ವಿಷಯಕ್ಕೆ ಹೋಗು

ರಿಚರ್ಡ್ ಆರ್.ಅರ್ನ್ಸ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಿಚರ್ಡ್ ಆರ್.ಅರ್ನ್ಸ್ಟ್
Richard R. Ernst in 2009
ಜನನRichard Robert Ernst
(1933-08-14) ೧೪ ಆಗಸ್ಟ್ ೧೯೩೩ (ವಯಸ್ಸು ೯೧)
Winterthur, Switzerland
ರಾಷ್ಟ್ರೀಯತೆSwiss
ಕಾರ್ಯಕ್ಷೇತ್ರ
ಸಂಸ್ಥೆಗಳು
ಅಭ್ಯಸಿಸಿದ ವಿದ್ಯಾಪೀಠETH Zurich (PhD)
ಮಹಾಪ್ರಬಂಧKernresonanz-Spektroskopie mit stochastischen Hochfrequenzfeldern (1962)
ಪ್ರಸಿದ್ಧಿಗೆ ಕಾರಣErnst angle
Fourier transform NMR spectroscopy
2D NMR spectroscopy/Nuclear Overhauser effect spectroscopy/Exclusive correlation spectroscopy
3D NMR spectroscopy
ಗಮನಾರ್ಹ ಪ್ರಶಸ್ತಿಗಳು
ಜಾಲತಾಣ
www.chab.ethz.ch/das-departement/personen/emeriti/emeriti-ho

ರಿಚರ್ಡ್ ರಾಬರ್ಟ್ ಅರ್ನ್ಸ್ಟ್ (ಜನನ ೧೪ ಆಗಸ್ಟ್ ೧೯೩೩) ಒಬ್ಬ ಸ್ವಿಸ್ ಭೌತಿಕ ರಸಾಯನಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿಗಳು ಪಡೆದ ರಸಾಯನಶಾಸ್ತ್ರಜ್ಞ.[]

ಅರ್ನ್ಸ್ಟ್ ೧೪ ಅಗಸ್ಟ್ ೧೯೩೩ರಲ್ಲಿ ಸ್ವಿಟ್ಜರ್ಲ್ಯಾಂಡ್ ನ ವಿಂಟರ್ಥೂನಲ್ಲಿ ಜನಿಸಿದರು. ಅರ್ನ್ಸ್ಟ್ ೧೯೯೧ ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಫೌರಿಯರ್ ರೂಪಾಂತರದ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ (ಎನ್ಎಂಆರ್) ಸ್ಪೆಕ್ಟ್ರೋಸ್ಕೊಪಿ ಅಭಿವೃದ್ಧಿಗೆ ಈ ಪ್ರಶಸ್ತಿ ಪಡೆದರು.[]

ಶಿಕ್ಷಣ

[ಬದಲಾಯಿಸಿ]

ಅರ್ನ್ಸ್ಟ್ ೧೯೫೭ ರಲ್ಲಿ ರಸಾಯನಶಾಸ್ತ್ರದಲ್ಲಿ ಡಿಪ್ಲೊಮವನ್ನು ಮಾಡಿದರು. ಮತ್ತು ಜುರಿಚ್ನಿಂದ ೧೯೬೨ ರಲ್ಲಿ ಭೌತಿಕ ರಸಾಯನಶಾಸ್ತ್ರದಲ್ಲಿ ಪಿ.ಹೆಚ್ಡಿ ಪದವಿ ಪಡೆದರು.[]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
  • ಮಾರ್ಸೆಲ್ ಬೆನೊಯಿಸ್ಟ್ ಪ್ರಶಸ್ತಿ (೧೯೮೫)
  • ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ (೧೯೯೧)
  • ರಸಾಯನಶಾಸ್ತ್ರದಲ್ಲಿ ವೋಲ್ಫ್ ಪ್ರಶಸ್ತಿ (೧೯೯೧)
  • ಲೂಯಿಸಾ ಗ್ರಾಸ್ ಹೊರ್ವಿಟ್ಜ್ ಪ್ರಶಸ್ತಿ (೧೯೯೧)
  • ಫಾರ್ಮೆಮ್ಆರ್ಎಸ್ (೧೯೯೩)

ಅರ್ನ್ಸ್ಟ್ ೨೦೦೨ ರಲ್ಲಿ ಎಸ್ಟೋನಿಯನ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಬಾಂಗ್ಲಾದೇಶ ಅಕಾಡೆಮಿ ಆಫ್ ಸೈನ್ಸಸ್ನ ವಿದೇಶಿ ಸಹವರ್ತಿಯಾಗಿದ್ದರು. ಅವರು ೧೯೯೩ ರಲ್ಲಿ ರಾಯಲ್ ಸೊಸೈಟಿಯ ವಿದೇಶಿ ಸದಸ್ಯರಾಗಿ ಆಯ್ಕೆಯಾದರು. ಅವರಿಗೆ ೧೯೮೯ ರಲ್ಲಿ ಜಾನ್ ಗ್ಯಾಂಬಲ್ ಕಿರ್ಕ್ವುಡ್ ಪದಕವನ್ನು ನೀಡಲಾಯಿತು. ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ೧೯೯೧ ರಲ್ಲಿ ರಿಚರ್ಡ್ ಆರ್. ಅರ್ನ್ಸ್ಟ್ ಅವರಿಗೆ ನೀಡಲಾಯಿತು. ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ (ಎನ್ಎಂಆರ್) ಸ್ಪೆಕ್ಟ್ರೋಸ್ಕೊಪಿ ವಿಧಾನದ ಅಭಿವೃದ್ಧಿಗೆ ಕೊಡುಗೆ ಪಡೆದರು. ಮ್ಯೂನಿಚ್ ಮತ್ತು ಯೂನಿವರ್ಸಿಟಿ ಆಫ್ ಜುರಿಚ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಗೌರವಾನ್ವಿತ ಡಾಕ್ಟರೇಟ್ ಪದವಿ ಪಡೆದರು. ೧೯೯೧ ರಲ್ಲಿ ಅರ್ನ್ಸ್ಟ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಲೂಯಿಸಾ ಗ್ರಾಸ್ ಹೋರ್ವಿಟ್ಜ್ ಪ್ರಶಸ್ತಿಯನ್ನು ಪಡೆದರು. ಹಾಗೆ 2000 ರಲ್ಲಿ ಟಡಿಯಸ್ ರೀಚ್ಸ್ಟೈನ್ ಪದಕವನ್ನು ಮತ್ತು ೨೦೦೪ರಲ್ಲಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ರೊಮೇನಿಯಾ ಪ್ರಶಸ್ತಿಯನ್ನು ಪಡೆದರು. []

ಉಲ್ಲೇಖಗಳು

[ಬದಲಾಯಿಸಿ]
  1. "Professor Richard Ernst ForMemRS". London: Royal Society. Archived from the original on 2015-10-11.
  2. https://www.mediatheque.lindau-nobel.org/laureates/ernst
  3. https://www.notablebiographies.com/supp/Supplement-Ca-Fi/Ernst-Richard-R.html
  4. https://www.chab.ethz.ch/en/the-department/people/emeriti/emeriti-homepages/richard-ernst.html
  5. https://www.nobelprize.org/prizes/chemistry/1991/ernst/biographical/