ವಿಷಯಕ್ಕೆ ಹೋಗು

ಚಿತ್ರಕೋಟ್ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿತ್ರಕೋಟ್ ಜಲಪಾತ (ಹಿಂದಿ:चित्रकोट जलप्रपात) ಇಂದ್ರಾವತಿ ನದಿಯ ಮೇಲೆ ನಿರ್ಮಿತವಾದ ಒಂದು ನಿಸರ್ಗಿಕ ಜಲಪಾತವಾಗಿದೆ. ಇದು ಭಾರತದ ಛತ್ತೀಸ್‌ಘಡ್ ರಾಜ್ಯದ ಬಸ್ತರ್ ಜಿಲ್ಲೆಯ ಜಗ್ದಾಲ್‍ಪುರ್‌ನ ಪಶ್ಚಿಮಕ್ಕೆ ಸುಮಾರು ೩೮ ಕಿಲೊಮೀಟರ್ (೨೪ ಮೈಲಿ) ದೂರದಲ್ಲಿ ಸ್ಥಿತವಾಗಿದೆ.

ಈ ಜಲಪಾತದ ಎತ್ತರ ಸುಮಾರು ೨೯ ಮೀಟರ್‌ನಷ್ಟಿದೆ (೯೫ ಅಡಿ).[][] ಇದು ಭಾರತದ ಅತಿ ಅಗಲದ ಜಲಪಾತವಾಗಿದ್ದು ಮಳೆಗಾಲದ ಅವಧಿಯಲ್ಲಿ ಸುಮಾರು ೩೦೦ ಮೀಟರ್ (೯೮೦ ಅಡಿ) ಅಗಲ ಮುಟ್ಟುತ್ತದೆ.[] ಇದರ ಅಗಲ ಮತ್ತು ಮಳೆಗಾಲದ ಅವಧಿಯಲ್ಲಿ ಇದರ ವ್ಯಾಪಕ ಕುದುರೆಲಾಳ ಆಕಾರದ ಕಾರಣದಿಂದ, ಇದನ್ನು ಹಲವುವೇಳೆ "ಭಾರತದ ನಯಾಗರ ಜಲಪಾತ" ಎಂದು ಕರೆಯಲಾಗುತ್ತದೆ.[]

ಶಿವನಿಗೆ ಸಮರ್ಪಿತವಾದ ಒಂದು ಸಣ್ಣ ಹಿಂದೂ ದೇವಸ್ಥಾನ ಮತ್ತು "ಪಾರ್ವತಿ ಗುಹೆಗಳು" ಎಂದು ಕರೆಯಲ್ಪಡುವ ಹಲವಾರು ನೈಸರ್ಗಿಕವಾಗಿ ಸೃಷ್ಟಿಯಾದ ಸುಂದರ ಗುಹೆಗಳು ಚಿತ್ರಕೋಟ್ ಜಲಪಾತದ ಎಡ ದಂಡೆಯ ಮೇಲೆ ಸ್ಥಿತವಾಗಿವೆ. ಜಗ್ದಾಲ್‍ಪುರ್‌ನ ಬಯಲು ಪ್ರದೇಶದಲ್ಲಿ ಹರಿಯುವಾದ ಇದರ ಅಡ್ಡಾದಿಡ್ಡಿ ಸ್ವರೂಪದ ಕಾರಣದಿಂದ ಈ ನದಿಯು ಜಲಪಾತದ ಪ್ರವಾಹಕ್ಕೆ ಎದುರಾಗಿ ನಿಧಾನವಾಗಿ ಹರಿಯುತ್ತದೆ. ನದಿ ಕಣಿವೆಯ ಈ ಹರವು ಬಹಳ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Chitrakote Waterfalls, Bastar". Chhattisgarh Tourism Board. Archived from the original on 26 June 2015. Retrieved 25 June 2015.
  2. Kale 2014.
  3. Singh 2010.
  4. Puffin Books (15 November 2013). The Puffin Book of 1000 Fun Facts. Penguin Books Limited. p. 12. ISBN 978-93-5118-405-8.


ಹೊರಗಿನ ಕೊಂಡಿಗಳು

[ಬದಲಾಯಿಸಿ]