ಉಷಾ ಮಂಗೇಶ್ಕರ್
ಗೋಚರ
ಉಷಾ ಮಂಗೇಶ್ಕರ್ | |
---|---|
ಹಿನ್ನೆಲೆ ಮಾಹಿತಿ | |
ಜನನ | ಬಾಂಬೆ, ಬಾಂಬೆ ಪ್ರೆಸಿಡಿನ್ಸಿ, ಬ್ರಿಟೀಷ್ ಭಾರತ | ೧೫ ಡಿಸೆಂಬರ್ ೧೯೩೫
ಸಂಗೀತ ಶೈಲಿ | ಭಾರತೀಯ ಶಾಸ್ತ್ರೀಯ ಸಂಗೀತ, ಹಿನ್ನೆಲೆ ಗಾಯಕಿ |
ವೃತ್ತಿ | ಹಾಡುಗಾರ್ತಿ |
ವಾದ್ಯಗಳು | ಗಾಯನ |
ಸಕ್ರಿಯ ವರ್ಷಗಳು | 1954– |
ಉಷಾ ಮಂಗೇಶ್ಕರ್ ಅವರು ಹಿಂದಿ, ಬಂಗಾಳಿ, ಮರಾಠಿ, ಕನ್ನಡ, ನೇಪಾಳಿ, ಗುಜರಾತಿ ಮತ್ತು ಅಸ್ಸಾಮಿ ಹಾಡುಗಳಿಗೆ ಧ್ವನಿಮುದ್ರಿಸಿದ ಭಾರತೀಯ ಹಿನ್ನೆಲೆ ಗಾಯಕಿ.[೧]
ವೈಯಕ್ತಿಕ ಜೀವನ
[ಬದಲಾಯಿಸಿ]ಉಷಾ ಮಂಗೇಶ್ಕರ್ ಅವರು ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ (ಶೂಧಮತಿ) ಅವರ ಎರಡನೇ ಕಿರಿಯ ಮಗಳು. ಆಶಾ ಭೋಂಸ್ಲೆ ಮತ್ತು ಮೀನಾ ಖಡಿಕಾರ್ ಇವರ ಕಿರಿಯ ಹಾಗೂ ಹಿರಿಯ ಸಹೋದರಿಯರು, ಹಿರಿಯಣ್ಣ ಹೃದಯನಾಥ್ ಮಂಗೇಶ್ಕರ್[೨]. ೧೯೭೫ ರಲ್ಲಿ ಜೈ ಸಂತೋಷಿ ಮಾ ಚಿತ್ರದ ಕೆಲವು ಭಕ್ತಿಗೀತೆಗಳನ್ನು ಹಾಡಿದ ನಂತರ ಅವರು ಹಿನ್ನೆಲೆ ಗಾಯಕಿಯಾಗಿ ಬೆಳಕಿಗೆ ಬಂದರು. ಆ ಚಿತ್ರದಲ್ಲಿನ "ಮೈನ್ ಟು ಆರ್ಟಿ" ಎಂಬ ಹಾಡಿಗಾಗಿ ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.
ವೃತ್ತಿಜೀವನ
[ಬದಲಾಯಿಸಿ]ಉಷಾ ಚಿತ್ರಕಲೆಯಲ್ಲೂ ಸಹ ಬಲವಾದ ಆಸಕ್ತಿ ಹೊಂದಿದ್ದರು. ಅವಳ ಪ್ರಸಿದ್ಧ ಹಾಡು "ಮುಂಗ್ಲಾ",ಅವರ ಮರಾಠಿ ಚಿತ್ರ ಪಿಂಜಾರ ಗೀತೆಗಳಿಗೆ ಹೆಸರುವಾಸಿಯಾಗಿದೆ. ಅವರು ದೂರದರ್ಶನಕ್ಕಾಗಿ ಫೂಲ್ವಂತಿ ಎಂಬ ಸಂಗೀತ ನಾಟಕವನ್ನು ಸಹ ನಿರ್ಮಿಸಿದ್ದರು.
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳ
[ಬದಲಾಯಿಸಿ]- ೧೯೭೫ ರಲ್ಲಿ ಜೈ ಸಂತೋಶಿ ಮಾ ಚಿತ್ರಕ್ಕೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಬಿಎಫ್ಜೆಎ ಪ್ರಶಸ್ತಿ ನೀಡಾಲಾಯಿತು. ಅದೇ ಚಿತ್ರದ "ಮೇನ್ ಟು ಆರ್ಟಿ" ಎಂಬ ಹಾಡು ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
- ೧೯೭೭ ರ ಇನ್ಕಾರ್ ಚಿತ್ರದ "ಮಂಗ್ತಾ ಹೈ ತು ಆಜಾ" ಹಾಡಿಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
- ೧೯೮೦ ರಲ್ಲಿ ಇನ್ಕಾರ್ ಚಿತ್ರದ "ಹಮ್ಸೆ ನಾಜರ್ ತೊ ಮಿಲಾವೊ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಜನಪ್ರಿಯ ಗೀತೆಗಳು
[ಬದಲಾಯಿಸಿ]- ೧೯೫೨ ರ ಸುಭಾ ಕಾ ತಾರಾ ಚಿತ್ರದ "ಭಭಿ ಆಯಿ ಬಡಿ ಧೂಮ್ ಧಮ್ ಸೆ ಮೇರಿ ಭಭಿ ಆಯಿ"
- ೧೯೫೨ ರ ಜೈ ಸಂತೋಶಿ ಚಿತ್ರದ "ಮೇರ್ ತು ಆರ್ತಿ ಉತಾರೂನ್"
- ೧೯೬೭ ರ ಕನ್ನಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ "ಯಾರಿವ ನನ್ ಮನ ಮರುಳಾಗಿಸಿದವ"
- ೧೯೭೮ ರ ಖಟ್ಟ ಮೀಠಾ ಚಿತ್ರದ "ಖಟ್ಟ ಮೆಟೆಟಾ"
- ೧೯೭೯ ರ ತರಾನಾದಿಂದ "ಸುಲ್ತಾನ ಸುಲ್ತಾನ"
- ೧೯೭೯ ರ ಕಾಲಾ ಪತ್ತರ್ ಚಿತ್ರದ "ಮುಜೆ ಪ್ಯಾರ್ ಕಾ ತೋಫಾ ದೇಕೆ"[೩]
ಉಲ್ಲೇಖಗಳು
[ಬದಲಾಯಿಸಿ]