ಚೈನ್ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೈನ್ ಸಿಂಗ್
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ
ಜನನ೧೯೮೪ ಎಪ್ರಿಲ್ ೫
ದೋಡ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರ ರಾಜ್ಯ, ಭಾರತ
ನಿವಾಸಚಾನ್ಸರ್
ಎತ್ತರ೧.೭೨ ಮೀ.
ತೂಕ೬೯ ಕಿ.ಗ್ರಾಂ.
Sport
ದೇಶಭಾರತ
ಕ್ರೀಡೆಶೂಟಿಂಗ್
ಸ್ಪರ್ಧೆಗಳು(ಗಳು)ರೈಫಲ್
ಕ್ಲಬ್ಭಾರತೀಯ ಸೇನೆ

ಚೈನ್ ಸಿಂಗ್ ಅವರು ಒಬ್ಬ ಭಾರತೀಯ ಕ್ರೀಡಾ ಶೂಟರ್. ಇವರು ೦೫ ಏಪ್ರಿಲ್ ೧೯೮೯ರಂದು ಜನಿಸಿದ್ದಾರೆ. ೨೦೧೪ರ ಏಷೀಯನ್ ಗೇಮ್ಸ್ ನಲ್ಲಿ ಪುರುಷರ ೫೦ ಮೀಟರ್ ರೈಫಲ್ ನಲ್ಲಿ ಮೂರು ಸ್ಥಾನದ ಆಟದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.[೧] ಕುವೈತ್ನಲ್ಲಿ ನೆಡೆದ ೭ನೇ ಏಷೀಯನ್ ಏರ್ಗನ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕವನ್ನು ವಯಕ್ತಿಕ ವಿಭಾಗದಲ್ಲಿ ಗಳಿಸಿದ್ದಾರೆ. ೨೦೧೬ರ ದಕ್ಷಿಣ ಏಷೀಯ ಗೇಮ್ಸ್ ನಲ್ಲಿ ವಯಕ್ತಿಕ ವಿಭಾಗದಲ್ಲಿ ಮೂರು ಚಿನ್ನದ ಪದಕ ಮತ್ತು ಗುಂಪು ಆಟದಲ್ಲಿ ಮೂರು ಚಿನ್ನದ ಪದಕ ಸೇರಿದಂತೆ ಒಟ್ಟು ಆರು ಪದಕಗಳನ್ನು ಪಡೆದಿದ್ದಾರೆ.[೨]

ವೃತ್ತಿ ಜೀವನ[ಬದಲಾಯಿಸಿ]

ಚೈನ್ ಸಿಂಗ್ ರವರು ಶೂಟ್ ಅನ್ನು ಭಾರತೀಯ ಸೇನೆಯಲ್ಲಿ ಕಲಿತರು.

೨೦೧೪ರ ಏಷೀಯನ್ ಗೇಮ್ಸ್[ಬದಲಾಯಿಸಿ]

ದಕ್ಷಿಣ ಕೊರಿಯದಲ್ಲಿ ನೆಡೆದ ೨೦೧೪ರ ಏಷೀಯನ್ ಗೇಮ್ಸ್‍ನಲ್ಲಿ ೪೪೧.೭ ಅಂಕವನ್ನು ಗಳಿಸಿ, ಪುರುಷರ ೫೦ ಮೀಟರ್ ರೈಫಲ್ ನಲ್ಲಿ ಕಂಚಿನ ಪದಕ ಪಡೆದರು[೩].

೭ನೇ ಏಷೀಯನ್ ಏರ್ಗನ್ ಚಾಂಪಿಯನ್ ಶಿಪ್[ಬದಲಾಯಿಸಿ]

೨೦೧೪ರಲ್ಲಿ ಕುವೈತ್ನಲ್ಲಿ ನೆಡೆದ ಏಳನೇ ಏಷೀಯನ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಇದು ಮಾರ್ಚ್ ೦೭ ರಿಂದ ೧೫ನೇ ತಾರೀಖಿನವರೆಗೆ ನೆಡೆದಿತ್ತು.ಈ ಆಟದಲ್ಲಿ ೨೦೬ ಅಂಕಗಳನ್ನು ಗಳಿಸಿದ್ದಾರೆ.

