ರಾ. ಸತ್ಯನಾರಾಯಣ
ಗೋಚರ
ರಾಸ ಎಂದೇ ಪ್ರಖ್ಯಾತರಾದ ರಾ. ಸತ್ಯನಾರಾಯಣ (೮ ಮೇ ೧೯೨೭ - ೧೭ ಜನವರಿ ೨೦೨೦) ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಬಹುಶ್ರುತ ವಿದ್ವಾಂಸ ಮತ್ತು ಸಂಪನ್ಮೂಲ ವ್ಯಕ್ತಿ. ಸಂಗೀತಶಾಸ್ತ್ರದ ಹಲವು ಕೃತಿಗಳ ಸಂಪಾದನೆ, ಅನುವಾದ ಮಾಡಿ ಆ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಸಂಗೀತಶಾಸ್ತ್ರ ಮಾತ್ರವಲ್ಲದೇ ಪ್ರಯೋಗ ನೃತ್ಯ, ಯೋಗ, ವ್ಯಾಕರಣ, ಮಂತ್ರತಂತ್ರ, ವೇದ-ವೇದಾಂತ, ಮೀಮಾಂಸೆ, ಛಂದಸ್ಸು, ಗಮಕ ಹೀಗೆ ಹಲವು ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿದ್ದರು.
- ಹುಟ್ಟಿದ್ದು ೮ ಮೇ ೧೯೨೭, ಮೈಸೂರಿನಲ್ಲಿ. ಇವರದ್ದು ಸಂಗೀತಗಾರರ ಮನೆತನ. ತಂದೆ ರಾಮಯ್ಯ ಜಯಚಾಮರಾಜ ಒಡೆಯರ್ ಅವರ ಆಸ್ಥಾನದಲ್ಲಿ ಸಂಗೀತ ವಿದ್ವಾಂಸರಾಗಿದ್ದರು, ತಾಯಿ ವರಲಕ್ಷ್ಮಮ್ಮ. ಅಣ್ಣಂದಿರಾದ ಚಂದ್ರಶೇಖರಯ್ಯ ಮತ್ತು ಸೀತಾರಾಮ ಅವರು 'ಮೈಸೂರು ಸಹೋದರರು' ಎಂದೇ ಗಾಯನದಲ್ಲಿ ಹೆಸರುವಾಸಿ. ತಮ್ಮ ರಾ. ವಿಶ್ವೇಶ್ವರನ್ ವೈಣಿಕರು.
- ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ. ಇನ್ ಆರ್ಗ್ಯಾನಿಕ್ ಕೆಮಿಸ್ಟ್ರಿ ಪ್ರೊಫೆಸರ್.
- ಪುತ್ರ ರಾ. ನಂದಕುಮಾರ್ ಹಾಗೂ ಪುತ್ರಿ ರೋಹಿಣಿ ಸುಬ್ಬರತ್ನ.
ಕೃತಿಗಳು
[ಬದಲಾಯಿಸಿ]- ಸಂಗೀತರತಾಕರ ಗ್ರಂಥದ ಸ್ವರಗತಾದ್ಯಾಯದ ಮೊದಲ ೨೭೬ ಶ್ಲೋಕಗಳ ಅನುವಾದ, ಟಿಪ್ಪಣಿ, ವಿವರಣೆ ಗ್ರಂತಥ
- 'ನರ್ತನನಿರ್ಣಯಿ' ಗ್ರಂಥದ ಇಂಗ್ಲೀಶ್ ಅನುವಾದ, ವಿವರಣೆ (ಮೂರು ಸಂಪುಟ)
- ಪುಂಡರೀಕಮಾಲಾ
- ಚತುರ್ದಂಡಿ ಪ್ರಕಾಶಿಕಾ
- ಶ್ರೀವಿದ್ಯಾಷೋಡಶಿಕಾ
- ವೀಣಾಲಕ್ಷಣಾ ವಿಮರ್ಶೆ
- ಕರ್ನಾಟಕ ಸಂಗೀತವಾಹಿನಿ
- ಭರತನಾಟ್ಯ-ಎ ಕ್ರಿಟಿಕಲ್ ಸ್ಟಡಿ
- ಬೃಹದ್ದೇಶೀ
- ಮ್ಯೂಸಿಕ್ ಆಫ್ ಮಾಂಕ್ಸ್
- ಮೈಸೂರಿನ ನಾಲ್ಕು ಸಂಗೀತರಾಜರು
- ಏಳೆ
- ಭಾರತೀಯ ಸಂಗೀತದಲ್ಲಿ ಪರಿಭಾಷಾ ಪ್ರಯೋಗ
- ಕರ್ನಾಟಕ ಮ್ಯೂಸಿಕ್: ಆಸ್ ಎಸ್ತೆಟಿಕ್ ಫಾರ್ಮ್
- ಸೃಷ್ಟಿ- ದಿ ಸ್ಕಾಲಿಕ್ ಫೌಂಡೇಷನ್
- ಕರ್ನಾಟಕ ಸಂಗೀತ ಸುಳಾದಿಗಳು ಮತ್ತು ಊಗಭೋಗಾದಿಗಳು
- ಪದ್ಮಶ್ರೀ ಪುರಸ್ಕಾರ, ೨೦೧೮
- ಕಾಶಿ ವಿವಿಯ ಮಹೋಪಾಧ್ಯಾಯ ಪ್ರಶಸ್ತಿ
- ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ
- ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
- ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ, ೨೦೧೪
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ನಿಧನ
[ಬದಲಾಯಿಸಿ]೧೭ಜನವರಿ ೨೦೨೦ರಂದು ಮೈಸೂರಿನ ತಮ್ಮ ನಿವಾಸದಲ್ಲಿ ಮರಣಹೊಂದಿದರು. ಅವರಿಗೆ ೯೩ ವರ್ಷ ವಯಸ್ಸಾಗಿತ್ತು.[೩]
ಉಲ್ಲೇಖಗಳು
[ಬದಲಾಯಿಸಿ]- ↑ https://www.udayavani.com/news-section/state-news/the-funeral-of-music-legend-dr-r-satyanarayana
- ↑ https://www.kannadaprabha.com/karnataka/2020/jan/17/padma-awardees-prof-r-satyanarayana-passed-away-410064.html
- ↑ https://www.prajavani.net/stories/stateregional/mysuru-padma-awardees-prof-r-satyanarayana-passed-away-698607.html