ಸದಸ್ಯ:Shalini srinivasan bcz

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ




ಪರಿಚಯ[ಬದಲಾಯಿಸಿ]

ಶಾಲಿನಿ.ಎಸ್ ಎಂಬುದು ನನ್ನ ಹೆಸರು. ನಾನು ೨೨/೦೭/೨೦೦೦ ರಂದು ತಮಿಳುನಾಡಿನ ಹೋಸುರಿನಲ್ಲಿ ಜನಿಸಿದೆ.

ಹೋಸುರು

ನನಗೆ ಈ ಜಗತ್ತನ್ನು ಪರಿಚಯಿಸಿದ ನನ್ನ ತಂದೆ, ತಾಯಿಯರ ಹೆಸರು ಶ್ರೀನಿವಾಸನ್.ಆರ್ ಮತ್ತು ಮಂಜುಳಾ.ಎಸ್. ನನಗೆ ಒಂಬತ್ತನೆ ತರಗತಿಯಲ್ಲಿ ವ್ಯಾಸಾಂಗ ಮಾಡುವ ಒಂದು ಪ್ರೀತಿಯ ತಂಗಿಯು ಇದ್ದಾಳೆ. ಅವಳ ಹೆಸರು ಶ್ವೇತಾ.ಎಸ್. ನಮ್ಮ ಮನೆಯಲ್ಲಿ ಒಟ್ಟು ನಾಲ್ಕು ಜನ ಇದ್ದೆವೆ. ನಾವು ಆನೇಕಲ್ ತಾಲೂಕಿನ, ಕಮ್ಮಸಂದ್ರ ಎಂಬ ಊರಿನಲ್ಲಿ ವಾಸಿಸುತ್ತಿದ್ದೆವೆ. ನನ್ನ ತಂದೆಯು ಬ್ಯಾಂಕಿನಲ್ಲಿ ಕೆಲಸ ಮಡುತ್ತಿದ್ದಾರೆ. ಶಿಕ್ಷಣದಲ್ಲಿ ಮೊದಲ ಗುರು ತಾಯಿ ಮತ್ತು ಮನೆಯೇ ಮೊದಲ ಪಾಠ ಶಾಲೆ. ಅದರಂತೆ ನನ್ನ ಅಮ್ಮ ಶಿಕ್ಷಕಿಯಾದ ಕಾರಣ ನನ್ನನ್ನು ಚೆನ್ನಾಗಿ ಓದಲು ಪ್ರೋತ್ಸಾಹಿಸುತ್ತಿದ್ದರು. ಅವರು ಎಸ್.ಎಫ್.ಎಸ್ ಶಾಲೆಯಲ್ಲಿ ಒಂದನೆ ತರಗತಿಯ ಮಕ್ಕಳಿಗೆ ಗಣಿತಶಾಸ್ತ್ರವನ್ನು ಕಲಿಸುತ್ತಿದ್ದಾರೆ. ನಮ್ಮ ಕುಟುಂಬ ಚಿಕ್ಕದ್ದಾದರು, ಸಂತೋಷಗಳಿಂದ ಕೂಡಿದೆ. ನಾನು ದೇವರಲ್ಲಿ ಎಲ್ಲರಿಗು ಇದೆ ರೀತಿಯ ಸಂತಸಗಳು ನೆರೆದ ಕುಟುಂಬ ಸಿಗಬೇಕೆಂದು ಪ್ರಾರ್ಥಿಸುತ್ತೇನೆ.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಆನೇಕಲ್ ತಾಲೂಕಿನ ಎಸ್.ಎಫ್.ಎಸ್ ಶಾಲೆಯಲ್ಲಿ ಮುಗಿಸಿದೆ. ನಮ್ಮ ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಒಳ್ಳೆಯ ಅಂಕಗಳು ಪಡೆಯಬೇಕು ಎಂದು ಪ್ರೋತ್ಸಾಹ ನೀಡುತ್ತಿದ್ದರು. ಆ ಪ್ರೋತ್ಸಾಹದ ಕಾರಣ ನಾನು ನನ್ನ ಹತ್ತನೆ ತರಗತಿಯಲ್ಲಿ ೯೯% ಗಳಿಸಿ, ಆನೇಕಲ್ ತಾಲೂಕಿನ ದ್ವಿತೀಯ ಸ್ಥಾನ ಪಡೆದೆನು. ಇದು ನನ್ನ ಜೀವನದಲ್ಲಿ ಒಂದು ದೊಡ್ಡ ಸಂಭ್ರಮ. ಆನಂತರ ಎಲ್ಲರ ಸಲಹೆಯಂತೆ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಿಜ್ಞಾನವನ್ನು ಆಯ್ಕೆಮಾಡಿ ಉತ್ತಮವಾಗಿ ಓದಬೇಕೆಂಬ ಛಲವನ್ನು ಹೊತ್ತು ಕಾಲೆಜಿಗೆ ಸೇರಿದೆನು. ಮೊದಲನೆಯ ವ‍ರ್ಷ ಆ ಬುದ್ಧಿವಂತರ ಸಮುದ್ರದಲ್ಲಿ ನಾನೂ ಕೂಡ ಸಾಧಿಸಬೇಕು ಎಂದು ಓದಿ, ೯೧% ಗಳಿಸಿದೆನು. ನಾನು ಕಾಲೇಜಿನಲ್ಲಿ ಕನ್ನಡವನ್ನು ನನ್ನ ದ್ವಿತೀಯ ಭಾಷೆಯಾಗಿ ಆಯ್ದುಕೊಂಡು, ಕನ್ನಡದ ಮೇಲಿರುವ ಪ್ರೀತಿಯನ್ನು ಇನ್ನಷ್ಟು ಬೆಳೆಸಿಕೊಂಡೆನು. ನಾನು ದ್ವಿತೀಯ ಪಿ.ಯು.ಸಿ ಯಲ್ಲಿ ಒಳ್ಳೆಯ ಅಂಕಗಳು ಪಡೆಯಬೇಕು ಎಂಬ ಗುರಿಯತ್ತ ನಡೆದು, ನಮ್ಮ ಮನೆಯವರ ಮೆಚ್ಚುಗೆ ಪಡೆಯುವಂತೆ ೯೭% ಗಳಿಸಿದೆನು.

