3ಡಿ ಅಲ್ಟ್ರಾಸೌಂಡ್
3ಡಿ ಅಲ್ಟ್ರಾಸೌಂಡ್ ಒಂದು ಅಲ್ಟ್ರಾಸೌಂಡ್ ತಂತ್ರವಾಗಿದ್ದು, ಸಾಮಾನ್ಯವಾಗಿ ಇದನ್ನು ಭ್ರೂಣ, ಹೃದಯ, ಟ್ರಾನ್ಸ್-ರೆಕ್ಟಲ್ ಮತ್ತು ಇಂಟ್ರಾ-ವಾಸ್ಕುಲರ್ ಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. 3D ಅಲ್ಟ್ರಾಸೌಂಡ್ ನಿರ್ದಿಷ್ಟವಾಗಿ ಅಲ್ಟ್ರಾಸೌಂಡ್ ಡೇಟಾ ಪರಿಮಾಣವನ್ನು ತಿಳಿಯಲು ಉಪಯೋಗಿಸುತ್ತಾರೆ. 3D ಅಲ್ಟ್ರಾಸೌಂಡ್ ಪರಿಮಾಣದ ಸರಣಿಯನ್ನು ಒಳಗೊಂಡಾಗ 4D ಎಂದೂ ಉಲ್ಲೇಖಿಸಲಾಗುತ್ತದೆ.[೧]
3ಡಿ ಅಲ್ಟ್ರಾಸೌಂಡ್ ತಯಾರಾಗುವ ರೀತಿ
[ಬದಲಾಯಿಸಿ]3D ಅಲ್ಟ್ರಾಸೌಂಡ್ ಪರಿಮಾಣ ತಯಾರಾಗುವಾಗ ಅಲ್ಟ್ರಾಸೌಂಡ್ ಡೇಟಾವನ್ನು ೪ ಸಾಮಾನ್ಯ ರೀತಿಯಲ್ಲಿ ಸಂಗ್ರಹಿಸಬಹುದು:
- ಫ಼್ರೀಹ್ಯಾಂಡ್, ಕೂಲಂಕುಷ ತನಿಖೆಯನ್ನು ಮಾಡಿ, ಅಲ್ಟ್ರಾಸೌಂಡ್ ಸರಣಿ ಚಿತ್ರಗಳನ್ನು ಸೆರೆಹಿಡಿಯುವುದು ಮತ್ತು ಪ್ರತೀ ವಿಭಾಗವನ್ನು ಸಂಜ್ಞಾಪರಿವರ್ತಕ ದೃಷ್ಟಿಕೋನವನ್ನು ದಾಖಲಿಸುವುದು.
- ಯಾಂತ್ರಿಕವಾಗಿ, ಪ್ರೋಬ್ ನೊಳಗೆ ಮೋಟಾರ್ ಸಹಾಯದಿಂದ ಆಂತರಿಕ ರೇಖಾತ್ಮಕ ಪ್ರೋಬ್ ಟಿಲ್ಟು ರಚಿಸುವುದು.
- ಎಂಡೋಪ್ರೊಬ್ ಅನ್ನು ಬಳಸಿ, ಪ್ರೋಬ್ ಸೇರಿಸುವ ಮೂಲಕ ಶಬ್ದವನ್ನು ಉತ್ಪಾದಿಸಿ, ನಂತರ ಸಂಜ್ಞಾಪರಿವರ್ತಕವನ್ನು ನಿಯಂತ್ರಿತ ರೀತಿಯಲ್ಲಿತೆಗೆದುಹಾಕುತ್ತದೆ.
- ನಾಲ್ಕನೇ ತಂತ್ರಜ್ಞಾನವು ಮ್ಯಾಟ್ರಿಕ್ಸ್ ವ್ಯೂಹ ಸಂಜ್ಞಾಪರಿವರ್ತಕವಾಗಿದ್ದು, ಬೀಮ್ ಸ್ಟೀರಿಂಗ್ ನ್ನು ಬಳಸಿ ಪಿರಮಿಡ್ ಆಕಾರದ ಪರಿಮಾಣದ ಉದ್ದಕ್ಕೂ ಮಾದರಿ ಬಿಂದುಗಳನ್ನು ನೀಡುತ್ತದೆ.
