ವಿಕ್ರಮಶಿಲಾ ಗಂಗಾ ಡಾಲ್ಫಿನ್ ಅಭಯಾರಣ್ಯ
ಗೋಚರ
ವಿಕ್ರಮಶಿಲಾ ಗಂಗಾ ಡಾಲ್ಫಿನ್ ಅಭಯಾರಣ್ಯವು ಭಾರತದ ಬಿಹಾರ ರಾಜ್ಯದ ಭಾಗಲ್‍ಪುರ್ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಈ ಅಭಯಾರಣ್ಯವು ಗಂಗಾ ನದಿಯ ೬೦ ಕಿ.ಮಿ. ಉದ್ದದ ಹರಹಾಗಿದೆ. ೧೯೯೧ರಲ್ಲಿ ಹೆಸರಿಸಲ್ಪಟ್ಟ ಇದು ಏಷ್ಯಾದಲ್ಲಿನ ಅಳಿವಿನಂಚಿನಲ್ಲಿರುವ ಗಂಗಾ ಡಾಲ್ಫಿನ್‍ಗಳಿಗೆ ರಕ್ಷಿತ ಪ್ರದೇಶವಾಗಿದೆ. ಒಂದು ಕಾಲದಲ್ಲಿ ಹೇರಳವಾಗಿ ಕಾಣುತ್ತಿದ್ದ ಇವುಗಳ ಕೆಲವೇ ನೂರು ಉಳಿದುಕೊಂಡಿವೆ. ಅದರಲ್ಲಿ ಅರ್ಧದಷ್ಟು ಇಲ್ಲಿ ಕಂಡುಬರುತ್ತವೆ.
ಗಂಗಾ ಡಾಲ್ಫಿನ್‌ಗಳನ್ನು ಭಾರತದ ರಾಷ್ಟ್ರೀಯ ಜಲ ಪ್ರಾಣಿ ಎಂದು ಘೋಷಿಸಲಾಗಿದೆ.[೧] ಅಕ್ಟೋಬರ್ 5, 2009 ರಂದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರದ (ಎನ್‌ಜಿಆರ್‌ಬಿಎ) ಮೊದಲ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.[೨][೩]
ಉಲ್ಲೇಖಗಳು
[ಬದಲಾಯಿಸಿ]- ↑ [೧] Archived January 22, 2010, ವೇಬ್ಯಾಕ್ ಮೆಷಿನ್ ನಲ್ಲಿ.
- ↑ "River dolphin crowned India's aquatic animal: Latest Headlines, News - India Today". Indiatoday.intoday.in. 2009-10-06. Archived from the original on 2009-10-10. Retrieved 2014-01-24.
- ↑ "Endangered dolphins made national aquatic animal - India Environment Portal | News, reports, documents, blogs, data, analysis on environment & development | India, South Asia". India Environment Portal. Archived from the original on 2013-12-17. Retrieved 2014-01-24.
ಹೊರಗಿನ ಕೊಂಡಿಗಳು
[ಬದಲಾಯಿಸಿ]- NDTV Survey of 7 wonders of India
- [೨]David Attenborough Video on Gangetic dolphins
- Goddess Ganga and the Gangetic Dolphin on Biodiversity of India