ನಾನು ಈಗ ಬಿ.ಎಸ್.ಸಿ ಓದುತ್ತಿರುವುದು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ.

ಕ್ರೈಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)

ಅದರಲ್ಲಿ ಜೈವಿಕ ತಂತ್ರಜ್ಞಾನ[೧], ರಸಾಯನ ಶಾಸ್ತ್ರ ಮತ್ತು ಪ್ರಾಣಿ ಶಾಸ್ತ್ರ ಮುಖ್ಯ ವಿಷಯಗಳನ್ನಾಗಿ ಕೊಂಡಿರುವ ಬಿ.ಸಿ.ಜೆಡ್ ನಲ್ಲಿ ವ್ಯಾಸಾಂಗ ಮಾಡುತ್ತಿದ್ದೆನೆ. ನನಗೆ ಪ್ರೀಯವಾದ ವಿಷಯ ಜೈವಿಕ ತಂತ್ರಜ್ಞಾನ. ಇದರಿಂದ ನನ್ನ ತಂದೆ ತಾಯಿಯನ್ನು ನಾನು ಸಂತೋಷ ಪಡಿಸಿರುವೆ ಎಂದು ನೆನೆಯಲು ನನಗೆ ಬಹಳ ಹೆಮ್ಮೆಯಾಗಿದೆ. ಅವರ ಆ‍ಶೀ‍ರ್ವಾದದೊಂದಿಗೆ ನಾನು ಇನ್ನಷ್ಟು ಸಾಧಿಸಿ ಉತ್ತಮ ವ್ಯಕ್ತಿಯಾಗಬೇಕು ಎಂಬುದು ನನ್ನ ಆಸೆ.

ನನ್ನ ಶಾಲೆಯ ಶಿಕ್ಷಕರು ನನ್ನ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಾರೆ. ನಮ್ಮ ಶಾಲೆಯು ವಿದ್ಯಾರ್ಥಿಗಳಿಗೆ ಓದಲು ಒಳ್ಳೆಯ ವಾತಾವರಣವನ್ನು ಒದಗಿಸುತ್ತದೆ. ತರಗತಿಯಲ್ಲಿ ಅನೇಕ ಭಾರಿ ಮೊದಲ ಸ್ಥಾನವನ್ನು ಪಡೆದಿರುವೆನು. ನನ್ನಲ್ಲಿ ನಾಯಕತ್ವ ಇರುವುದನ್ನು ಕಂಡು ನನ್ನ ಶಿಕ್ಷಕರು ತರಗತಿಯ ಜವಬ್ದಾರಿಗಳನ್ನು ಕೊಡುತ್ತಿದ್ದರು. ನನ್ನ ಪ್ರಾಮಾಣಿಕತೆ ಮತ್ತು ಬೆಂಬಲ ಸ್ವಭಾವವನ್ನು ಕಂಡ ಗುರುಗಳು ನನ್ನನ್ನು ಶಾಲೆಯ ನಾಯಕಿಯನ್ನಾಗಿ ಒಂಬತ್ತನೆ ತರಗತಿಯಲ್ಲಿ ಆಯ್ಕೆ ಮಡಿದರು. ನನ್ನಲ್ಲಿರುವ ನಾಯಕತ್ವ[೨]ದ ಮೂಲಕ ಸಕಾರಾತ್ಮಕ ಶಕ್ತಿ ಮತ್ತು ವಿಶ್ವಾಸವನ್ನು ಇತರ ವಿದ್ಯಾರ್ಥಿಗಳಿಗು ಹರಡಿದೆನು. ಶಾಲೆಯಲ್ಲಿ ಎಲ್ಲಾ ತರಹದ ಸ್ಪ‍ರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದೇನೆ. ನನ್ನನ್ನು ಒಂದು ಪರಿ‍ರ್ಪೂಣ ವ್ಯಕ್ತಿಯಾಗಿ ರೂಪಿಸಿಕೊಳ್ಳುವಲ್ಲಿ ನನ್ನ ಕಾಲೇಜಿನ ಶಿಕ್ಷಕರು ಮತ್ತು ಸ್ನೇಹಿತರು ಒಂದು ದೊಡ್ದ ಪಾತ್ರವನ್ನು ವಹಿಸಿದ್ದಾರೆ.

