ಸದಸ್ಯ:Spoorthi.m1910273

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
tarikere
amruthapura temple

ನನ್ನ ಬಾಲ್ಯದ ದಿನಗಳು.[ಬದಲಾಯಿಸಿ]

ನಮಸ್ಕಾರ ನನ್ನ ಹೆಸರು ಸ್ಪೂರ್ತಿ.ಎಂ. ನಾನು ೦೮/೦೧/೨೦೦೧ ರಂದು ಜನಿಸಿದೆ.ನಾನು ಹುಟ್ಟಿದ್ದು ಭದ್ರಾವತಿ ತಾಲ್ಲೂಕು ಶಿವಮೊಗ್ಗ ಜಿಲ್ಲೆ.ನಾನು ಬೆಳೆದಿದ್ದು ಭದ್ರಾವತಿಯಲ್ಲಿ. ನನ್ನ ಬಾಲ್ಯದ ದಿನಗಳನ್ನು ನಾನು ತರೀಕೆರೆಯಲ್ಲಿ ಕಳೆದೆನು.ನನಗೆ ನನ್ನ ಊರು ತುಂಬಾ ಇಷ್ಟ ಅಲ್ಲಿನ ಪರಿಸರ, ಹಸಿರು ತೋಟ, ತಂಪು ಗಾಳಿ ಎಲ್ಲವೂ ನನಗೆ ತುಂಬಾ ಇಷ್ಟ. ಇಲ್ಲಿ ಅಮೃತಪುರ ದೇವಸ್ಥಾನ ಇದೆ.ನನ್ನ ತಂದೆಯ ಹೆಸರು ಎನ್.ಎಮ್.ಮಂಜುನಾಥ. ನನ್ನ ತಂದೆ ಒಬ್ಬ ರೈತ. ನನ್ನ ತಾಯಿಯ ಹೆಸರು ಲತಾ. ಅವರು ಗೃಹಿಣಿ .ನನಗೆ ಒಬ್ಬಳು ಅಕ್ಕ ಇದ್ದಾಳೆ . ಅವಳ ಹೆಸರು ಶುಷ್ಮಿತ. ಅವಳು ಈಗ ಬಿ.ಇ ಮಾಡುತ್ತಿದ್ದಾಳೆ. ನನ್ನ ದೊಡ್ಡಪ್ಪ ಹಾಗೂ ದೊಡ್ಡಮ್ಮ ಮೇಲೆಯೂ ನನಗೆ ಪ್ರೀತಿ ಜಾಸ್ತಿ. ನನಗೆ ನನ್ನ ಅಜ್ಜಿ ತಾತ ಅಂದರೆ ತುಂಬಾ ಪ್ರೀತಿ ಅವರಿಗೂ ನನ್ನ ಮೇಲೆ ಬಹಳ ಪ್ರೀತಿ. ನಾನು ಅಜ್ಜಿ ಮನೆಗೆ ಹೋದಾಗಲೆಲ್ಲ ಅವರು ನನಗೆ ಇಷ್ಟವಾದ ಅಡುಗೆ ಮಾಡಿ ಕೈ ತುತ್ತು ಕೊಡುತ್ತಾರೆ. ನನ್ನ ಹವ್ಯಾಸಗಳು ಬಂದು ಚೆಸ್ ಆಡೋದು ಟಿವಿ ನೋಡೋದು ಮತ್ತು ಹಾಡುಕೇಳುವುದು. ನನಗೆ ಚಿಕನ್ ಎಂದರೆ ತುಂಬಾ ಇಷ್ಟ. ಚಿಕೆನ್ ಅಲ್ಲಿ ಮಾಡುವ ಎಲ್ಲಾ ತಿಂಡಿಗಳು ನನಗೆ ತುಂಬಾ ಇಷ್ಟ. ಹಾಗೆ ಸಿಹಿ ತಿಂಡಿಯಲ್ಲಿ ನನಗೆ ಕಾಜೂ ಬರ್ಫಿ , ಕೀರ್ ಇಷ್ಟ. ಮನೆಯಲ್ಲಿ ಮಾಡುವ ತಿಂಡಿಗಳ ಜೊತೆಗೆ ನನಗೆ ಹೊರಗಿನ ತಿಂಡಿಗಳು ಸಹ ಇಷ್ಟ. ಪಾನಿ ಪುರಿ, ಗೋಬಿ ಮಂಚೂರಿಯನ್, ಫ್ರೈಡ್ ರೈಸ್ ತುಂಬಾ ಇಷ್ಟ. ನನಗೆ ಇಷ್ಟವಾದ ನಟ ಪುನೀತ್ ರಾಜಕುಮಾರ್ ಹಾಗೂ ನಟಿ ರಾಧಿಕಾ ಪಂಡಿತ್. ನನಗೆ ಪ್ರವಾಸ ಮಾಡುವುದೆಂದರೆ ಬಹಳ ಇಷ್ಟ. ನನಗೆ ಬಾಲಿಗೆ ಹಾಗೂ ಸ್ವಿಟ್ಜರ್ಲ್ಯಾಂಡ್ ಗೆ ಹೋಗಬೇಕೆಂದು ತುಂಬಾ ಆಸೆ ಇದೆ. ಸ್ವಿಟ್ಜರ್ಲ್ಯಾಂಡ್ ಯಾಕೆಂದರೆ ಅಲ್ಲಿನ ಪರಿಸರ ಸುತ್ತಮುತ್ತಲಿನ ಜಾಗ ನನಗೆ ತುಂಬಾ ಇಷ್ಟ.

