ಮೆಟ್ಟಲು ಸಾಲು
ಮೆಟ್ಟಲು ಸಾಲು (ಸೋಪಾನ, ಪಾವಟಿಗೆ) ಮೆಟ್ಟಲು ಎಂದು ಕರೆಯಲ್ಪಡುವ ಚಿಕ್ಕದಾದ ಲಂಬ ದೂರಗಳಾಗಿ ವಿಭಜಿಸುವ ಮೂಲಕ, ದೊಡ್ಡದಾದ ಲಂಬವಾದ ದೂರಕ್ಕೆ ಸೇತುವೆಯಾಗಲು ವಿನ್ಯಾಸಗೊಳಿಸಲಾದ ಒಂದು ನಿರ್ಮಾಣ. ಮೆಟ್ಟಲುಗಳು ನೇರವಾಗಿರಬಹುದು, ದುಂಡಾಗಿರಬಹುದು, ಅಥವಾ ಕೋನಗಳಲ್ಲಿ ಜೋಡಣೆಗೊಂಡ ಎರಡು ಅಥವಾ ಹೆಚ್ಚು ನೇರ ತುಂಡುಗಳನ್ನು ಹೊಂದಿರಬಹುದು.
ವಿಶೇಷ ಪ್ರಕಾರಗಳ ಮೆಟ್ಟಲು ಸಾಲುಗಳಲ್ಲಿ ಚಲಪಾವಟಿಗೆ ಮತ್ತು ಏಣಿಗಳು ಸೇರಿವೆ. ಮೆಟ್ಟಲು ಸಾಲಿಗೆ ಕೆಲವು ಪರ್ಯಾಯಗಳೆಂದರೆ ಎತ್ತುಗಗಳು, ಮೆಟ್ಟಿಲು ಎತ್ತುಗಗಳು ಮತ್ತು ಇಳಿಜಾರಾದ ಚಲಿಸುವ ನಡೆದಾರಿಗಳು ಜೊತೆಗೆ ನಿಶ್ಚಲ ಇಳಿಜಾರಾದ ಕಾಲುದಾರಿಗಳು.
ಅವಲೋಕನ
[ಬದಲಾಯಿಸಿ]ಮೆಟ್ಟಲ ಸಾಲು ನೇರ ರೇಖೆಯಲ್ಲಿ ಇರಬಹುದು, ಅಂದರೆ ತಿರುವು ಅಥವಾ ದಿಕ್ಕು ಬದಲಾವಣೆಯಿಲ್ಲದೆಯೇ ಒಂದು ಮಹಡಿಯಿಂದ ಮತ್ತೊಂದಕ್ಕೆ ಸಾಗುತ್ತದೆ. ಮೆಟ್ಟಲ ಸಾಲು ದಿಕ್ಕನ್ನು ಬದಲಾಯಿಸಬಹುದು, ಸಾಮಾನ್ಯವಾಗಿ ೯೦ ಡಿಗ್ರಿ ಕೋನ ಭೂಸ್ಪರ್ಶದಲ್ಲಿ ಜೋಡಣೆಗೊಂಡ ಎರಡು ನೇರ ಸೋಪಾನ ಪಂಕ್ತಿಗಳಿಂದ. ನೇರ ಸೋಪಾನ ಪಂಕ್ತಿಗಳ ಪ್ರತಿ ತುದಿಯಲ್ಲಿ ೧೮೦ ಡಿಗ್ರಿ ಕೋನದ ಭೂಸ್ಪರ್ಶದೊಂದಿಗೆ ಮೆಟ್ಟಲು ಸಾಲು ತನ್ನೆಡೆಗೇ ಹಿಂತಿರುಗಬಹುದು, ಮತ್ತು ಲಂಬ ಮೆಟ್ಟಲಸಾಲನ್ನು ರಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಬಹುಮಹಡಿ ಕಟ್ಟಡಗಳಲ್ಲಿ ಬಳಸಲಾಗುತ್ತದೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ R.E. Putnam and G.E. Carlson, Architectural and Building Trades Dictionary, Third Edition, American Technical Publishers, Inc., 1974, ISBN 0-8269-0402-5