ಯಾಸ್ಮೀನ್ ಹಮೀದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಾಸ್ಮೀನ್ ಹಮೀದ್ (ಜನನ ೧೮ ಮಾರ್ಚ್ ೧೯೫೧) ಪಾಕಿಸ್ತಾನ ಮೂಲದ ಕವಿಯಿತ್ರಿ, ಅನುವಾದಕಿ ಮತ್ತು ಶಿಕ್ಷಣ ತಜ್ಞರು.

ಬಾಲ್ಯ[ಬದಲಾಯಿಸಿ]

ಯಾಸ್ಮೀನ್ ಹಮೀದ್ ಪಾಕಿಸ್ತಾನದ ಲಾಹೋರ್ ನಲ್ಲಿ ೧೮ ಮಾರ್ಚ್ ೧೯೫೧ರಂದು ಜನಿಸಿದರು. [೧]

ಶಿಕ್ಷಣ[ಬದಲಾಯಿಸಿ]

ಪಾಕಿಸ್ತಾನದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ, ಹೋ ಎಕನಾಮಿಕ್ಸ್ ಕಾಲೇಜಿನಿಂದ ೧೯೭೦ರಲ್ಲಿ ಬಿ.ಎಸ್ಸಿ, ೧೯೭೨ರಲ್ಲಿ ದೇಹಶಾಸ್ತ್ರ ಮತ್ತು ಪೋಷಕಾಂಶ ಆಹಾರ ವಿಷಯದಲ್ಲಿ ಎಂ.ಎಸ್ಸಿ ಪಡೆದರು. ಯಾಸ್ಮೀನ್ ಹಮೀದ್ ಪಾಕಿಸ್ತಾನದ ಪ್ರಮುಖ ಉರ್ದು ಕವಿಯಿತ್ರಿ, ಅನುವಾದಕಿ ಮತ್ತು ಅಧ್ಯಾಪಕಿ.

ಶಿಕ್ಷಣ[ಬದಲಾಯಿಸಿ]

ಪಾಕಿಸ್ತಾನಿ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ೧೯೭೦ ರಲ್ಲಿ ಬಿ. ಎಸ್ಸಿ, ೧೯೭೨ ರಲ್ಲಿ ಎಂ. ಎಸ್ಸಿ ಪದವಿ ಅನ್ನು ಪಡೆದ ಯಾಸ್ಮೀನ್ ಬಾಲ್ಯದಲ್ಲಿ ಇಂಗ್ಲೀಷ್ ಸಾಹಿತಿ ಎನಿಡ್ ಬ್ಲೈಟನ್ ಬರೆದ ದಿ ನಾಟಿಯೆಸ್ಟ್ ಗರ್ಲ್ ಇನ್ ದಿ ಸ್ಕೂಲ್ ಪುಸ್ತಕದಿಂದ ಪ್ರಭಾವಿತಳಾದೆ ಎಂದು ಹೇಳಿದ್ದಾರೆ.[೨] ಪ್ರಸಕ್ತ ಯಾಸ್ಮಿನ್ ರವರು ನಿವೃತ್ತಿಯ ನಂತರ ಲಾಹೋರ್ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ಸೈನ್ಸ್ ಇಲಾಖೆಯ ಸಮಾಜಶಾಸ್ತ್ರ ವಿಭಾಗದಲ್ಲಿ ರೆಸಿಡೆನ್ಸ್ ಗೌರವಾನ್ವಿತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬರವಣಿಗೆ[ಬದಲಾಯಿಸಿ]