ಅಪಾಯಗಳು
[ಬದಲಾಯಿಸಿ]ಅಲ್ಟ್ರಾಸೌಂಡ್ ನ ಸಾಮಾನ್ಯ ಅಪಾಯಗಳು 3D ಅಲ್ಟ್ರಾಸೌಂಡ್ ಗೂ ಅನ್ವಯಿಸುತ್ತದೆ. ಅಲ್ಟ್ರಾಸೌಂಡ್ ನ್ನು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಹಾಗೆಯೇ, ಇತರೆ ಚಿತ್ರಣ ಮಾದರಿಗಳು ಬಳಸುವ ವಿಕಿರಣಶೀಲ ಬಣ್ಣ ಅಥವಾ ಅಯಾನೀಕರಿಸುವ ವಿಕಿರಣ, ಉದಾಹರಣೆಗೆ, ಅಲ್ಟ್ರಾಸೌಂಡ್ ಸಂಜ್ಞಾಪರಿವರ್ತಕ ದೇಹದೊಳಗೆ ಕಳುಹಿಸುವ ಅಧಿಕ ವರ್ತನದ ಶಬ್ದ ಮತ್ತು ಅದರ ಪ್ರತಿಧ್ವನಿ ಕೇಳಿಸುವುದು ಕೂಡಾ ಸುರಕ್ಷಿತ.[೨]
ಸಂಕ್ಷಿಪ್ತವಾಗಿ ಹೇಳುವುದಾದರೆ, ಅಲ್ಟ್ರಾಸೌಂಡ್ ಗೆ ಸಂಬಂಧಿಸಿದ ಪ್ರಾಥಮಿಕ ಅಪಾಯಗಳೆಂದರೆ ಅಂಗಾಂಶದ ಸಂಭವನೀಯ ತಾಪನ ಮತ್ತು ಗುಳ್ಳೆಕಟ್ಟುವಿಕೆ. ಅಂಗಾಂಶ ತಾಪನ ಮತ್ತು ಗುಳ್ಳೆಕಟ್ಟುವಿಕೆಗಳನ್ನು ಅಳತೆ ಮಾಡುವ ವಿಧಾನಗಳು ಉಷ್ಣ ಸೂಚ್ಯಂಕ (TI) ಮತ್ತು ಯಾಂತ್ರಿಕ ಸೂಚ್ಯಂಕ (MI) ಎಂಬ ಮಾನದಂಡಗಳ ಮೂಲಕ ಅಳೆಯಲಾಗುತ್ತದೆ. ಎಫ಼್.ಡಿ.ಎ. (FDA) ಗರಿಷ್ಠ ಟಿಐ(TI) ಮತ್ತು ಎಂಐ(MI) ಗಾಗಿ ಅತ್ಯಂತ ಸುರಕ್ಷಿತ ಮೌಲ್ಯಗಳನ್ನು ವಿವರಿಸಿದ್ದರೂ, ಅನಗತ್ಯ ಅಲ್ಟ್ರಾಸೌಂಡ್ ಚಿತ್ರಣವನ್ನು ತಪ್ಪಿಸಲು ಶಿಫಾರಸು ಮಾಡಿದೆ.
ಅಳವಡಿಕೆ/ಉಪಯೋಗ
[ಬದಲಾಯಿಸಿ]ಪ್ರಸೂತಿ
[ಬದಲಾಯಿಸಿ]ಗರ್ಭಾಶಯದಲ್ಲಿ ಬೆಳೆಯುತ್ತಿರುವ ಶಿಶುಗಳ ಬೆಳವಣಿಗೆಯ ಭ್ರೂಣಗಳು ಯಾವಾಗಲೂ ವೇಗದ ಹೃದಯ ಬಡಿತದಲ್ಲಿ ಚಲನೆಯಲ್ಲಿರುವಾಗ ಪರೀಕ್ಷಿಸಲು ಕಷ್ಟವಾಗುತ್ತದೆ. ಆದ್ದರಿಂದ ಗರ್ಭಾಶಯವನ್ನು ಸ್ಕ್ಯಾನ್ ಮಾಡುವಾಗ, ರೋಗಿಗಳು ತಮ್ಮ ಉಸಿರಾಟವನ್ನು ಸ್ತಿರವಾಗಿ ಇಟ್ಟುಕೊಳ್ಳಬೇಕಾಗಿಲ್ಲ,ಇದರಿಂದ ನಿಜವಾದ ಚಿತ್ರವನ್ನು ಸೆರೆಹಿಡಿಯಬಹುದು. ಈಗ 3D ಯು.ಎಸ್. ನೊಂದಿಗೆ ವೈದ್ಯರು ಭ್ರೂಣದ ಚಲನೆಯನ್ನು ಕ್ಷಣಾರ್ಧದಲ್ಲಿ ಪತ್ತೆಹಚ್ಚಬಹುದು ಮತ್ತು ತಕ್ಷಣವೇ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬಹುದು. ಭ್ರೂಣದ ಸ್ಥಿತಿಯನ್ನು ಪರಿಶೀಲಿಸುವುದರ ಜೊತೆಗೆ, ಗರ್ಭಾಶಯದಲ್ಲಿನ ಸಮಸ್ಯೆಗಳು ಮತ್ತು ಯಾವುದೇ ಅಸಹಜ ನಡವಳಿಕೆಗಳನ್ನು ಉದಾಹರಣೆಗೆ ದ್ರವ ಸಂಗ್ರಹಣೆ ಅಥವಾ ಯಾವುದೇ ಬೆನ್ನುಮೂಳೆಯ ವಕ್ರತೆಯ ಸಮಸ್ಯೆಯನ್ನೂ ಕಂಡುಹಿಡಿಯಬಹುದು. 