ಎತ್ತುಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಲಂಡನ್ ಅಂಡರ್‍ಗ್ರೌಂಡ್ ನಿಲ್ದಾಣದ ಕೆಳಮಟ್ಟದಲ್ಲಿ ಎತ್ತುಗಗಳ ಸಮೂಹ. ಬಾಣದ ಗುರುತುಗಳು ಪ್ರತಿ ಎತ್ತುಗದ ಸ್ಥಿತಿ ಮತ್ತು ಪ್ರಯಾಣದ ದಿಕ್ಕನ್ನು ಸೂಚಿಸುತ್ತವೆ.

ಎತ್ತುಗವು ಜನ ಅಥವಾ ಸರಕುಗಳನ್ನು ಕಟ್ಟಡ, ಹಡಗು ಅಥವಾ ಇತರ ರಚನೆಗಳ ಮಹಡಿಗಳ (ಹಂತಗಳು, ಅಟ್ಟಗಳು) ನಡುವೆ ಸಮರ್ಥವಾಗಿ ಸ್ಥಳಾಂತರಿಸುವ ಒಂದು ಬಗೆಯ ಲಂಬ ಸಾರಿಗೆ ಸಾಧನ. ಎತ್ತುಗಗಳು ಸಾಮಾನ್ಯವಾಗಿ ಕರ್ಷಣ ಹೊರಜಿಗಳು ಅಥವಾ ಎತ್ತು ಯಂತ್ರದಂತಹ ಪ್ರತಿಭಾರ ವ್ಯವಸ್ಥೆಗಳನ್ನು ನಡೆಸುವ ಅಥವಾ ಜ್ಯಾಕ್‍ನಂತಹ ಉರುಳೆಯಾಕಾರದ ಆಡುಬೆಣೆಯನ್ನು ಎತ್ತಲು ನೀರಿನಂಥ ದ್ರವವನ್ನು ಒತ್ತುವ ವಿದ್ಯುತ್ ಚಾಲಕಯಂತ್ರಗಳಿಂದ ಚಾಲಿತವಾಗಿರುತ್ತವೆ. ಕೃಷಿ ಮತ್ತು ತಯಾರಿಕೆಯಲ್ಲಿ, ಎತ್ತುಗವು ಸಾಮಗ್ರಿಗಳನ್ನು ಒಂದು ನಿರಂತರವಾದ ಧಾರೆಯಲ್ಲಿ ಎತ್ತಿ ತೊಟ್ಟಿಗಳಲ್ಲಿ ಹಾಕುವ ಯಾವುದೇ ರೀತಿಯ ಸಾಗಣಾ ಸಾಧನ.

"https://kn.wikipedia.org/w/index.php?title=ಎತ್ತುಗ&oldid=715947" ಇಂದ ಪಡೆಯಲ್ಪಟ್ಟಿದೆ