ಯಾಸ್ಮೀನ್ ಲಾಹೋರ್ ವಿಶ್ವವಿದ್ಯಾಲಯದಲ್ಲಿ ತಮ್ಮ ವೃತ್ತಿ ಬದುಕು ಆರಂಭ ಮಾಡಿದರು. ವಿಜ್ಞಾನದಲ್ಲಿ ಉನ್ನತ ಪದವಿ ಪಡೆದ ಬಳಿಕವೂ ತಮ್ಮ ಕಾವ್ಯ ತುಡಿತದ ಕಾರಣ ಸಮಾಜ ಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಮತ್ತು ಅಧ್ಯಾಪನೆ ಮಾಡಿದ ಹೆಗ್ಗಳಿಕೆ ಯಾಸ್ಮೀನ್ ರದ್ದು. ಪಾಕಿಸ್ತಾನ ಸರ್ಕಾರದ ಸಾಂಸ್ಕೃತಿಕ ಇಲಾಖೆಯ ಪ್ರಾಯೋಜಕತ್ವದ ಇಂಗ್ಲೀಷ್ ಕಾರ್ಯಕ್ರಮಗಳಿಗೆ ಯಾಸ್ಮೀನ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ೧೯೯೬ ರಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮಕ್ಕೆ ರೂವಾರಿ ಆಗಿದ್ದರು. ಐದು ಕವನ ಸಂಕಲನಗಳನ್ನು ಯಾಸ್ಮೀನ್ ಹೊರತಂದಿದ್ದಾರೆ. ೧೯೮೮ ರಲ್ಲಿ ಪಸ್ ಏ ಆಯಿನಾ (ಕನ್ನಡಿಯ ಹಿಂದೆ ಕಂಡದ್ದು) ಪ್ರಕಟಣೆ ಆಗಿದೆ. ೧೯೯೧ ರಲ್ಲಿ ಹಿಸಾರ್ ಏ ಬೇ ದರ್ ಓ ದೀವಾರ್ (ಬಾಗಿಲು ಇಲ್ಲದ ಗೋಡೆಯ ಕೋಟೆ) ಪ್ರಕಟಣೆ ಆಗಿದೆ. ೧೯೯೬ ರಲ್ಲಿ ಆಧಾ ದಿನ ಆಧಿ ರಾತ್ (ಅರ್ಧ ದಿನ ಅರ್ಧ ರಾತ್ರಿ) ಪ್ರಕಟಣೆ ಆಗಿದೆ. ೨೦೦೧ ರಲ್ಲಿ ಫನಾ ಭಿ ಏಕ್ ಶರಾಬ್ (ಮರಣ ಕೂಡಾ ಒಂದು ಮದ್ಯವೇ) ಪ್ರಕಟಣೆ ಆಗಿದೆ. ೨೦೦೭ ರಲ್ಲಿ ದೂಸ್ರಿ ಜಿಂದಗಿ (ಎರಡನೆಯ ಬದುಕು) ಪ್ರಕಟಣೆ ಆಗಿದೆ. ದೂಸ್ರಿ ಜಿಂದಗಿ ೧೯೮೮ ರಿಂದ ೨೦೦೧ ರವರೆಗಿನ ಅವರ ಸಮಗ್ರ ಕವಿತೆಗಳ ಸಂಪುಟ ಆಗಿದೆ.[೩]
ಕರಾಚಿ ಸಾಹಿತ್ಯ ಸಮ್ಮೇಳನ,[೪] ಫೈಜ಼್ ಅಂತರ್ ರಾಷ್ಟ್ರೀಯ ಸಾಹಿತ್ಯ ಸಮ್ಮೇಳನ[೫] ಹೀಗೆ ಹಲವು ಗೋಷ್ಠಿಗಳಲ್ಲಿ ಮುಖ್ಯ ಭಾಷಣಕಾರರಾಗಿ, ನಿರ್ವಾಹಕಿಯಾಗಿ ಕಾರ್ಯ ನಿರ್ವಹಿಸಿದ ಹಿರಿಮೆ ಯಾಸ್ಮೀನ್ ರದ್ದು.

ಪ್ರಶಸ್ತಿ[ಬದಲಾಯಿಸಿ]

ಸಾಹಿತ್ಯ ಶಿಕ್ಷಣ ಮತ್ತು ಅನುವಾದ ಹೀಗೆ ಮೂರು ವಿವಿಧ ಕಾರ್ಯರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯಾಸ್ಮೀನ್ ರಿಗೆ ಹಲವು ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಮುಖ್ಯವಾದದ್ದು ಡಾಕ್ಟರ್ ಅಲ್ಲಮ ಮೊಹಮ್ಮದ್ ಇಕ್ಬಾಲ್ ಪ್ರಶಸ್ತಿ. ೨೦೦೮ ರಲ್ಲಿ ತಂಗ ಇಂತಿಯಾಜ್ ಪ್ರಶಸ್ತಿಯನ್ನು ೨೦೧೮ ರಲ್ಲಿ ಪಾಕಿಸ್ತಾನ ಸರ್ಕಾರದಿಂದ ಸಾಹಿತ್ಯ ಕೊಡುಗೆಗೆ ನೀಡಲಾಗಿದೆ ೨೦೦೬ ಮಾರ್ಚ್ ೮ ರಂದು ಅಂತರಾಷ್ಟ್ರೀಯ ಮಹಿಳಾ ದಿನದಂದು ಪಾಕಿಸ್ತಾನದ ಪಂಜಾಬ್ ರಾಜ್ಯ ಸರ್ಕಾರ ಫಾತಿಮಾ ಸಾಹಿತ್ಯ ನೀಡಿ ಗೌರವಿಸಿದೆ. 2001ರಲ್ಲಿ ಕವನ ಸಂಕಲನಕ್ಕೆ ಅಹ್ಮದ್ ನದೀಂ ಕಾಸ್ಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಯಾಸ್ಮಿನ್ ಹಮೀದ್ ರವರು ದಿನಪತ್ರಿಕೆಯಲ್ಲಿ ಪ್ರತಿ ತಿಂಗಳು ಹೊಸ ಪುಸ್ತಕಗಳು ಲೇಖಕರು ಲೇಖನವನ್ನು ಪ್ರಕಟಿಸುತ್ತಾರೆ. ಯಾಸ್ಮಿನ್ ಇಂಗ್ಲೀಷ್ ಭಾಷೆಯಿಂದ ಹಲವು ಕವನಗಳನ್ನು ಉರ್ದು ಭಾಷೆಗೆ ಅನುವಾದ ಮಾಡಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://www.yasmeenhameed.com/about/
  2. https://www.dawn.com/news/743155
  3. https://www.rekhta.org/Poets/yasmeen-hameed/profile
  4. "ಆರ್ಕೈವ್ ನಕಲು". Archived from the original on 2019-08-12. Retrieved 2020-11-30.
  5. https://tribune.com.pk/story/995505/faiz-festival-master-critic-eulogises-immortal-poet