ಹವ್ಯಾಸಗಳು[ಬದಲಾಯಿಸಿ]

ನನಗೆ ನೃತ್ಯ ಮಡುವುದೆಂದರೆ ಬಹಳ ಇಷ್ಟ. ನನ್ನ ಹವ್ಯಾಸಗಳು[೩] ಓದುವುದು, ಪ್ರವಾಸ ಮಾಡುವುದು, ಹಾಡುವುದು ಮುಂತಾದವು. ವಾಲಿಬಾಲ್

ವಾಲಿಬಾಲ್

ಆಡುವುದು ನನಗೆ ಬಹಳ ಇಷ್ಟ. ವಾಲಿಬಾಲ್ ನಲ್ಲಿ ತಾಲೂಕು ಮಟ್ಟದ ಸ್ಪ‍ರ್ಧೆಯಲ್ಲಿ ಭಾಗವಹಿಸಿದ್ದೇನೆ. ನನಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಲ್ಲಿ ಆಸಕ್ತಿ ಇರುವುದರಿಂದ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ[೪] ಕೊಡುವ ಅಲವು ಅವಕಾಶಗಳಿಂದ ನಾನು ಬಹಳಷ್ಟು ವಿಶಯಗಳನ್ನು ಕಲಿತು ಎಲ್ಲಾ ಸ್ಪ‍ರ್ಧೆಗಳಲ್ಲಿಯು ಭಾಗವಹಿಸುತ್ತಿದ್ದೆನೆ.

ವ್ಯಕ್ತಿತ್ವ[ಬದಲಾಯಿಸಿ]

ನನಗೆ ಪ್ರಕೃತಿಯ ಸಂರಕ್ಷಣೆಗಾಗಿ ಕೆಲಸ ಮಾಡುವುದು ಬಹಳ ಇಷ್ಟ. ನಾನು ಧನಾತ್ಮಕ ಚಿಂತನೆ ಉಳ್ಳ ಒಂದು ಸರಳ ವ್ಯಕ್ತಿ. ನಾನು ಎಲ್ಲರಿಗೂ ಸಹಾಯ ಮಾಡಿ, ಅವರ ಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. ನನಗೆ ಕೊಟ್ಟ ಕೆಲಸಗಳನ್ನು ಎಲ್ಲರು ತೃಪ್ತಿ ಪಡುವಂತೆ ಮಾಡಲು ಪ್ರಯತ್ನಿಸುತ್ತೇನೆ. ನಾನು ಎಲ್ಲರನ್ನು ಕುತೂಹಲದಿಂದ ಮಾತನಾಡಿಸುವುದರಿಂದ ನನಗೆ ಅನೇಕ ಗೆಳೆಯರು ಇದ್ದಾರೆ. ನನ್ನ ಸ್ನೇಹಿತರ ಜೊತೆ ನಾನು ಇರುವ ಪ್ರತಿ ದಿನವು ಸಂತೋಷದಿಂದ ಕಳೆಯುತ್ತಿದ್ದೆನೆ. ನನ್ನ ಸುತ್ತಲು ಇರುವ ಜನರನ್ನು ಸಂತೋಷ ಪಡಿಸುವುದು ನನಗೆ ಬಹಳ ಪ್ರೀಯವಾದುದು.ನನ್ನ ಆದರ್ಶ ವ್ಯಕ್ತಿಯು ಅಬ್ದುಲ್ ಕಲಾಂ.[೫] ನನಗೆ ಜೀವನದಲ್ಲಿ ದೊಡ್ಡದಾಗಿ ಸಾಧಿಸಿ ಎಲ್ಲರ ಮೆಚ್ಚುಗೆ ಪಡೆಯಬೇಕು ಎಂಬ ಆಸೆ ಇದೆ. ಮುಂದೆ ನಾನು ನನ್ನ ತಂದೆ, ತಾಯಿಯರ ಉತ್ತಮ ಮಗಳಾಗಿ, ನಾಡಿನ ಜವಬ್ದಾರಿಯ ಪ್ರಜೆಯಾಗಿ ಬದುಕಬೇಕೆಂಬುದು ನನ್ನ ಇಚ್ಛೆ.

ಉಲ್ಲೆಖಗಳು[ಬದಲಾಯಿಸಿ]

  1. https://en.wikipedia.org/wiki/Biotechnology
  2. https://en.wikipedia.org/wiki/Leadership
  3. https://en.wikipedia.org/wiki/List_of_hobbies
  4. https://en.wikipedia.org/wiki/Christ_University
  5. https://en.wikipedia.org/wiki/A._P._J._Abdul_Kalam