ಮಂಜುಷಾ ವಸ್ತು ಸಂಗ್ರಹಾಲಯ
Manjusha Museum, Dharmasthala | |
---|---|
ಸ್ಥಾಪನೆ | 1989 |
ಸ್ಥಳ | {{{location}}} |
ವರ್ಗ | Private museum |
ಪರಿಪಾಲಕ | K. Pushpadanta |
Manjusha Museum, Dharmasthala | ||
Established | 1989 (1989) | |
Type | Private museum | |
Collection size | 8000 artifacts | |
Founder | Dr. Veerendra Heggade | |
Curator | K. Pushpadanta |
ಮಂಜುಷಾ ವಸ್ತು ಸಂಗ್ರಹಾಲಯ. ಕರ್ನಾಟಕ ರಾಜ್ಯದ ಪವಿತ್ರ ಕ್ಷೇತ್ರವಾದ ಧರ್ಮಸ್ಥಲದಲ್ಲಿದೆ .ಇಲ್ಲಿ ಪ್ರಾಚೀನ ವಸ್ತುಗಳು, ವರ್ಣಚಿತ್ರಗಳು, ಕಲಾಕೃತಿಗಳು, ದೇವಾಲಯದ ರಥಗಳು, ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ಉತ್ತಮ ಸಂಗ್ರಹವಗಳಿವೆ. [೧] ಕರ್ನಾಟಕದಾದ್ಯಂತದ ದೇವಾಲಯಗಳಿಂದ ಇವುಗಳನ್ನು ಸಂಗ್ರಹಿಸಲಾಗಿದ್ದು ವಸ್ತು ಸಂಗ್ರಹಾಲಯವು ಧಮಸ್ಥಳದ ಪ್ರಸಿದ್ಧ ಮಂಜುನಾಥ ದೇವಾಲಯದ ದಕ್ಷಿಣದಲ್ಲಿದೆ.
ಮಾಲೀಕರು ಮತ್ತು ಕ್ಯುರೇಟರ್
[ಬದಲಾಯಿಸಿ]ಧಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗಡೆಯವರು ಖಾಸಗಿಯಾಗಿ ಮಾಲಿಕತ್ವ ಹೊದಿರುವ ಈ ವಸ್ತು ಸಂಗ್ರಹಾಲಯವು ಸತತ ೩೫ ವರ್ಷಗಳಿಂದ ಇದೆ. ಮೈಸೂರಿನ ಖ್ಯಾತ ಕಲಾವಿದ ಮತ್ತು ಜಾನಪದ ಲೇಖಕ ಪಿ.ಆರ್.ತಿಪ್ಪೇಸ್ವಾಮಿ ಈ ವಸ್ತುಸಂಗ್ರಹಾಲಯದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದ್ದರು. ದಿವಂಗತ ತಿಪ್ಪೇಸ್ವಾಮಿಯವರ ಕೆಲವು ವರ್ಣಚಿತ್ರಗಳನ್ನು ಅವರಿಗೆ ಗೌರವವಾಗಿ ವಸ್ತುಸಂಗ್ರಹಾಲಯದಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗಿದೆ. ಈ ಇಬ್ಬರು ಜನರ ಸಂಯೋಜಿತ ಪ್ರಯತ್ನದಿಂದಾಗಿ ಮ್ಯೂಸಿಯಂ ಸ್ಥಾಪನೆಗೆ ಕಾರಣವಾಯಿತು.
ಸಂಗ್ರಹ
[ಬದಲಾಯಿಸಿ]ಈ ವಸ್ತುಸಂಗ್ರಹಾಲಯವು ಇದು ಕ್ರಿ.ಪೂ 1 ನೇ ಶತಮಾನದಷ್ಟು ಹಳೆಯಮೌರ್ಯರ ಕಾಲದಿಂದ ಟೆರಾಕೋಟಾ ನಾಣ್ಯಗಳನ್ನು ಸಂರಕ್ಷಿಸಿದೆ. ಇದು ಮಂಜುನಾಥ ಸ್ವಾಮಿ ದೇವಸ್ಥಾನ, 300 ವರ್ಷ ಹಳೆಯ ವೀಣಾ, ವಿಧ್ವಾನ್ ವೀಣೆ ಶೇಷಣ್ಣರ ಸಂಗೀತ ವಾದ್ಯಗಳ ವಿವರಗಳನ್ನು ಹೊಂದಿರುವ ಪುರಾತನ ಪುಸ್ತಕವನ್ನು ಸಂಗ್ರಹಿಸಿದೆ. ಇದು ಭಾರತೀಯ ಕಲ್ಲು ಮತ್ತು ಲೋಹದ ಶಿಲ್ಪಕಲೆ, ವರ್ಣಚಿತ್ರಗಳು, ಆಭರಣ ವಸ್ತುಗಳು, ಪೂಜಾ ವಸ್ತುಗಳು ಮತ್ತು ಕರಾವಳಿ ಪ್ರದೇಶದ ಕುಶಲಕರ್ಮಿಗಳು ರಚಿಸಿದ ಉಪಯುಕ್ತ ವಸ್ತುಗಳ ಸಂಗ್ರಹವನ್ನು ಹೊಂದಿದೆ. ವಿಭಿನ್ನ ಗಾತ್ರದ ಕ್ಯಾಮೆರಾಗಳು ಮುಂತಾದ ಹಲವಾರು ವಿಭಿನ್ನ ಪುರಾತನ ವಸ್ತುಗಳನ್ನು ವಿಶಾಲವಾದ ಜಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕೇವಲ ೨೦ ರೂಪಾಯಿಗಳ ಪ್ರವೇಶ ಶುಲ್ಕವನ್ನು ಪಡೆದು ಸುಮಾರು ೨ ಗಂಟೆಗಳ ವರೆಗೂ ವೀಕ್ಷಿಸುವಷ್ಟು ವಿಷೇಶ ವಸ್ತುಗಳನ್ನು ಈ ಸಂಗ್ರಹಾಲಯ ಹೊಂದಿದೆ. ಕೊಂಚವೇ ದೂರದಲ್ಲಿ ಸುಮಾರು ೫೦ ವಿವಿಧ ಕಾರುಗಳ ಸಂಗ್ರಹವನ್ನೂ ಮಾಡಲಾಗಿದ್ದು ಕಾರು ಸಂಗ್ರಹಾಲಯದಲ್ಲಿ ಪುರಾತನ ವಾಹನಗಳು ಮತ್ತು ಕಾರುಗಳನ್ನು ಸಂಗ್ರಹಿಸಿ ಇಡಲಾಗಿದ್ದು ಹೆಚ್ಚಿನವು ಇಂದಿಗೂ ಚಾಲ್ತಿಯಲ್ಲಿ ಇವೆ ಎಂಬುದು ವಿಷೇಶ.
ವಸ್ತುಸಂಗ್ರಹಾಲಯದಲ್ಲಿ ಮನುಸ್ಮ್ರತಿಯ 6000 ತಾಳೆ ಎಲೆ ಹಸ್ತಪ್ರತಿಗಳ ವಿಶಿಷ್ಟ ಸಂಗ್ರಹವಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Give priority to protecting heritage". The Hindu. Retrieved 25 May 2015.