ಕೋಪಿ ಲುವಾಕ್
ಕೋಪಿ ಲುವಾಕ್ ತಾಳೆಬೆಕ್ಕು (ಪ್ಯಾರಾಡಾಕ್ಸರಸ್ ಹರ್ಮಾಫ಼್ರೋಡಿಟಸ್) ತಿಂದು ಮಲವಿಸರ್ಜನೆ ಮಾಡಿರುವ, ಭಾಗಶಃ ಪಚನಗೊಂಡಿರುವ ಕಾಫಿ ಚೆರಿಗಳನ್ನು ಹೊಂದಿರುವ ಕಾಫಿ. ಹಾಗಾಗಿ ಇದನ್ನು ಸಿವೆಟ್ ಕಾಫ಼ಿ ಎಂದೂ ಕರೆಯಲಾಗುತ್ತದೆ. ಚೆರಿಗಳು ತಾಳೆಬೆಕ್ಕಿನ ಕರುಳುಗಳ ಮೂಲಕ ಸಾಗಿದಾಗ ಅವು ಕಿಣ್ವಿಸುತ್ತವೆ. ಇತರ ಮಲವಸ್ತುಗಳೊಂದಿಗೆ ಮಲವಿಸರ್ಜನೆಯಾದ ಬಳಿಕ ಇವನ್ನು ಸಂಗ್ರಹಿಸಲಾಗುತ್ತದೆ.[೧] ಈ ಉದ್ದೇಶಕ್ಕಾಗಿ ತಾಳೆಬೆಕ್ಕುಗಳನ್ನು ಕಾಡುಗಳಲ್ಲಿ ಹೆಚ್ಚೆಚ್ಚು ಹಿಡಿದು ವ್ಯಾಪಾರ ಮಾಡಲಾಗುತ್ತದೆ.[೨]
ಕೋಪಿ ಲುವಾಕ್ನ್ನು ಮುಖ್ಯವಾಗಿ ಇಂಡೊನೇಷ್ಯಾದ ದ್ವೀಪಗಳಾದ ಸುಮಾತ್ರಾ, ಜಾವಾ, ಬಾಲಿ, ಸುಲವೇಸಿ ಮತ್ತು ಪೂರ್ವ ಟೀಮೊರ್ನಲ್ಲಿ ಉತ್ಪಾದಿಸಲಾಗುತ್ತದೆ.
ಈ ಪ್ರಕ್ರಿಯೆಯು ಎರಡು ವಿಧಾನಗಳಿಂದ ಕಾಫಿಯನ್ನು ಸುಧಾರಿಸಬಹುದು ಎಂದು ಕಾಫಿ ಬೀಜಗಳು ಉತ್ಪಾದಕರು ವಾದಿಸುತ್ತಾರೆ, ಆಯ್ಕೆ – ತಾಳೆಬೆಕ್ಕುಗಳು ಕೇವಲ ನಿರ್ದಿಷ್ಟ ಚೆರಿಗಳನ್ನು ತಿನ್ನಲು ಆಯ್ದುಕೊಳ್ಳುತ್ತವೆ – ಮತ್ತು ಪಚನಕ್ರಿಯೆ – ಪ್ರಾಣಿಯ ಜಠರ ವ್ಯೂಹದಲ್ಲದಿನ ಜೈವಿಕ ಅಥವಾ ರಾಸಾಯನಿಕ ಕಾರ್ಯವಿಧಾನಗಳು ಕಾಫಿ ಚೆರಿಗಳ ರಚನಾಂಶಗಳನ್ನು ಮಾರ್ಪಡಿಸುತ್ತವೆ.
ಈ ಕಾಫಿಯನ್ನು ವಿಶ್ವದಲ್ಲಿನ ಅತ್ಯಂತ ದುಬಾರಿ ಕಾಫಿಗಳಲ್ಲಿ ಒಂದೆಂದು ಕರೆಯಲಾಗಿದೆ. ಇದರ ಚಿಲ್ಲರೆ ಬೆಲೆಗಳು ಪ್ರತಿ ಕೆ.ಜಿ.ಗೆ €550 ರಿಂದ US$700 ವರೆಗೆ ಮುಟ್ಟುತ್ತವೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ Mahendradatta, M.; Tawali, A. B. (2012). Comparison of chemical characteristics and sensory value between luwak coffee and original coffee from Arabica (Coffea arabica L) and Robusta (Coffea canephora L) varieties (PDF). Makassar: Food Science and Technology Study Program, Department of Agricultural Technology, Faculty of Agriculture, Hasanuddin University. Archived from the original (PDF) on 2013-10-17. Retrieved 2020-06-13.
- ↑ Shepherd, C. (2012). "Observations of small carnivores in Jakarta wildlife markets, Indonesia, with notes on trade in Javan Ferret Badger Melogale orientalis and on the increasing demand for Common Palm Civet Paradoxurus hermaphroditus for civet coffee production". Small Carnivore Conservation. 47: 38–41.
- ↑ Lee, H. J. (2006). "Most expensive coffee". Forbes. Retrieved 17 November 2011.