಾರು ಶಿಕ್ಷಣ ಸಂಸ್ಥೆ ತೆರೆದು ಸಾವಿರಾರು ವಿದ್ಯಾರ್ಥಿಗಳನ್ನು ದಾಸೋಹದಲ್ಲಿ ಸೇರಿಸಿಕೊಳ್ಳುವುದರ ಮುಖಾಂತರ ತಮ್ಮ ದಾಸೋಹ ಪರಂಪರೆಯನ್ನು ವೃದ್ಧಿಸುತ್ತಾರೆ. ಸದ್ಯದ ಪೂಜ್ಯರಾದ ಶ್ರೀ ಮ.ನಿ.ಪ್ರ. ಶಿವಾನಂದ ಸ್ವಾಮಿಗಳು ಲಿಂ. ಸೊನ್ನದ ಶಿವಾನಂದ ಶಿವಯೋಗಿಗಳ ಹೆಸರಿನಲ್ಲಿ ಸೊನ್ನದಲ್ಲಿ “ಗ್ರಾಮೀಣ ಜನ ಕಲ್ಯಾಣ ಸಂಸ್ಥೆ” ಕಟ್ಟಿ ಅದರಡಿ ಪ್ರಸಾದ ನಿಲಯ ಅನಾಥಾಶ್ರಮ, ಶಾಲೆ ಕಾಲೇಜುಗಳನ್ನು ನಡೆಸುವುದರ ಮುಖಾಂತರ ಮಠದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದಾರೆ. ಯಲ್ಲಾನೂರು, ನೆಲೋಗಿಗಳಲ್ಲಿ ಈ ದಾಸೋಹ ಪರಂಪರೆಯ ಇನ್ನೊಬ್ಬ ಪೂಜ್ಯರಾದ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಸ್ವಾಮಿಗಳು, ಬಿಜಾಪೂರ ಜಿಲ್ಲಾ ಶಾಖಾ ಮಠಗಳಾದ ಮಸಬಿನಾಳ ಜಾಲವಾದಿಗಳಲ್ಲಿ ಮತ್ತೊಬ್ಬ ಪೂಜ್ಯರಾದ ಶ್ರೀ ಮ.ನಿ.ಪ್ರ ಸಿದ್ಧರಾಮಸ್ವಾಮಿಗಳು ತಮ್ಮ ತಮ್ಮ ದಾಸೋಹದಲ್ಲಿ ಅನೇಕ ಬಡವಿದ್ಯಾರ್ಥಿಗಳನ್ನು ಸಲುಹುತ್ತಲಿದ್ದಾರೆ. ಬೆಳಗಾವಿ ಜಿಲ್ಲೆಯ ಹಂಚಿನಾಳದಲ್ಲಿ ಲಿಂ. ಶಿವಾನಂದ ಶಿವಯೋಗಿಗಳ ಪ್ರೇರಣೆಯಿಂದ ಅವರ ಶಿಷ್ಯರಾದ ಲಕ್ಷ್ಮಣ ಶಂಕ್ರಪ್ಪ ನಾಯಕ ಕೂಡಾ ‘ಶಿವಾನಂದ ಉಚಿತ ಪ್ರಸಾದ ನಿಲಯ’ ನಡೆಸುತ್ತಿದ್ದಾರೆ. ಹೀಗೆ ಒಂದು “ದಾಸೋಹ ಪರಂಪರೆ” ಹಲವಾರು ಟಿಸಲುಗಳಾಗಿ ಬೆಳೆದು ತನ್ನತನವನ್ನು ಮೆರೆದದ್ದು ‘ದಾಸೋಹ ಸೇವೆಯಲ್ಲಿ ಗುರುತಿಸಬೇಕಾದ ಸಂಗತಿ. ಈ ಎಲ್ಲ ಟಿಸಳುಗಳನ್ನು ಗಣನೆಗೆ ತೆಗೆದುಕೊಂಡರೆ ಪ್ರತಿವರ್ಷ ಸುಮಾರು 700 ರಿಂದ 800 ಜನ ವಿದ್ಯಾರ್ಥಿಗಳ ಸಂಖ್ಯೆ ಈ ಶಿವಾನಂದ ಪ್ರಸಾದ ನಿಲಯದಲ್ಲಿದೆ. ಪ್ರಸಾದ ನಿಲಯದಲ್ಲಿ ಅಧ್ಯಯನ ಮಾಡಿದವರಲ್ಲಿ ರಜಾಕರ ಹಾವಳಿಯ ಅನೈತಿಕತೆ ವಿರುದ್ಧ ಧ್ವನಿ ಎತ್ತಿದ ಮಾಜಿ ಶಾಸಕ ಶರಣಗೌಡ ದುಮ್ಮದರಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯ ಚಳುವಳಿಗಾರರ ಟೋಳಿಕಟ್ಟಿ, ಬ್ರಿಟಿಷರ ವಿರುದ್ಧ ದಂಗೆ ಎದ್ದ ಕವಿ ತಿಪ್ಪಣ್ಣ ಗುದ್ದಿ, ಸೇವಾಧಾರಿ ಮಲ್ಲಪ್ಪ ಸಿಂದಗಿ ಮುಂತಾದವರು ಪ್ರಮುಖರಾಗಿದ್ದಾರೆ. ಹರ್ಡೇಕರ ಮಂಜಪ್ಪ, ಕೌಜಲಗಿ ಹನುಮಂತರಾಯ, ಸುಗಂಧಿ ಮುರುಗೆಪ್ಪನಂತಹ ದೇಶಪ್ರೇಮಿಗಳ ನೂರಾರು ಅನುಯಾಯಿಗಳು ಈ ದಾಸೋಹದ ಮಠದಲ್ಲಿ ತಲೆಮರೆಸಿಕೊಂಡು ಇದ್ದು ಈ ಪರಂಪರೆಯ ಆಸರೆ ಪಡೆದವರಾಗಿದ್ದಾರೆ. ಬಿಜಾಪೂರ ಜಿಲ್ಲೆಯ ಮಸಬಿನಾಳ ಗ್ರಾಮ ಒಂದರಲ್ಲೇ 150 ಜನ ಸ್ವಾತಂತ್ರ್ಯ ಚಳುವಳಿಗಾರರಿದ್ದರು ಆದರೆ! ಪಿಂಚಣಿ ಪಡೆದವರು ಕೇವಲ 27 ಜನ ಎಂದು ಬಿಜಾಪೂರದ ಗ್ಯಾಸೆಟಿಯರ್ ಹೇಳುತ್ತದೆ. ಈ ಎಲ್ಲ ಚಳುವಳಿಗಾರರು ಈ ಪರಂಪರೆ ಹೊತ್ತಿಸಿದ ಮಸಬಿನಾಳ ದಾಸೋಹಮಠದ ಕಿಡಿಗಳು, ಅವರೆಲ್ಲ ಇಲ್ಲಿ ಬೆಳೆದವರು ಬದುಕಿದವರು ಪ್ರಸಿದ್ಧರಾದವರು. ಈ ಪರಿಸರದ ನಾಡಿನಲ್ಲಿ ಬರಗಾಲ ಬಿದ್ದಾಗ ಈ ದಾಸೋಹ ಪರಂಪರೆಯಿಂದ ಅನೇಕ ಹಳ್ಳಿಗಳಲ್ಲಿ ತಿಂಗಳುಗಳಗಟ್ಟಲೆ “ಗಂಜಿ ಕೇಂದ್ರ” ಸ್ಥಾಪಿಸಲ್ಪಟ್ಟಿದ್ದು ಅಲ್ಲಿ ಲಕ್ಷಾಂತರ ನಿರಾಶ್ರಿತರು ಉಂಡದ್ದು, ಬ್ರಿಟಿಷ್ ಅಧಿಕಾರಿ ‘ಹಂಡರಸನ್’ ಮಸಬಿನಾಳ ದಾಸೋಹ ಮಠಕ್ಕೆ ಬಂದು ಆಗ ಪೀಠಾಧಿಪತಿಗಳಾಗಿದ್ದ ಶಿವಾನಂದ ಶಿವಯೋಗಿಗಳಿಗೆ ಬ್ರಿಟಿಷ್ ಸರ್ಕಾರದಿಂದ ಮೆಚ್ಚುಗೆ ಪೂರ್ವಕ “ಗೌರವಸಮರ್ಪಣೆ” ಮಾಡಿದ್ದು ಈ ದಾಸೋಹ ಪರಂಪರೆಯ ಸ್ವಾತಂತ್ರ್ಯ ಪೂರ್ವದ ಮೈಲುಗಲ್ಲುಗಳಲ್ಲೊಂದು. ಒಂದೆರೆಡು ವಿಶೇಷ ಘಟನೆಗಳು: ಕಟಿರೊಟ್ಟಿ ಪ್ರಸಂಗ: ಬೆನಕನ ಅಮವಾಸ್ಸೆ–1962ರಲ್ಲಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಸೊನ್ನದ ಮಠದಲ್ಲಿ ಜಂಗಮನೊಬ್ಬ ಕಟಿರೊಟ್ಟಿ ತಿನ್ನುವ ‘ಕಟಕಟ’ ಸಪ್ಪಳ ಕೇಳಿದ ಶಿವಯೋಗಿಗಳು, ಅದೇ ಸಮಯದಲ್ಲಿ ತಾವು ಪ್ರಸಾದ ಸೇವಿಸುವಾಗ ಕಟಿರೊಟ್ಟಿ ಬೇಕೆಂದು ಹಠಹಿಡಿದು ತರೆಸಿ ಉಂಡರಂತೆ. ಎರಡು ಮೂರು ದಿನ ಬರೀ ಕಟಿರೊಟ್ಟಿ ಉಂಡ ಶಿವಯೋಗಿಗಳು ಯಾರ ಮುಂದೆಯು ವಿಷಯ ಹೇಳಿರಲಿಲ್ಲ. ನಾಲ್ಕನೆಯ ದಿನ ಕಾರಬ್ಯಾಳಿಯಲ್ಲಿ ಕಟಿರೊಟ್ಟಿ ತೊಯಿಸಿಕೊಂಡು ಉಣ್ಣುವ 98 ವರ್ಷದ ಮುಪ್ಪಿನ ಶಿವಯೋಗಿಗಳನ್ನು ಅಷ್ಟಾಗಿ ಯಾರೂ ಗಮನಿಸಿರಲಿಲ್ಲ. ಊರಲ್ಲಿಲ್ಲದ ದಾಸೋಹ ಮನೆಯ ಹಿರಿಯ ಅಜ್ಜಿ ಮಠಕ್ಕೆ ಬಂದಾಕ್ಷಣ ವಿಷಯ ಕ್ಷಮೆಯಾಚಿಸಿದರೂ ಶಿವಯೋಗಿಗಳು ಮತ್ತೆ ಕಟಿರೊಟ್ಟಿ ಉಂಡೇ ದಿನಗಳೆದರು. “ಕಟಿರೊಟ್ಟಿ ಉಣಿಸಿದ ಜಂಗಮನನ್ನು ಎಲ್ಲಿದ್ದರೂ ಕರೆತಂದು ಅವನಿಗೆ ಶ್ರೀಮಠದ ದಾಸೋಹದಿಂದ ಆದ ಪ್ರಮಾದಕ್ಕೆ ಕ್ಷಮೆ ಕೇಳಬೇಕು. ಅಲ್ಲದೆ ಒಂದುನೂರಾ ಒಂದು ಜನ ಜಂಗಮರಿಗೆ ದಾಸೋಹ ಮನೆಯಲ್ಲಿ ಕರಿಗಡಬು ತುಪ್ಪದ ಪ್ರಸಾದ ಊಟವಾಗಬೇಕು” ಎಂದು ಹೇಳಿದರು. ಅದು ಹಾಗೆ ಆಗುವವರೆಗೂ ಶ್ರೀಗಳು ಕಟ್ಟಿರೊಟ್ಟಿ ಉಂಡು ತಮ್ಮ ಅನ್ನದಾಸೋಹದ ನಿಯಮ ಪಾಲಿಸಿದರು. ಮುಂದೆ ನೂರಾ ಒಂದು ಜನ ಜಂಗಮರಿಗೆ ತುಪ್ಪದ ಪ್ರಸಾದ ಊಟ ಶ್ರೀಮಠದ ದಾಸೋಹದಲ್ಲಿ ಆಯಿತು. ಆವಾಗ ತೊಂಭತ್ತೆಂಟು ವರ್ಷದ ಶಿವಾನಂದ ಶಿವಯೋಗಿಗಳು ಬಿಸಿ ಪ್ರಸಾದ ಮಾಡಿದರು. ತರತರದ ಅಡಿಗೆ ತಾಟಿನಲ್ಲಿದ್ದಾಗ... : 1953, ಬನದ ಹುಣ್ಣಿವೆ ದಿನ. ಎರಡು ಎತ್ತಿನ ಬಂಡಿಗಳಲ್ಲಿ ಮೇವು ಹೇರಿಕೊಂಡು ನಾಲ್ಕಾರು ಜನ ರೈತರು ಮೇವು (ಕಣಿಕೆ) ಮಾರಲು ಹೊರಟಿದ್ದರು. ಮಳೆ ಬಂದಿತ್ತು. ಈ ಕಾರಣಕ್ಕೆ ಸೊನ್ನದ ಊರಲ್ಲಿಯ ಅಪ್ಪನ (ಶ್ರೀಗಳ) ತೋಟದಲ್ಲಿ ವಸ್ತಿ ಇದ್ದು, ನಾಳೆ ಹೋದರಾಯಿತೆಂದು ತಮ್ಮ ತಮ್ಮಲ್ಲೆ ಹರಟೆ ಪ್ರಾರಂಭಿಸಿದ್ದರು. ಮೊದಲನೆಯವ : ಇಂವ್‍ನೌನ... ಏನ್... ಸುಮಾರ ಥಂಡಿಯಪೋ ಮಾರಾಯಾ!!! ಹೊಟ್ತುಂಬಾಂಗ..... ಒಂದ್ನಾಕು ಮೆsತ್ ಮೆತ್ತನ ಬಿಸಿಬಿಸಿ ಚಪಾತಿ, ಸುಡುಸುಡೂ ಶೇಂಗಾದ ಖಾರಬ್ಯಾಳಿ ಆಯ್ತಂದ್ರ ಮನಗಂಡ ಉಟ್ನೋಡು ನಂದು. ಎರಡನೆಯವ : ಎಲೇ...ಶಿವ್ಯಾ!! ಈಗ ನನಗ ಚಪಾತಿ ಬಾತಿಗಿಬಾರದ್ದು, ಎಣ್ಣೀ ಹಚ್ಚಿದ ಮಿದೂವನ ಹೋಳಿಗಿ, ಕಾಸಿದ ಗಮ್ಮ ಗಮಾ ತುಪ್ಪಾದ್ರ ಎಂಟ ಹೊಳಗಿ ಹೊಡ್ಡ್ರ ಹೊಟ್ಟಿ ಜಪ್ ಅನ್ನಂಗಿಲ್ಲ. ಮೂರನೆಯವ : ಸುಡುಸುಡು ಹುಗ್ಗಿಮ್ಯಾಗ ಗಟ್ಟೇನ್ ತೆಂಬಿಗಿ ಹಾಲ ಅದ್ರs... ಬರ್ಜರಿ ಊಟ ಅಕ್ಕದ ನನ್ನ ಹಿಡಿಯವ್ರ ಇಲ್ಲ. ನಾಲ್ಕನೆಯವ : ಕೆಂಚಪ್ಪಾ ! ಕೆಂಚ್ಯಾ...!! ಕೆಂಚಣ್ಣಾ...!!! ನಿಮಗೆಲ್ಲಾರಿಗೂ ಒಂದೊಂದss ನಮೂನಿ ಆಸೆ ಆದ್ರ.... ನನಗೊಂದು ಬ್ಯಾರೆನಾಗೈತಿ, ನನ್ನ ಹೆಂಡ್ತಿ ಮಾಡುವಂತಾ ದಪ್ಪ್‍ದಪ್ಪ ನ ಹೂರಣಗಡಬ ಹೆರ್ತುಪ್ಪದಾಗ ಹೊಳ್ಯಾಡಿಸಿ ತಿನ್ದಂದ್ರ ಗಟ್ಟಿಮೂಟ ಊಟ ನೋಡ್ ನಂದು. ಕೊನೆಯವ : ಹಿಂಥಾಪರಿ ಹೊಲಸ್ ಗಿಜಿಗಿಜಿ ಮಳ್ಯಾಗ ಬೂರ್ಸ ಹತ್ತಿದ ಕಟಿರೊಟ್ಟಿ ಖಾರಕ ನೆಲಿ ಇಲ್ಲಾ, ಇಲ್ಲದ್ದ ಬೇಡಿ ಗಲ್ಲಾ ಬಾಯಿಸ್ಕೊಂಡ್ರಂತ. ಹೊರಣಗಡಬ ‘ಹೋಳ್ಗಿ ತುಪ್ಪಾ ಎಲ್ಲಿಂದ ಸಿಗಬೇಕು. ರೆಕ್ಕೆದಗೊಲಿ ಜ್ವಾಳದ್ದ... ಹೊಟ್ಟಿ ಉಬ್ಬಿದ ಬಿಸಿಬಿಸಿ ರೊಟ್ಟಿ ಕೆನಿಮಸ್ರ ಕಲ್ಲಾನಖಾರಾ, ಬಡ್ಡು ಜೊಂಡಿಗ ಮೀಸಿ ತಿಕ್ಕಿ ಬಾಯಾಗ ಒಂದು ಚುಟ್ಟಾ ಅಂದ್ರ. ಅರ್ಭಟ ನೋಡ ಅಬಬ.... ಎಂದು ತಮ್ಮ ತಮ್ಮಲ್ಲೆ ಹರಟೆ ಕೊಚ್ಚುತ್ತಿದ್ದರು. ಅವರೆಲ್ಲರ ಸಂಭಾಷಣೆಯ ತುಣುಕುಗಳನ್ನು ತೋಟದ ಮೂಲೆಯಲ್ಲಿ ನಿಂತು ಕೇಳಿದ ಶಿವಾನಂದ ಶಿವಯೋಗಿಗಳು ತಕ್ಷಣ ತಮ್ಮ ದಾಸೋಹ ಮಠಕ್ಕೆ ಹೋಗಿ, ಎಲ್ಲ ಪದಾರ್ಥಗಳನ್ನು ಸಂಜೆ ಎಂಟರೊಳಗೆ ತಯಾರಿಸಿ, ಅವರನ್ನು ಪ್ರಸಾದಕ್ಕೆ ಕರೆದರು. ಅವರ ಮುಂದೆ ಪ್ರಸಾದದ ತಾಟುಗಳನ್ನಿಟ್ಟಾಗ ಅವರು ಆಶ್ಚರ್ಯಗೊಂಡರು. ಉಂಡರು ಖುಷಿಪಟ್ಟರು. ಪಾಮರರಾದ ಅವರಿಗೆ ಅದು ಪವಾಡವಾಯಿತು. ಅಪ್ಪಗಳ ದಾಸೋಹ ಪ್ರೀತಿಯೇ ಅಂಥದ್ದು. ಅವರ ಎಲ್ಲ ಪದಾರ್ಥ ತಯಾರಿಸಿ ಆ ರೈತರಿಗೆ ಉಣಿಸಿ ತಾವೂ ತೃಪ್ತಿಪಟ್ಟರಲ್ಲಾ! ಇದು ನಿಜವಾದ ದಾಸೋಹ ಪರಿಪಾಲನೆ. ಅವರು ಇಂತವರಲ್ಲಿ ದೇವರನ್ನು ಕಂಡರು. ಅದಕ್ಕಾಗಿಯೋ ಈ ದಾಸೋಹ ಪರಂಪರೆಯನ್ನು ಸ್ಥಾಪಿಸಿದ ಸೊನ್ನದ ಶಿವಾನಂದ ಅಪ್ಪಗಳನ್ನು ‘ಅನ್ನದ ಸ್ವಾಮಿ’ ‘ಅನ್ನದ ಅಪ್ಪ’ ‘ಸೊನ್ನದ ಸ್ವಾಮಿ’ ಎಂದು ಅನ್ವರ್ಥಕವಾಗಿ ಕರೆಯುತ್ತಾರೆ. -- * -- ಶಂಕರ ಬೈಚಬಾಳ ‘ವಚನ’ ರಾಜಾಜಿನಗರ, ವಿಜಯಪುರ–586109 ದೂರವಾಣಿ: 9448751980 ಮಿಂಚಂಚಿ: shankarb66@gmail.com

