ಗೋಪಾಲಕೃಷ್ಣ ದೇಲಂಪಾಡಿ
ಗೋಪಾಲಕೃಷ್ಣ ದೇಲಂಪಾಡಿ ಅವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ದೇಲಂಪಾಡಿಯವರು. ಇವರು ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿರುತ್ತಾರೆ.[೧] ಮತ್ತು ಹಲವು ಪುಸ್ತಕಗಳನ್ನು ಬರೆದಿರುತ್ತಾರೆ.[೨] ೧೨೦೦ಕ್ಕೂ ಹೆಚ್ಚು ಯೋಗ ಶಿಬಿರಗಳನ್ನು ನಡೆಸಿದ ಇವರು ೧೦೦೦ಕ್ಕೂ ಹೆಚ್ಚು ಯೋಗ ಪ್ರದರ್ಶನಗಳನ್ನು ಕರ್ನಾಟಕದಾದ್ಯಂತ ನೀಡಿರುತ್ತಾರೆ.[೩] ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಗಣ್ಯ ವ್ಯಕ್ತಿಗಳು ಇವರಿಂದ ಯೋಗ ತರಬೇತಿ ಪಡೆದಿರುತ್ತಾರೆ. ೧೯೭೭ರಲ್ಲಿ ಪ್ರಥಮ ಯೋಗ ಪ್ರದರ್ಶನವನ್ನು ನೀಡಿರುತ್ತಾರೆ. ಈ ಎಲ್ಲಾ ಸಾಧನೆಗಳಿಂದ ಇವರನ್ನು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಎಂದೂ ಕರೆಯುತ್ತಾರೆ. [೪] ಯೋಗ ಮಾಹಿತಿ, ಸಾಮೂಹಿಕ ಯೋಗ, ಪ್ರಾಣಾಯಾಮ, ಧ್ಯಾನ ಮುದ್ರಾ ಯೋಗ, ಚಕ್ರಧ್ಯಾನ ಆಸಕ್ತರಿಗೆ ಲಘು ಮಂತ್ರ ಮುದ್ರೆಗಳು, ವರ್ಣ ಚಿಕಿತ್ಸೆ ಹಾಗೂ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ಹಾಗೂ ತರಬೇತಿಗಳನ್ನು ನೀಡುತ್ತಿದ್ದಾರೆ.[೫], [೬]
ಪರಿಚಯ
[ಬದಲಾಯಿಸಿ]ಜನನ
[ಬದಲಾಯಿಸಿ]ಮಾರ್ಚ್ ೧೪, ೧೯೫೮ ರಲ್ಲಿ, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ದೇಲ೦ಪಾಡಿ ಗ್ರಾಮದ ಪಟೇಲ ಕೃಷ್ಣಯ್ಯ ಕಾಟೂರಾಯ ಮತ್ತೆ ಪಾರಿಜಾತ ದ೦ಪತಿಗಳಿಗೆ ನಾಲ್ಕನೇ ಪುತ್ರನಾಗಿ ಜನಿಸಿದರು. ಪತ್ನಿ ಶ್ರೀಮತಿ ವೀಣಾ ದೇಲಂಪಾಡಿಯವರು ರಾಷ್ಟ್ರಮಟ್ಟದ ಯೋಗಪಟು. ಇವರಿಗೆ ಕಿಶನ್ ಮತ್ತು ಕಿರಣ್ ಎಂದು ಇಬ್ಬರು ಗಂಡು ಮಕ್ಕಳು.
ಶಿಕ್ಷಣ ಮತ್ತು ಯೋಗ ಶಿಕ್ಷಣ
[ಬದಲಾಯಿಸಿ]ಪ್ರಾಥಮಿಕ ವಿದ್ಯಾಭ್ಯಾಸವನ್ನು ದೇಲಂಪಾಡಿ ಮತ್ತು ಸುಳ್ಯದಲ್ಲಿ ಮತ್ತು ಕಾಲೇಜು ವ್ಯಾಸ೦ಗವನ್ನು ಮ೦ಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾಡಿದರು. ಓದಿನ ಸಂದರ್ಭದಲ್ಲಿ ಸಣ್ಣ ಪ್ರಾಯದಲೇ ಯೋಗಲ್ಲಿ ಅಪಾರ ಆಸಕ್ತಿ ಇದ್ದು, ಶ್ರೀ ಪುಟ್ಟಪ್ಪ ಜೋಷಿ ಸುಳ್ಯ, ಶ್ರೀ ಗುರು ಚಿದಾನಂದ ವಿಟ್ಲ ಮತ್ತು ಮಲ್ಲಾಡಿ ಹಳ್ಳಿಯ ರಾಘವೇಂದ್ರ ಸ್ವಾಮಿಗಳಿಂದ ಮಾರ್ಗದರ್ಶನ ಪಡೆದರು.