ಶಾಲೆಯ ನೆನಪು.[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸಂತ ಚಾರ್ಲ್ಸ್ ಶಾಲೆಯಲ್ಲಿ ಮುಗಿಸಿದ್ದೇನೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ೬೩೫ಕ್ಕೆ ೫೯೫ ಅಂಕಗಳನ್ನು ಗಳಿಸಿದ್ದೇನೆ. ನನ್ನ ಶಾಲೆ ಸ್ನೇಹಿತರು ಬಂದು ಶ್ರೀ ಲಕ್ಷ್ಮೀ, ತೇಜಸ್ವಿನಿ,ಪೂಜಾ,ಲಾವಣ್ಯ,ಅನನ್ಯ,ಹರಿಣಿ,ಹರ್ಷಿತಾ,ಲಾವಣ್ಯ,ಆರುಷಿ,ಭಾವನಾ,ಪ್ರೀತಿ,ಶ್ವೇತ.ನಾವೆಲ್ಲರೂ ಶಾಲಾ ದಿನಗಳಿಂದ ಹಿಡಿದು ಕಾಲೇಜಿನ ದಿನಗಳವರೆಗೂ ಒಟ್ಟಿಗೆ ಇದ್ದೆವು . ನಾನು ಶಾಲೆಯಲ್ಲಿ ಇದ್ದಾಗ ಕ್ರೀಡೆಯಲ್ಲಿ ಏನು ಬಹಳ ಆಸಕ್ತಿ ಇರಲಿಲ್ಲ. ಆದರೂ ಬ್ಯಾಸ್ಕೆಟ್ ಬಾಲ್ ಮತ್ತು ಲಗೋರಿ ಆಡುತ್ತಿದ್ದೆ. ಒಂದೆರಡು ಬಾರಿ ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡಿದ್ದೇನೆ. ನಾನು ನನ್ನ ಪಿ.ಯು.ಸಿಯನ್ನು ಆಚಾರ್ಯ ಪಿಯು ಕಾಲೇಜಿನಲ್ಲಿ ಮಾಡಿದ್ದೇನೆ. ದ್ವಿತೀಯ ಪಿಯುಸಿಯಲ್ಲಿ ನನಗೆ ೫೮೦ ಅಂಕಗಳು ಬಂದಿವೆ. ಕಾಲೇಜಿಗೆ ಬಂದಾಗ ನನಗೆ ಕ್ರೀಡೆಯಲ್ಲಿ ಇದ್ದ ಒಂಚೂರು ಆಸಕ್ತಿಯೂ ಕಡಿಮೆಯಾಯ್ತ. ಆದರೆ ಚೆಸ್, ಕೇರಮ್, ಬ್ಯಾಡ್ಮಿಂಟನ್ ಆಡುತ್ತಿದ್ದೆ. ನಾನು ಕಾಲೇಜಿನಲ್ಲಿ ಚೆಸ್ ಆಟದಲ್ಲಿ ಎರಡು ಬಾರಿ ವಿಜೇತವಾಗಿದ್ದೇನೆ. ನಾನು ನನ್ನ ಹೆಚ್ಚಿನ ಗಮನವನ್ನು ಓದುವುದರ ಮೇಲೆ ಕೊಡಲು ಪ್ರಾರಂಭಿಸಿದೆ .ನನ್ನ ಶಿಕ್ಷಕರು ನನಗೆ ಪ್ರೋತ್ಸಾಹ ನೀಡಿ ನನಗೆ ದೈರ್ಯ ತುಂಬಿದ್ದಾರೆ. ಅವರಿಂದ ನಾನು ಒಳ್ಳೆಯ ಅಂಕ ಗಳಿಸಲು ಸಾಧ್ಯವಾಯಿತು. ಅವರಿಗೆ ನನ್ನ ಹೃದಯಪೂರ್ವಕ ವಂದನೆಗಳು.

