ಸೂತ
ಸೂತ ಪದವು ಪೌರಾಣಿಕ ಕಥೆಗಳ ಹಾಡುಗಾರರು ಹಾಗೂ ಒಂದು ಮಿಶ್ರ ಜಾತಿ ಎರಡನ್ನೂ ಸೂಚಿಸುತ್ತದೆ. ಮನುಸ್ಮೃತಿಯ ಪ್ರಕಾರ (೧೦.೧೧.೧೭) ಸೂತ ಜಾತಿಯವರು ಕ್ಷತ್ರಿಯ ತಂದೆ ಹಾಗೂ ಬ್ರಾಹ್ಮಣ ತಾಯಿಯ ಮಕ್ಕಳಾಗಿರುತ್ತಾರೆ. ಹಲವಾರು ಪುರಾಣಗಳ ನಿರೂಪಕನಾಗಿದ್ದ ಲೋಮಹರ್ಷಣನ ಮಗ ಉಗ್ರಶ್ರವಸನನ್ನು ಸೂತ ಎಂದೂ ಕರೆಯಲಾಗುತ್ತದೆ. ಹಾಗೆಯೇ ಮಹಾಭಾರತದ ಸಂಜಯನನ್ನೂ ಸಹ (ಧೃತರಾಷ್ಟ್ರನ) ಸೂತ ಎನ್ನಲಾಗುತ್ತದೆ. ಪೌರಾಣಿಕ ಕಥೆಗಳ ಹಾಡುಗಾರರು ಮೂಲತಃ ಸೂತ ಜಾತಿಗೆ ಸೇರಿದವರಾಗಿದ್ದರೆ ಎಂಬುದರ ಕುರಿತು ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ಒಂದು ಜಾತಿಯ ಹೆಸರಾಗಿ ಸೂತ ಪದದ ಬಳಕೆಯು ಲೋಮಹರ್ಷಣ ಹಾಗೂ ಅವನ ಪುತ್ರ ಉಗ್ರಶ್ರವಸ ಸೌತಿಯನ್ನು ವರ್ಣಿಸಲು ಸೂತ ಪದದ ಮುಂಚಿನ ಬಳಕೆಯಿಂದ ಭಿನ್ನವಾಗಿರಬಹುದು ಎಂದು ಲೂಡೊ ರೋಷೇ ಹೇಳುತ್ತಾರೆ. ಸೂತ ಜಾತಿಯು ಪುರಾಣಗಳ ನಿರೂಪಕನಿಂದ ಭಿನ್ನವಾಗಿದೆ ಎಂದು ಆರ್. ಎನ್. ದಂಡೇಕರ್ ಹೇಳುತ್ತಾರೆ.[೧]
ಮಹಾಭಾರತ ಮಹಾಕಾವ್ಯದಲ್ಲಿ ಸೂತ ಪದವನ್ನು ಜನರ ಒಂದು ವರ್ಗ ಎಂದೂ ಹೇಳಲಾಗಿದೆ, ಹಲವುವೇಳೆ ಸಾರಥಿಗಳು. ಕರ್ಣನ ಸಾಕು ತಂದೆತಾಯಿಯರು ಸೂತರಾಗಿದ್ದರು. ಹಾಗಾಗಿ, ಕರ್ಣನನ್ನೂ ಸೂತನೆಂದು ಪರಿಗಣಿಸಲಾಗಿತ್ತು. ಮತ್ಸ್ಯ ಸೇನೆಯ ಸೇನಾಪತಿಯಾಗಿದ್ದ ಕೀಚಕನು ಸೂತನಾಗಿದ್ದನು.
ಟಿಪ್ಪಣಿಗೆಳು
[ಬದಲಾಯಿಸಿ]- ↑ Mittal, Sushil; G. R. Thursby (2004). The Hindu World. Routledge. p. 103. ISBN 978-0-415-21527-5.