ಪ್ರಕ್ಷೇಪಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಹಿತ್ಯ ಮತ್ತು ವಿಶೇಷವಾಗಿ ಪ್ರಾಚೀನ ಹಸ್ತಪ್ರತಿಗಳ ಸಂಬಂಧದಲ್ಲಿ, ಪ್ರಕ್ಷೇಪಣ ಎಂದರೆ ಪಠ್ಯದಲ್ಲಿ ಮೂಲ ಲೇಖಕನು ಬರೆಯದಿರುವಂಥ ನಮೂದು ಅಥವಾ ವಾಕ್ಯವೃಂದ.[೧] ಪ್ರಾಚೀನ ಪಠ್ಯದ ಅಸ್ತಿತ್ವದಲ್ಲಿರುವ ಪ್ರತಿ ಮತ್ತು ಮೂಲಪ್ರತಿಯ ನಡುವೆ ಹಲವುವೇಳೆ ಪ್ರತಿಗಳ ಹಲವಾರು ಪೀಳಿಗೆಗಳಿರುವುದರಿಂದ, ಮತ್ತು ಪ್ರತಿಯೊಂದು ಪ್ರತಿಯನ್ನು ಭಿನ್ನ ಬರಹಗಾರರು ಬರೆದಿರುವುದರಿಂದ, ಅಂತಹ ದಸ್ತಾವೇಜುಗಳಲ್ಲಿ ಕಾಲ ಕಳೆದಂತೆ ಬಾಹ್ಯ ಮಾಹಿತಿಯನ್ನು ಒಳಸೇರಿಸುವ ಸಹಜ ಪ್ರವೃತ್ತಿಯಿರುತ್ತದೆ.

ಆದರೆ, ಬಹುತೇಕ ಪ್ರಕ್ಷೇಪಣಗಳು ಕೈಯಿಂದ ಪ್ರತಿಗಳನ್ನು ಮಾಡುವಾಗ, ವಿಶೇಷವಾಗಿ ದೀರ್ಘ ಸಮಯಾವಧಿಗಳೊಂದಿಗೆ, ಉದ್ಭವಿಸುವ ಸಾಧ್ಯತೆಯಿರುವ ದೋಷಗಳು ಹಾಗೂ ತಪ್ಪುಗಳ ಕಾರಣದಿಂದ ಉಂಟಾಗುತ್ತವೆ. ಉದಾಹರಣೆಗೆ, ಪಠ್ಯವನ್ನು ಪ್ರತಿ ಮಾಡುವಾಗ ಬರಹಗಾರನು ತಪ್ಪು ಮಾಡಿದರೆ ಮತ್ತು ಕೆಲವು ಸಾಲುಗಳನ್ನು ಬಿಟ್ಟುಬಿಟ್ಟರೆ, ಬಿಟ್ಟಿರುವ ಮಾಹಿತಿಯನ್ನು ಪುಟದ ಖಾಲಿ ಭಾಗದಲ್ಲಿ ಸೇರಿಸುವ ಸಾಧ್ಯತೆಯಿರುತ್ತದೆ. ಆದರೆ, ಓದುಗರು ಮಾಡಿರುವ ಅಂಚಿನ ಟಿಪ್ಪಣಿಗಳು ಬಹುತೇಕ ಎಲ್ಲ ಹಸ್ತಪ್ರತಿಗಳಲ್ಲಿ ಇವೆ.

ಉಲ್ಲೇಖಗಳು[ಬದಲಾಯಿಸಿ]

  1. "Interpolation". Archived from the original on 2019-05-05. Retrieved 2019-05-16.