ಏಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಣಿಯು(ladder) ಲಂಬ ಅಥವಾ ಬಾಗಿದ ಮೆಟ್ಟಿಲುಗಳ ಸಮೂಹ. ಎರಡು ಬಗೆಯ ಏಣಿಗಳಿವೆ: ಬಾಗದ ಏಣಿಗಳು - ಇವು ಸ್ವತಃ ಆಧಾರವಾಗಿರುತ್ತವೆ ಅಥವಾ ಇವನ್ನು ಗೋಡೆಯಂತಹ ಲಂಬ ಮೇಲ್ಮೈಗೆ ವಾಲಿಸಿ ಇಡಬಹುದು, ಇನ್ನೊಂದು ಬಗೆಯೆಂದರೆ ಸುತ್ತಿಕೊಳ್ಳಬಲ್ಲ ಏಣಿಗಳು, ಉದಾಹರಣೆಗೆ ಹಗ್ಗ ಅಥವಾ ಅಲ್ಯುಮಿನಿಯಂನಿಂದ ತಯಾರಿಸಿದಂಥವು. ಇವನ್ನು ಮೇಲಿನಿಂದ ಜೋತು ಬಿಡಬಹುದು. ಒಂದು ಬಾಗದ ಏಣಿಯ ಲಂಬ ಅಂಗಗಳನ್ನು ಲಂಬತೊಲೆಗಳು/ದೂಲಗಳು ಅಥವಾ ಲಂಬಕಂಬಿಗಳು ಅಥವಾ ಲಂಬಪಟ್ಟಿಗಳು ಎಂದು ಕರೆಯಲಾಗುತ್ತದೆ. ಬಾಗದ ಏಣಿಗಳನ್ನು ಸಾಮಾನ್ಯವಾಗಿ ಸಾಗಿಸಬಹುದು, ಆದರೆ ಕೆಲವು ಬಗೆಗಳು ಒಂದು ರಚನೆ, ಕಟ್ಟಡ, ಅಥವಾ ಉಪಕರಣಕ್ಕೆ ಶಾಶ್ವತವಾಗಿ ಜೋಡಿಸಲ್ಪಟ್ಟಿರುತ್ತವೆ. ಇವನ್ನು ಸಾಮಾನ್ಯವಾಗಿ ಲೋಹ, ಕಟ್ಟಿಗೆ, ಅಥವಾ ನಾರುಗಾಜಿನಿಂದ ತಯಾರಿಸಲಾಗುತ್ತದೆ, ಆದರೆ ಗಟ್ಟಿಯಾದ ಪ್ಲಾಸ್ಟಿಕ್‍ನಿಂದ ತಯಾರಿಸಿದ ಏಣಿಗಳು ಪರಿಚಿತವಿವೆ.

ಬಾಗದ ಏಣಿಗಳು ಅನೇಕ ರೂಪಗಳಲ್ಲಿ ಲಭ್ಯವಿವೆ. ಜೋಡಿಸಿದ ಏಣಿಯಲ್ಲಿ ಎರಡು ಪಾರ್ಶ್ವದ ಅಂಗಗಳನ್ನು ಹಲವಾರು ಮೆಟ್ಟಿಲುಗಳಿಂದ ಜೋಡಿಸಲಾಗಿರುತ್ತದೆ; ಇವನ್ನು ರಚನೆಗೆ ಲಗತ್ತಿಸಲಾಗಿರುತ್ತದೆ ಮತ್ತು ಯಾವುದೇ ಚಲಿಸುವ ಭಾಗಗಳಿರುವುದಿಲ್ಲ. ವಿಸ್ತರಣಾ ಏಣಿ ಅಥವಾ ದೂರದರ್ಶಕ ಏಣಿ - ಇದು ಒಂದು ಸ್ಥಿರ ಏಣಿಯಾಗಿದ್ದು, ಅನುಕೂಲಕರ ಸಂಗ್ರಹಣೆಗಾಗಿ ಇದನ್ನು ಎರಡು ಅಥವಾ ಹೆಚ್ಚು ಲಂಬಗಳಾಗಿ ವಿಭಜಿಸಲಾಗಿರುತ್ತದೆ; ಶೇಖರಣೆಗಾಗಿ ಲಂಬಗಳನ್ನು ಒಟ್ಟಾಗಿ ಜಾರಿಸಬಹುದು ಅಥವಾ ಏಣಿಯ ಉದ್ದವನ್ನು ವಿಸ್ತರಿಸಲು