ವಿಷಯಕ್ಕೆ ಹೋಗು

ಪರೋಟಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪರೋಟಾ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಪದರಗಳಿರುವ ಚಪ್ಪಟೆ ಬ್ರೆಡ್ ಆಗಿದೆ. ಇದು ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿದೆ. ಇದನ್ನು ಮೈದಾದಿಂದ ತಯಾರಿಸಲಾಗುತ್ತದೆ. ಇದು ದಕ್ಷಿಣ ಭಾರತದಲ್ಲಿ ಸಾಮಾನ್ಯ ಬೀದಿ ಆಹಾರವಾಗಿದೆ, ವಿಶೇಷವಾಗಿ ಕೇರಳದಲ್ಲಿ, ಮತ್ತು ನಂತರ ಕರ್ನಾಟಕ, ತಮಿಳು ನಾಡು, ಮಹಾರಾಷ್ಟ್ರಗಳಲ್ಲಿ. ಕಾಯ್ನ್ ಪರೋಟಾ, ಮಲಬಾರಿ ಪರೋಟಾ, ಬೆರೋಟಾ, ಇತ್ಯಾದಿ ಸೇರಿದಂತೆ ವಿವಿಧ ಬಗೆಗಳ ಪರೋಟಾಗಳಿವೆ.

ಕೆಲವು ಸ್ಥಳಗಳಲ್ಲಿ, ಇದನ್ನು ಮದುವೆಗಳು, ಧಾರ್ಮಿಕ ಉತ್ಸವಗಳು ಮತ್ತು ಹಬ್ಬದೂಟಗಳಲ್ಲಿಯೂ ಬಡಿಸಲಾಗುತ್ತದೆ. ಇದನ್ನು ಮೈದಾ ಹಿಟ್ಟು, ಮೊಟ್ಟೆ (ಕೆಲವು ಪಾಕವಿಧಾನಗಳಲ್ಲಿ), ಎಣ್ಣೆ ಅಥವಾ ತುಪ್ಪ ಮತ್ತು ನೀರು ಸೇರಿಸಿ, ನಾದಿ ತಯಾರಿಸಲಾಗುತ್ತದೆ. ಕಣಕವನ್ನು ತೆಳು ಪದರಗಳಾಗಿ ಬಡಿಯಲಾಗುತ್ತದೆ. ಆಮೇಲೆ ಈ ತೆಳುವಾದ ಪದರಗಳನ್ನು ಬಳಸಿ ಚೆಂಡಿನಾಕಾರಾದ ಸುರುಳಿ ಸುತ್ತಿ ರೂಪಿಸಲಾಗುತ್ತದೆ. ಈ ಚೆಂಡಿನಾಕಾರದ ಹಿಟ್ಟಿನ ತುಂಡನ್ನು ಲಟ್ಟಿಸಿ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕರಿಯಲಾಗುತ್ತದೆ.[][]

ಉಲ್ಲೇಖಗಳು

[ಬದಲಾಯಿಸಿ]
  1. "Kerala Paratha Recipe".
  2. Kannampilly, Vijayan (2003). The essential Kerala cookbook. Penguin Books. p. 179. ISBN 0-14-302950-9.


"https://kn.wikipedia.org/w/index.php?title=ಪರೋಟಾ&oldid=994363" ಇಂದ ಪಡೆಯಲ್ಪಟ್ಟಿದೆ