2409:4071:218B:6A:11EF:EE37:F305:2E84 ೧೩:೪೧, ೨ ಜುಲೈ ೨೦೨೩ (IST)[reply]

ಭಾರತ ಸಿಂಹಾಸನ ರಶ್ಮಿ

[ಬದಲಾಯಿಸಿ]

ಇದು ಒಂದು ಕಾದಂಬರಿ , ದೇಶದ ಆ ಕಾಲಘಟ್ಟದ ಸ್ವತಂಂತ್ರ ಹೋರಾಟದ ನಿಜ ಘಟನೆಗಳು ಇಲ್ಲಿ ಬಹಳ ಸ್ಮರಣೀಯವಾಗಿವೆ. ಕನ್ನಡದ ಕೆಲವೇ ಅಪೂರ್ವ ಕಾದಂಬರಿಗಳಲ್ಲಿ ಒಂದಾದ ಇದು ಓದುಗರನ್ನೂ ಅಲ್ಲಿಯ ಸನ್ನಿವೇಶಗಳಲ್ಲಿ ಒಬ್ಬರನ್ನಾಗಿ ಮಾಡಿ ಓದಿಸಿಕೊಂಡು ಹೋಗುತ್ತದೆ. ಭಾರತೀಯ ಭಾಷಾ ದೃಷ್ಠಿಯಿಂದ ಇಲ್ಲಿಯ ಸಂಗತಿಗಳು ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ. ಲೇಖಕ ಶಂಕರ ಬೈಚಬಾಳ ಅವರು ಈ ಕಥೆಯನ್ನ ದಾಖಲಿಸುವುದರ ಮುಖಾಂತರ ದೇಶಿಯ ಸುದ್ದಿ ಮಾರುಕಟ್ಟೆಯಲ್ಲಿ "ಭಾರತ ಸಿಂಹಾಸನ ರಶ್ಮಿ" ಪುಸ್ತಕಕ್ಕೆ ಹಾಗೂ ಭಾರತೀಯ ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. 2409:40F2:12C:40BB:7425:B8FF:FE4F:20D3 ೧೧:೨೨, ೧೯ ಮೇ ೨೦೨೪ (IST)[reply]

ಭಾರತ ಸಿಂಹಾಸನ ರಶ್ಮಿ ಕಾದಂಬರಿಯು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪಡೆದ ಕೃತಿಯಾಗಿದೆ. ಗಾಂಧಿಜಿ ಅವರ ಹೋರಾಟದ ವಿಚಾರಗಳು ಅಲ್ಲಿ ಎದ್ದು ಕಾಣುತ್ತವೆ ಅಲ್ಲಿಯ ಟೊಪ್ಪಿಗೆಯ ಸನ್ನಿವೇಶವಂತೂ ದೇಶದ ಯುವಕರ ಗಮನ ಸೆಳೆಯುತ್ತದೆ. ಶಂಕರ ಬೈಚಬಾಳ ರ ಗ್ರಾಮೀಣ ಪದ ಒಡಪು ಕಥೆ ಸನ್ನಿವೇಶಗಳೂ ಬಹಳ ಮನೋಜ್ನವಾಗಿವೆ

[ಬದಲಾಯಿಸಿ]

Dr 2409:40F2:1046:8106:E06A:CDFF:FEB4:88A7 ೨೩:೨೦, ೨ ನವೆಂಬರ್ ೨೦೨೪ (IST)[reply]