ಅಟಾಶ್ ಬೆಹ್ರಾಮ್ ಅಘಿಯಾರಿ, ಚೀರ ಬಜಾರ್, ಮುಂಬಯಿ.
ಪಾರ್ಸಿ ಸಮುದಾಯದ ಡ್ಯಾಡಿ ಸೇಠ್,'ಅಟಾಶ್ ಬೆಹ್ರಾಮ್ ಅಗಿಯಾರಿ/ಅಘಿಯಾರಿ ',[೧] ದಕ್ಷಿಣ ಮುಂಬಯಿನ 'ಚಿರಾ ಬಜಾರ್' ನ ಬಳಿ ಇದೆ. ಸೋಮವಾರ ೨೩೨ ವರ್ಷ ಮುಗಿಸುತ್ತಿದೆ. ಈ 'ಅಟಾಶ್ ಬೆಹ್ರಾಮ್ ಟೆಂಪಲ್' ಅತಿ ಪುರಾತನ ಆಘಿಯಾರ್ ಗಳಲ್ಲೊಂದೆಂದು ಪರಿಗಣಿಸಲಾಗಿದೆ.(the highest grade of fire temple for Zoroastrians)[೨]
ನಿರ್ಮಾಣಕಾರ್ಯ
[ಬದಲಾಯಿಸಿ]ಈ ಪವಿತ್ರ ಅಗಿಯಾರಿಯನ್ನು(ದೇವಾಲಯವನ್ನು)'ಮುಲ್ಲಾ ಕೌಸ್ ರುಸ್ತುಂ ಜಲಾಲ್' ಎನ್ನುವವರು, ೧೭೮೩ ರಲ್ಲಿ ನಿರ್ಮಿಸಿದರು. ಈಗ ವಿಶ್ವಸಂಸ್ಥೆಯಿಂದ, ಈ ಮಂದಿರವನ್ನು ಹೆರಿಟೇಜ್ ಕಟ್ಟಡವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ, 'ಬಿಳಿ ಎತ್ತಿನ ಬದಲು,' 'ಗೋಟ್ ಪೆನ್' ಇದೆ. ಈ ಭವ್ಯ ಕಟ್ಟಡಕ್ಕೆ ಒಂದು ಸುಂದರ ಪೋರ್ಟಿಕೋ ಇದೆ. ನಡೆಯಲು ಚಾವಣಿಯನ್ನು ಹೊಂದಿದ ಉದ್ದವಾದ ರಸ್ತೆಮಾರ್ಗವಿದೆ. ಆಗಿನ ಸಮಯದ ಪಾರ್ಸಿ ಪ್ರಕಾಶ್ ಪ್ರಕಾರ, 'ಜಶನ್'(prayers) ಮಳೆಯ ದೇವತೆಯನ್ನು ಪ್ರಾರ್ಥಿಸುತ್ತಿದ್ದರು.[೩] ಇದನ್ನು 'ಪಾರ್ಸಿ ಪಂಚಾಯತ್'ಆಯೋಜಿಸುತ್ತಿತ್ತು. ಜುನ್ ೩೦, ೧೮೨೪ ರಂದು ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿದ ಮಾರನೆಯ ದಿನ ಬೆಳಿಗ್ಯೆ ೫ ಗಂಟೆಗೆ ೧೦ ನಿಮಿಷ ಭಾರಿ ಮಳೆ ಬಂದಿದ್ದ ದಾಖಲೆಯಿದೆ. ಹಾಗೆಯೇ ಹಿಂದುಗಳು ಭುಲೆಶ್ವರ್ ದೇವಾಲಯದಲ್ಲಿ ಹವನ-ಹೋಮಗಳನ್ನು ೪ ದಿನಗಳ ಕಾಲ ಸತತವಾಗಿ ನೆರೆವೇರಿಸಿದ್ದರು. ಮಾಹಿಮ್ ನ, ಪೋಚುಗಿಸ್ ಚರ್ಚ್ ನಲ್ಲಿ ಕ್ರಿಶ್ಚಿಯನ್ ಬಾಂಧವರು ಸಹಿತ ತಮ್ಮ ವಿಶೇಷ ಸಾಮೂಹಿಕ ಪ್ರಾರ್ಥೆನಾ ಸಭೆಯನ್ನು ಇಟ್ಟುಕೊಂಡಿದ್ದರು.