ಪೋ ಚಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೋ ಚಾ (ಬಟರ್ ಟೀ) ನೇಪಾಳ, ಭೂತಾನ್, ಭಾರತ (ವಿಶೇಷವಾಗಿ ಲಡಾಖ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ) ಮತ್ತು ಟಿಬೆಟ್‍ನಂತಹ ಹಿಮಾಲಯ ಪ್ರದೇಶಗಳಲ್ಲಿನ ಜನರ ಪಾನೀಯವಾಗಿದೆ. ಪೋ ಚಾ ಬಹುಶಃ ಬೃಹತ್ ಟಿಬೆಟ್ ಮತ್ತು ಭಾರತೀಯ ಉಪಖಂಡದ ನಡುವಿನ ಹಿಮಾಲಯ ಪ್ರದೇಶದಲ್ಲಿ ಹುಟ್ಟಿಕೊಂಡಿತು. ಸಾಂಪ್ರದಾಯಿಕವಾಗಿ, ಇದನ್ನು ಚಹಾದ ಎಲೆಗಳು, ಚಮರೀಮೃಗದ ಬೆಣ್ಣೆ, ನೀರು ಮತ್ತು ಉಪ್ಪಿನಿಂದ ತಯಾರಿಸಲಾಗುತ್ತದೆ. ಆದರೆ ಅದರ ವ್ಯಾಪಕ ಲಭ್ಯತೆ ಮತ್ತು ಕಡಿಮೆ ವೆಚ್ಚವನ್ನು ಪರಿಗಣಿಸಿ ಆಕಳ ಹಾಲಿನಿಂದ ತಯಾರಿಸಿದ ಬೆಣ್ಣೆಯನ್ನು ಹೆಚ್ಚೆಚ್ಚು ಬಳಸಲಾಗುತ್ತಿದೆ.

ಪೋ ಚಾವನ್ನು ಕುಡಿಯುವುದು ಟಿಬೇಟಿಯನ್ ಜೀವನದ ಒಂದು ಖಾಯಂ ಭಾಗವಾಗಿದೆ. ಕೆಲಸದ ಮುನ್ನ, ಒಬ್ಬ ಟಿಬೇಟಿಯನ್ ಸಾಮಾನ್ಯವಾಗಿ ಈ ಪಾನೀಯದ ಹಲವಾರು ಬೋಗುಣಿಗಳನ್ನು ಸವಿಯುತ್ತಾನೆ, ಮತ್ತು ಇದನ್ನು ಅತಿಥಿಗಳಿಗೆ ಯಾವಾಗಲೂ ಬಡಿಸಲಾಗುತ್ತದೆ. ಬೆಣ್ಣೆಯು ಮುಖ್ಯ ಘಟಕಾಂಶವಾಗಿರುವುದರಿಂದ, ಪೋ ಚಾ ಹೇರಳ ಶಕ್ತಿಯನ್ನು ಒದಗಿಸುತ್ತದೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಪೋ_ಚಾ&oldid=1060526" ಇಂದ ಪಡೆಯಲ್ಪಟ್ಟಿದೆ