೨೦೧೫ರ ರಾಷ್ಟ್ರೀಯ ಕ್ರೀಡಾಕೂಟ[ಬದಲಾಯಿಸಿ]

ಕೇರಳದ ಏಳು ಜಿಲ್ಲೆಗಳಲ್ಲಿ ಜನವರಿ ೩೧ ರಿಂದ ಫ್ರೆಬವರಿ ೧೪ರ ವರೆಗೆ ೨೦೧೫ರ ರಾಷ್ಟ್ರೀಯ ಕ್ರೀಡಾಕೂಟ ನೆಡೆಯಿತು. ಇದು ಕೇರಳದಲ್ಲಿ ನೆಡೆದ ೨ನೇ ರಾಷ್ಟ್ರೀಯ ಕ್ರೀಡಾಕೂಟ. ಸಿಂಗ್ ರವರು ವಯಕ್ತಿಕ ವಿಭಾಗದಲ್ಲಿ

ಮೂರು(೨ ಚಿನ್ನ ಮತ್ತು ೧ ಕಂಚು) ಪದಕಗಳನ್ನು ಮತ್ತು ಗುಂಪು ಆಟದಲ್ಲಿ ಮೂರು ಪದಕಗಳನ್ನು ಗೆದ್ದರು. ೧೨೦೦ ಅಂಕಗಳಿಗೆ ೧೧೮೧ ಅಂಕಗಳನ್ನು ಪಡೆದು, ೫೦ ಮೀಟರ್ ರೈಫಲ್ ನಲ್ಲಿ ಮೂರು ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದರು. ಇದು ಇವರ ವಯಕ್ತಿಕ ದಾಖಲೆಯು ಆಗಿದೆ.

೨೦೧೬ರ ದಕ್ಷಿಣ ಏಷ್ಯಿಯ ಕ್ರೀಡಾಕೂಟ[ಬದಲಾಯಿಸಿ]

೨೦೧೬ರಲ್ಲಿ ಗುಹವಾಟಿಯಲ್ಲಿ ನೆಡೆದ ೧೨ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಆರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

೨೦೧೬ರ ರಿಯೋ ಒಲಂಪಿಕ್ಸ್[ಬದಲಾಯಿಸಿ]

೨೦೧೬ರಲ್ಲಿ ಬ್ರೆಜಿಲ್ ನಲ್ಲಿ ನೆಡೆದ ರಿಯೋ ಒಲಂಪಿಕ್ಸ್ ನಲ್ಲಿ ೫೦ ಮೀಟರ್ ರೈಫಲ್ ಶೂಟಿಂಗ್ ನಲ್ಲಿ ೨೩ನೇ ಸ್ಥಾನ ಪಡೆದರು.

ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆ[ಬದಲಾಯಿಸಿ]

೨೦೧೭ರ ಡಿಸೆಂಬರ್ ನಲ್ಲಿ ಕೇರಳದಲ್ಲಿ ನೆಡೆದ ಆರನೇ ರಾಷ್ಟೀಯ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.

ಕಾಮನ್ವೇಲ್ತ್ ಕ್ರೀಡಾಕೂಟ[ಬದಲಾಯಿಸಿ]

ಆಸ್ಟ್ರೇಲಿಯಾದಲ್ಲಿ ನೆಡೆದ ಕಾಮನ್ವೇಲ್ತ್ ಕ್ರೀಡಾಕೂಟದಲ್ಲಿ ಪುರುಷರ ೫೦ ಮೀಟರ್ ರೈಫಲ್ ಪ್ರೊನೆಯಲ್ಲಿ ೪ನೇ ಸ್ಥಾನ ಮತ್ತು ೫೦ ಮೀಟರ್ ರೈಫಲ್ನಲ್ಲಿ(೩ ಸ್ಥಾನಗಳಲ್ಲಿ) ೫ನೇ ಸ್ಥಾನ ಗಳಿಸಿದ್ದಾರೆ.


ಚೈನ್ ಸಿಂಗ್

ಉಲ್ಲೇಖ[ಬದಲಾಯಿಸಿ]

  1. https://www.thehindu.com/sport/other-sports/asian-games-indian-shooter-chain-singh-wins-bronze-medal-in-50m-rifle-3-positions/article6452357.ece
  2. https://www.hindustantimes.com/other-sports/india-dominate-sag-shooting-as-chain-singh-bags-sixth-gold-medal/story-Nhm9cKI46YsCYl1QtNCY7K.html
  3. https://www.business-standard.com/article/pti-stories/doda-youth-brings-laurels-to-army-j-k-by-winning-bronze-114092900984_1.html