ಬಳಪದ ಕಲ್ಲು
ಬಳಪದ ಕಲ್ಲು ಟ್ಯಾಲ್ಕ್ನ ಪದರಶಿಲೆಯಾಗಿರುತ್ತದೆ. ಇದು ಒಂದು ಬಗೆಯ ರೂಪಾಂತರ ಶಿಲೆಯಾಗಿದೆ. ಇದು ಹೆಚ್ಚಾಗಿ ಮೆಗ್ನೀಸಿಯಮ್ ಹೇರಳವಾಗಿರುವ ಖನಿಜವಾದ ಟ್ಯಾಲ್ಕ್ನ್ನು ಹೊಂದಿರುತ್ತದೆ. ಇದು ಬಲ-ಉಷ್ಣೀಯ ರೂಪಾಂತರ ಹಾಗೂ ತತ್ವಾಂತರಣದಿಂದ ಉತ್ಪತ್ತಿಯಾಗುತ್ತದೆ. ಭೂಪದರಗಳು ಒಂದರ ಕೆಳಗೆ ಒಂದು ಚಲಿಸುವ ವಲಯಗಳಲ್ಲಿ ಈ ಪ್ರಕ್ರಿಯೆಗಳು ಸಂಭವಿಸುತ್ತವೆ. ಹೀಗಾದಾಗ ಉಷ್ಣ ಹಾಗೂ ಒತ್ತಡದಿಂದ, ಹಾಗೂ ದ್ರವಗಳು ಒಳಸೇರುವುದರಿಂದ, ಆದರೆ ಕರಗದೇ ಶಿಲೆಗಳು ಬದಲಾಗುತ್ತವೆ. ಇದು ಸಾವಿರಾರು ವರ್ಷಗಳಿಂದ ಕೆತ್ತನೆಯ ಮಾಧ್ಯಮವಾಗಿದೆ.
ಭೌತಿಕ ಲಕ್ಷಣಗಳು
[ಬದಲಾಯಿಸಿ]ಬಳಪದ ಕಲ್ಲಿನಲ್ಲಿ ಟ್ಯಾಲ್ಕ್ನ ಪ್ರಮಾಣ ಹೆಚ್ಚಾಗಿರುವುದರಿಂದ ತುಲನಾತ್ಮಕವಾಗಿ ಮೃದುವಾಗಿರುತ್ತದೆ. ಹೆಚ್ಚು ಮೃದುವಾದ ವರ್ಗಗಳು ಮುಟ್ಟಿದಾಗ ಸಾಬೂನಿನಂತೆ (ಸೋಪ್) ಅನಿಸುತ್ತವೆ, ಹಾಗಾಗಿ ಇದಕ್ಕೆ ಇಂಗ್ಲಿಷ್ನಲ್ಲಿ ಸೋಪ್ಸ್ಟೋನ್ ಎಂಬ ಹೆಸರು.
ಬಳಪದ ಕಲ್ಲನ್ನು ಕೆತ್ತುವುದು ಸುಲಭ, ಹೆಚ್ಚು ಬಾಳಿಕೆ ಬರುತ್ತದೆ, ಉಷ್ಣ ನಿರೋಧಕವಾಗಿದೆ ಮತ್ತು ಉಷ್ಣವನ್ನು ಸಂಗ್ರಹಿಸಿಡುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಸಾವಿರಾರು ವರ್ಷಗಳಿಂದ ಇದನ್ನು ಅಡುಗೆ ಹಾಗೂ ಬಿಸಿಮಾಡುವ ಉಪಕರಣಗಳಿಗಾಗಿ ಬಳಸಲಾಗಿದೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ Hansen, Gitte; Storemyr, Per (2017). A Versatile Resource – The Procurement and Use of Soapstone in Norway and The North Atlantic Region. In: Soapstone in the North Quarries, Products and People 7000 BC – AD 1700. UBAS – University of Bergen Archaeological Series 9. Bergen, Norway. ISBN 978-82-90273-90-8.
{{cite book}}
: CS1 maint: location missing publisher (link)