ವಿಷಯಕ್ಕೆ ಹೋಗು

ಮಿಚೆಲ್ ಮಾರ್ಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿಚೆಲ್ ರಾಸ್ ಮಾರ್ಷ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬಲಗೈ ಆಟಗಾರ. ಇವರು ಬಲಗೈ ಮಧ್ಯಮ ವೇಗದ ಬೌಲರ್. ದೇಶೀಯ ಕ್ರಿಕೆಟ್ನಲ್ಲಿ ಪರ್ತ್ ಸ್ಕೊಚೆರ್ಸ್ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ತಂಡಗಳಿಗೆ ಆಡುತ್ತಾರೆ. ೨೦೧೬ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೈಸಿಂಗ್ ಪುಣೆ ಸೂಪರ್ ಜಯೇಂಟ್ಸ್ ತಂಡಕ್ಕೆ ಕೊನೆಯ ಬಾರಿ ಆಡಿದ್ದರು. ೨೦೧೬ರ ನಂತರ ಐಪಿಎಲ್ ಸರಣಿಯಲ್ಲಿ ಪಾಲ್ಗೊಳ್ಳಲಿಲ್ಲ.[][]

ಆರಂಭಿಕ ಜೀವನ

[ಬದಲಾಯಿಸಿ]

ಮಿಚೆಲ್ ರವರು ಅಕ್ತೋಬರ್ ೨೦, ೧೯೯೧ರಲ್ಲಿ ಆಸ್ಟ್ರೇಲಿಯಾದ ಪರ್ತ್ನಲ್ಲಿ ಜನಿಸಿದರು. ಮಿಚೆಲ್ ಹಾಗೂ ಇವರ ಸಹೋದರ ಶಾನ್ ಮಾರ್ಶ್ ಇಬ್ಬರೂ ತಮ್ಮ ಬಾಲ್ಯದಲ್ಲಿ ಪರ್ತ್ ನ ವೀಸ್ಲಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಈ ಸಮಯದಲ್ಲಿ ಇವರಿಗೆ ಕ್ರಿಕೆಟ್ ನಲ್ಲಿ ಆಸಕ್ತಿ ಮೂಡಿತು. ತಮ್ಮ ೧೭ನೇ ವಯಸ್ಸಿನಲ್ಲೇ ದೇಶೀ ತಂಡದ ಪರ ಆಡುವ ಮೂಲಕ ಇವರು ಕೌಂಟಿ ಕ್ರಿಕೆಟ್ ಆಡಿದ ಅತೀ ಕಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.[][][]


ವೃತ್ತಿ ಜೀವನ

[ಬದಲಾಯಿಸಿ]

ನವಂಬರ್ ೨೦, ೨೦೦೯ರಲ್ಲಿ ಪರ್ತ್ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ನ್ಯೂ ಸೌತ್ ವೇಲ್ಸ್ ವಿರುಧ್ಧ ನಡೆದ ಪಂದ್ಯದ ಮೂಲಕ ಇವರು ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪನೆ ಮಾಡಿದರು.[]

ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಅಕ್ತೋಬರ್ ೧೬, ೨೦೧೧ ರಂದು ಜೋಹನಸ್ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುಧ್ಧ ನಡೆದ ಎರಡನೇ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[] ಅಕ್ತೋಬರ್ ೧೯, ೨೦೧೧ ರಂದು ಸೆಂಚೂರಿಯೊನ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುಧ್ಧ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[] ಅಕ್ತೋಬರ್ ೨೦, ೨೦೧೪ ರಂದು ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಮೊದಲನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದರು.[]


ಪಂದ್ಯಗಳು

[ಬದಲಾಯಿಸಿ]
  • ಏಕದಿನ ಕ್ರಿಕೆಟ್ : ೫೩ ಪಂದ್ಯಗಳು[೧೦][೧೧]
  • ಟೆಸ್ಟ್ ಕ್ರಿಕೆಟ್ : ೩೨ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೧೧ ಪಂದ್ಯಗಳು

ಶತಕಗಳು

[ಬದಲಾಯಿಸಿ]
  1. ಟೆಸ್ಟ್ ಪಂದ್ಯಗಳಲ್ಲಿ : ೦೨
  2. ಏಕದಿನ ಪಂದ್ಯಗಳಲ್ಲಿ : ೦೧

ಅರ್ಧ ಶತಕಗಳು

[ಬದಲಾಯಿಸಿ]
  1. ಟೆಸ್ಟ್ ಪಂದ್ಯಗಳಲ್ಲಿ : ೦೩
  2. ಏಕದಿನ ಪಂದ್ಯಗಳಲ್ಲಿ : ೧೧

ವಿಕೇಟ್ಗಳು

[ಬದಲಾಯಿಸಿ]
  1. ಟೆಸ್ಟ್ ಪಂದ್ಯಗಳಲ್ಲಿ: ೩೫
  2. ಏಕದಿನ ಪಂದ್ಯಗಳಲ್ಲಿ: ೪೪
  3. ಟಿ-೨೦ ಪಂದ್ಯಗಳಲ್ಲಿ: ೦೬

ಉಲ್ಲೇಖಗಳು

[ಬದಲಾಯಿಸಿ]
  1. https://www.news18.com/cricketnext/profile/mitchell-marsh/10094.html
  2. https://sports.ndtv.com/cricket/players/1425-mitchell-marsh-playerprofile
  3. https://starsunfolded.com/mitchell-marsh/
  4. https://www.wisden.com/players/mitchell-marsh
  5. "ಆರ್ಕೈವ್ ನಕಲು". Archived from the original on 2019-03-06. Retrieved 2019-09-12.
  6. https://www.espncricinfo.com/series/8043/scorecard/417649/western-australia-vs-new-south-wales-sheffield-shield-2009-10
  7. https://www.espncricinfo.com/series/12712/scorecard/514024/south-africa-vs-australia-2nd-t20i-australia-tour-of-south-africa-2011-12
  8. https://www.espncricinfo.com/series/12712/scorecard/514025/south-africa-vs-australia-1st-odi-australia-tour-of-south-africa-2011-12
  9. https://www.espncricinfo.com/series/11581/scorecard/727927/australia-vs-pakistan-1st-test-australia-tour-of-united-arab-emirates-2014-15
  10. http://www.espncricinfo.com/australia/content/player/272450.html
  11. https://m.cricbuzz.com/profiles/6250/mitchell-marsh