ರಜರಪ್ಪಾ
ರಜರಪ್ಪಾ ಭಾರತದ ಝಾರ್ಖಂಡ್ ರಾಜ್ಯದ ರಾಮ್‍ಗಢ್ ಜಿಲ್ಲೆಯಲ್ಲಿನ ಒಂದು ತೀರ್ಥಯಾತ್ರಾ ಕೇಂದ್ರವಾಗಿದೆ. ಇಲ್ಲಿ ಜಲಪಾತವೂ ಇದೆ.
ಜಲಪಾತ
[ಬದಲಾಯಿಸಿ]ಭೇರಾ ಅಥವಾ ಭೈರವಿ ನದಿಯು ದಾಮೋದರ್ ನದಿಯನ್ನು ಕೂಡುತ್ತದೆ. ಇದು ೯.೧ ಮೀಟರ್ (೩೦ ಅಡಿ) ಎತ್ತರದಿಂದ ಧುಮುಕುತ್ತದೆ. ಇದು ಒಂದು ರಮಣೀಯ ತಾಣವಾಗಿದ್ದು ಭೇಟಿನೀಡುವವರು ದೋಣಿ ವಿಹಾರ ಸೌಕರ್ಯಗಳನ್ನು ಬಳಸಬಹುದು ಮತ್ತು ನಯನಮನೋಹರ ಬಂಡೆ ರಚನೆಯನ್ನು ನೋಡಬಹುದು.[೧][೨]
ಭೌಗೋಳಿಕ ಮಹತ್ವ
[ಬದಲಾಯಿಸಿ]ರಜರಪ್ಪಾ ಜಲಪಾತವು ಬಹಳ ದೊಡ್ಡ ಭೌಗೋಳಿಕ ಮಹತ್ವವನ್ನು ಹೊಂದಿದೆ. ರಜರಪ್ಪಾದಲ್ಲಿನ ದಾಮೋದರ್ ಕಣಿವೆಯು ಬಹುಆವರ್ತಕ ಕಣಿವೆ ಅಥವಾ ಸ್ಥಳಾಕೃತಿ ಅಸಾಂಗತ್ಯದ ವಿಶಿಷ್ಟ ಉದಾಹರಣೆಯಾಗಿದೆ. ಎರಡು ಅಂತಸ್ತಿನ ಕಣಿವೆಯು ಇದರ ಲಕ್ಷಣವಾಗಿದೆ.
ತೀರ್ಥಯಾತ್ರಾ ಸ್ಥಳ
[ಬದಲಾಯಿಸಿ]ರಜರಪ್ಪಾ ಒಂದು ಹಿಂದೂ ತೀರ್ಥಯಾತ್ರಾ ಸ್ಥಳವಾಗಿದ್ದು ದಿನಕ್ಕೆ ಅಂದಾಜು 2,500-3,000 ಜನರನ್ನು ಆಕರ್ಷಿಸುತ್ತದೆ.[೩] ಇಲ್ಲಿರುವ ಛಿನ್ನಮಸ್ತ (ಛಿನ್ನಮಸ್ತಿಕಾ ಎಂದೂ ಪರಿಚಿತವಾಗಿದೆ) ದೇವಸ್ಥಾನದಲ್ಲಿ ಕಮಲದ ತಳಪಾಯದಲ್ಲಿನ ಕಾಮದೇವ ಮತ್ತು ರತಿಯ ದೇಹಗಳ ಮೇಲೆ ನಿಂತಿರುವ ಛಿನ್ನಮಸ್ತ ದೇವಿಯ ಶಿರವಿಲ್ಲದ ಪ್ರತಿಮೆಯು ಮುಖ್ಯ ಆಕರ್ಷಣೆಯಾಗಿದೆ. ಛಿನ್ನಮಸ್ತ ದೇವಾಲಯವು ಅದರ ತಾಂತ್ರಿಕ ವಾಸ್ತುಕಲಾ ವಿನ್ಯಾಸದ ಶೈಲಿಗೆ ಬಹಳ ಜನಪ್ರಿಯವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Rajrappa Falls". india9. Retrieved 2010-04-20.
- ↑ Dr. B.R. Kishore, Dr. Shiv Sharma. India - A Travel Guide. Diamond Pocket Books (P) Ltd. p. 301. ISBN 9788128400674.
- ↑ "Rajrappa". Hazaribagh district administration. Archived from the original on 2009-06-19. Retrieved 2010-04-20.