ಲೇಖನ ಬರಹ
[ಬದಲಾಯಿಸಿ]ಪುಸ್ತಕಗಳು
[ಬದಲಾಯಿಸಿ]ಇವರು ಬರೆದ ಕೆಲವು ಯೋಗ ಪುಸ್ತಕಗಳು-
- ಆರೋಗ್ಯ ರಕ್ಷಣೆಗಾಗಿ ಯೋಗ (ಐದು ಬಾರಿ ಮುದ್ರಣ)
- ಯೋಗ ಆರೋಗ್ಯ: ಯೋಗದಿಂದ ಯೋಗ್ಯ ವಿದ್ಯಾರ್ಥಿ[೭]
- ಉತ್ತಮ ಜೀವನ ಶೈಲಿಗಾಗಿ ಯೋಗ (ಎರಡು ಬಾರಿ ಮುದ್ರಣ)
- ಯಾವ ರೋಗಿಗೆ ಯಾವ ಯೋಗ (ಸ್ತ್ರೀಯರಿಗಾಗಿ ಯೋಗಾಸನ ಕಿರು ಪತ್ರ)
- ಯೋಗ ಮುದ್ರಾ (ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಪ್ರಕಟ)
- ಗರ್ಭಿಣಿ ಸ್ತ್ರೀಯರಿಗಾಗಿ ಯೋಗ ಹಾಗೂ Yoga – Key to better health and new life (ಪ್ರಕಟಣೆಯ ಹಂತದಲ್ಲಿರುವ ಪುಸ್ತಕಗಳು)
ಪತ್ರಿಕೆಗಳಲ್ಲಿ
[ಬದಲಾಯಿಸಿ]- ಹಲವು ಪತ್ರಿಕೆಗಳಲ್ಲಿ ಇವರು ಯೋಗದ ಬಗೆಗೆ ಬರೆದ ಹಲವು ಬಿಡಿ ಲೇಖನಗಳು ಪ್ರಕಟವಾಗಿವೆ.
ಪ್ರಶಸ್ತಿಗಳು
[ಬದಲಾಯಿಸಿ]ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ “ಯೋಗಾಚಾರ್ಯ”, “ಯೋಗರತ್ನ “ , “ದಸರಾ ಯೋಗ ಸಿರಿ” ( ಮೈಸೂರು ದಸರ ೨೦೦೮). ಹೀಗೆ ಹತ್ತು ಹಲವು ಪ್ರಶಸ್ತಿ, ಬಿರುದುಗಳನ್ನು ನೀಡಿವೆ. ಇವರೊಂದಿಗೆ ತರಬೇತಿ ಪಡೆದವರು ೨೦೦೩ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ, ಅ೦ತರಾಷ್ರೀಯ ಮಟ್ಟದ ಹಿಮಾಲಯ ಯೋಗ ಓಲ೦ಪಿಯಾಡ್ (Himalaya yoga Olympiad) ಸ್ಪರ್ದೆಯಲ್ಲಿ ೧೧ ಪದಕ ಗೆದ್ದಿದ್ದಾರೆ. ಅ೦ತರಾಷ್ರೀಯಮಟ್ಟದ ಯೋಗ ಸ್ಪರ್ದೆಗೆ ನಿರ್ಣಾಯಕರು ಕೂಡ (referee / judge) ಆಗಿದ್ದರು.[೮], [೯], [೧೦].
- ೧.೧೧.೨೦೦೮ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಉಲ್ಲೇಖ
[ಬದಲಾಯಿಸಿ]- ↑ http://shreebharathicollege.com/yoga-taragati-udghatane/
- ↑ https://m.dailyhunt.in/news/india/kannada/varthabharathi-epaper-varthabh/shakti+yoga+shibiradha+samaaropa+samaarambha-newsid-100546312
- ↑ "ಆರ್ಕೈವ್ ನಕಲು". Archived from the original on 2018-09-16. Retrieved 2018-12-10.
- ↑ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.vijayavani.net/vijayavani-yogakshema-yoga-health-stress/[ಶಾಶ್ವತವಾಗಿ ಮಡಿದ ಕೊಂಡಿ]
- ↑ http://panjumagazine.com/?p=1185
- ↑ "ಯೋಗ ಆರೋಗ್ಯ - ಯೋಗದಿಂದ ಯೋಗ್ಯ ವಿದ್ಯಾರ್ಥಿ ಪುಸ್ತಕ, ನವಕರ್ನಾಟಕ ಪ್ರಕಟಣೆ". Archived from the original on 2018-10-20. Retrieved 2019-01-04.
- ↑ http://kannada.eenaduindia.com/State/MalnadandKaravali/DakshinaKannada/Mangalore/2016/06/20170709/3-decade-ago-Gopalkrishna-brought-yoga-national-to.vpf[ಶಾಶ್ವತವಾಗಿ ಮಡಿದ ಕೊಂಡಿ]
- ↑ https://babyhejamady.wordpress.com/2013/03/11/%E0%B2%AF%E0%B3%8B%E0%B2%97%E0%B2%B0%E0%B2%A4%E0%B3%8D%E0%B2%A8-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3-%E0%B2%A6%E0%B3%87%E0%B2%B2%E0%B2%82%E0%B2%AA/
- ↑ "ಆರ್ಕೈವ್ ನಕಲು". Archived from the original on 2012-11-15. Retrieved 2018-12-08.