ಬೇರೆಯಾಗುವಂತೆ ಜಾರಿಸಬಹುದು; ಏಣಿಯನ್ನು ಸುಲಭವಾಗಿ ವಿಸ್ತರಿಸಲು ರಾಟೆ ವ್ಯವಸ್ಥೆಯನ್ನು ಜೋಡಿಸಬಹುದು. ಹೀಗೆ ಇದನ್ನು ನೆಲದ ಮೇಲಿರುವ ನಿರ್ವಾಹಕನು ನಿಭಾಯಿಸಬಹುದು. ಕೆಲಸವಾದ ನಂತರ ಏಣಿಯನ್ನು ಅದರ ಜಾಗದಲ್ಲಿ ಬಿಗಿಣಿಗಳು ಮತ್ತು ತಡೆಗೂಟಗಳನ್ನು ಬಳಸಿ ಬೀಗ ಹಾಕಿ ಇಡಬಹುದು. ಅಗ್ನಿಶಾಮಕ ಸೇವೆಯ ೬೫ ಅಡಿ, ೫೦ ಅಡಿ, ಮತ್ತು ಕೆಲವು ೩೫ ಅಡಿಯ ವಿಸ್ತರಣಾ ಏಣಿಗಳು ಏರಿಸುವುದು, ಆಧಾರ ಗೂಟ ಒದಗಿಸುವಲ್ಲಿ, ವಿಸ್ತರಿಸುವಲ್ಲಿ, ಸ್ಥಾಪಿಸುವಲ್ಲಿ, ಹಿಂತೆಗೆದುಕೊಳ್ಳುವಲ್ಲಿ ಮತ್ತು ಕೆಳಗಿಳಿಸುವಲ್ಲಿ ನೆರವಾಗಲು ಬ್ಯಾಂಗರ್ ಕೋಲುಗಳು, ನಿಲ್ಲು ಕೋಲುಗಳನ್ನು ಬಳಸುತ್ತವೆ. ಇದಕ್ಕೆ ಕಾರಣ ಅದರ ಭಾರದ ತೂಕ. ಕ್ರಿಸ್ಮಸ್ ಮರ ಏಣಿ - ಧುಮುಕುವವರಿಗೆ ಒಂದು ಬಗೆಯ ಹತ್ತುವ ಏಣಿಯಾಗಿದೆ. ಇದು ಒಂದು ಒಂಟಿ ಕೇಂದ್ರ ಲಂಬಪಟ್ಟಿಯನ್ನು ಹೊಂದಿರುತ್ತದೆ ಮತ್ತು ಧುಮುಕುವವನಿಗೆ ಈಜುರೆಕ್ಕೆಗಳನ್ನು ಧರಿಸಿಯೇ ಏಣಿಯನ್ನು ಹತ್ತುವ ಸಲುವಾಗಿ ಅನುಮತಿ ನೀಡಲು ಪಾರ್ಶ್ವಗಳಲ್ಲಿ ತೆರೆದಿರುತ್ತದೆ. ಸೇತುವೆ ಏಣಿ - ಇಳಿವಿನಿಂದ ಬೇರ್ಪಟ್ಟ ಎರಡು ಬಿಂದುಗಳ ನಡುವೆ ಸಾಗುಮಾರ್ಗವಾಗಿ ಕಾರ್ಯನಿರ್ವಹಿಸಲು ಅಡ್ಡವಾಗಿ ಇರಿಸಲಾದ ಒಂದು ಬಗೆಯ ಏಣಿ. ದಾಳಿ ಏಣಿ - ಗೋಡೆಗಳನ್ನು ಏರಲು ಮತ್ತು ಕಂದಕಗಳನ್ನು ದಾಟಲು ನೆರವಾಗಲು ಮುತ್ತಿಗೆ ಯುದ್ಧದಲ್ಲಿ ಇದನ್ನು ಬಳಸಲಾಗುತ್ತದೆ. ಮೇಲಟ್ಟದ ಏಣಿ - ಮೇಲಟ್ಟ ಅಥವಾ ಮೇಲಂತಸ್ತಿಗೆ ಪ್ರವೇಶ ನೀಡಲು ಒಳತಾರಸಿಯಿಂದ ಕೆಳಗೆ ಎಳೆಯಲಾಗುತ್ತದೆ.

"https://kn.wikipedia.org/w/index.php?title=ಏಣಿ&oldid=1103870" ಇಂದ ಪಡೆಯಲ್ಪಟ್ಟಿದೆ