ನನ್ನ ಗುರಿ.[ಬದಲಾಯಿಸಿ]

ಜೀವನದಲ್ಲಿ ಗುರಿ ಸಾಧಿಸಲು ಶಿಕ್ಷಣದ ಅವಶ್ಯಕತೆ ಇದೆ. ನಾನು ಕಾಮರ್ಸ್ ತಗಳೋದಕ್ಕೆ ಕಾರಣವೇನೆಂದರೆ ನನಗೆ ಸಿ.ಎ. ಮಾಡಬೇಕೆಂದು ಆಸೆ ಇದೆ. ಇದು ನನ್ನ ಗುರಿಯು ಆಗಿದೆ. ಅದಕ್ಕಾಗಿ ವಾಣಿಜ್ಯ ಶಾಸ್ತ್ರವನ್ನು ತಗೊಂಡೆ. ನಾನು ಈಗ ಬಿ.ಕಾಮ್ ಮಾಡುತ್ತಿದ್ದೇನೆ. ನಂತರ ನಾನು ನನ್ನ ಸಿ.ಎ ಮಾಡಲು ಜೆ.ಕ.ಷಾ ಇನ್ಸ್ಟಿಟ್ಯೂಟ್ ನಲ್ಲಿ ಸಿ.ಏ ಕೋಚಿಂಗ್ ತಗೋಬೇಕೆಂದು ಯೋಚಿಸಿದ್ದೇನೆ. ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಒಳ್ಳೆಯ ಕಾಲೇಜಿನಲ್ಲಿ ಮಾಡಬೇಕೆಂದು ನಿರ್ಧರಿಸಿ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಬಂದು ಸೇರಿದೆ. ಈ ಕಾಲೇಜಿಗೆ ಸೇರಲು ಕಾರಣವೇನೆಂದರೆ ಇಲ್ಲಿ ಓದುವುದರ ಜೊತೆಯಲ್ಲಿ ಇತರ ಚಟುವಟಿಕೆಗಳಿಗೂ ಪ್ರಾಮುಕ್ಯತೆ ಇದೆ ಹಾಗೆ ಇದು ನಮಗೆ ಉಪಯೋಗವಾಗುತ್ತದೆ. ನನಗೆ ಈ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದು ಬಹಳ ಸಂತಸ ತಂದಿದೆ. ನನ್ನ ಕೆಟ್ಟ ಗುಣಗಳು ಏನೆಂದರೆ ನಾನು ತುಂಬಾ ಹಠ ಮಾಡ್ತೀನಿ ಹಾಗೂ ಸಿಟ್ಟು ಮಾಡ್ಕೊತೀನಿ . ನನ್ನಲ್ಲಿ ಇರೋ ಒಳ್ಳೆ ಗುಣಗಳು ಬಂದು ಹಿರಿಯರಿಗೆ ಗೌರವ ಕೊಡ್ತೀನಿ. ಎಲ್ಲರನ್ನೂ ನಗಿಸಲು ಪ್ರಯತ್ನಿಸುತ್ತೇನೆ ಹಾಗೂ ಎಲ್ಲರೊಡನೆ ಹೊಂದಿಕೊಳ್ಳುತೇನೆ.ನಾನು ನನ್ನ ಕೆಟ್ಟ ಗುಣಗಳನ್ನು ಕಮ್ಮಿ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತೇನೆ ಹಾಗೂ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುತ್ತೇನೆ.ಡಾ. ಅಬ್ದುಲ್ ಕಲಾಂ ಅವರು ನನ್ನ ಆದರ್ಶ ವ್ಯಕ್ತಿಯಾಗಿದ್ದಾರೆ. ಅವರ ಉಮ್ಮಸ್ಸು , ಸರಳತೆ, ಹಾಗೆಯೇ ಅವರ ಆತ್ಮಚರಿತ್ರೆ ನನಗೆ ಮಾದರಿಯಾಗಿದೆ.ಅವರು ನನಗೆ ಮಾತ್ರ ಅಲ್ಲ ಈ ಜಗತ್ತಿನ ಎಷ್ಟೋ ಯುವಕರಿಗೆ ಸ್ಫೂರ್ತಿ ಆಗಿದ್ದಾರೆ. ಅವರು ಬಿಟ್ಟರೆ ನನ್ನ ತಾಯಿ ನನಗೆ ಆದರ್ಶ ವ್ಯಕ್ತಿ ಅವರ ಒಳ್ಳೆಯ ಗುಣ , ಸಹನೆ ನನಗೆ ಮಾದರಿಯಾಗಿದೆ. ನಾನು ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಇದು ನನ್ನ ಗುರಿಯಾಗಿದೆ. ಧನ್ಯವಾದಗಳು.