3D ಯುಎಸ್ ಮತ್ತು 3D, ಭ್ರೂಣದ ಹೃದಯ ಬಡಿತವನ್ನು ತೋರಿಸುವುದರಿಂದ, ಮಗುವಿನ ಬೆಳವಣಿಗೆಯನ್ನು ತಿಳಿಯಲು ವೈದ್ಯರಿಗೆ ಅನುವು ಮಾಡಿಕೊಡುತ್ತದೆ.[೩]
ಹೃದಯವಿಜ್ಞಾನ
[ಬದಲಾಯಿಸಿ]ಹೃದಯದ ಸಂಬಧೀ ಸಮಸ್ಯೆಗಳನ್ನು ಪತ್ತೆಹಚ್ಚುವಲ್ಲಿ, ಸ್ಕ್ಯಾನಿಂಗ್ ಮತ್ತು ಚಿಕಿತ್ಸೆಗಾಗಿ 3D ಅಲ್ಟ್ರಾಸೌಂಡ್ ನ ಬಳಕೆ ಅತ್ಯುತ್ತಮ ಪ್ರಗತಿಯನ್ನು ಸಾಧಿಸಿದೆ. 3D ಅಲ್ಟ್ರಾಸೌಂಡ್ ತಂತ್ರಜ್ಞಾನವು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯನ್ನು ದೃಶ್ಯೀಕರಿಸಲು ಬಳಸಿದಾಗ, ಅದನ್ನು 3D ಎಕೋಕಾರ್ಡಿಯೋಗ್ರಫಿ ಎಂದು ಕರೆಯಲಾಗುತ್ತದೆ. ಅಲ್ಟ್ರಾಸೌಂಡ್ ನ ಇತರ ತಂತ್ರಜ್ಞಾನಗಳ ಸಂಯೋಜನೆಯೊಂದಿಗೆ, ಹೃದಯ ಚಕ್ರದ ಸಮಯದಲ್ಲಿ ಸಂಭವಿಸುವ ಚೇಂಬರ್ ವಾಲ್ಯೂಮ್ ನಂತಹ ಪರಿಮಾಣಾತ್ಮಕ ಕ್ರಮಗಳನ್ನು ಪತ್ತೆಹಚ್ಚಲು ಈಗ ಸಾಧ್ಯವಾಗುತ್ತದೆ. ಅಲ್ಲದೆ, ರಕ್ತದ ಹರಿವು, ಕುಗ್ಗುವಿಕೆಗಳು ಮತ್ತು ವಿಸ್ತರಣೆಗಳ ವೇಗವನ್ನು ಪತ್ತೆಹಚ್ಚುವಂತಹ ಇತರ ಉಪಯುಕ್ತ ಮಾಹಿತಿಯನ್ನು ಇದು ಒದಗಿಸುತ್ತದೆ. 3D ಎಕೋಕಾರ್ಡಿಯೋಗ್ರಫಿ ವಿಧಾನದೊಂದಿಗೆ ವೈದ್ಯರು ಈಗ ಸುಲಭವಾಗಿ ಅಪಧಮನಿಯ ಕಾಯಿಲೆಗಳನ್ನು ಪತ್ತೆಹಚ್ಚಬಹುದು ಮತ್ತು ವಿವಿಧ ದೋಷಗಳನ್ನು ಸುಲಭವಾಗಿ ಪರಿಶೀಲಿಸಬಹುದು. ಪ್ರತಿಧ್ವನಿ ಅನ್ವಯಕಗಳು ಹೃದಯದ ರಚನೆಯ ನೈಜ-ಸಮಯದ ಚಿತ್ರವನ್ನು ನೀಡಲು ಸಹಾಯ ಮಾಡುತ್ತದೆ.[೪]
ಶಸ್ತ್ರಚಿಕಿತ್ಸೆಗೆ ಮಾರ್ಗದರ್ಶನವಾಗಿ
[ಬದಲಾಯಿಸಿ]2D ಯುಎಸ್ ನಿಂದ ಶಸ್ತ್ರಚಿಕಿತ್ಸೆಗಳಲ್ಲಿ ಉಪಯುಕ್ತ ಅಂಗಗಳು ಮತ್ತು ಅಂಗಾಂಶಗಳ ನಿರ್ದಿಷ್ಟ ಸ್ಥಾನವು ನಿರ್ದಿಷ್ಟವಾಗಿ ನೋಡಲು ಆಗುತ್ತಿರಲಿಲ್ಲ. ಹಾಗಾಗಿ, 3D ಯುಎಸ್ ನ ಆಗಮನದೊಂದಿಗೆ, ಇಮೇಜಿಂಗ್ ತಂತ್ರವು ಅಂಗಾಂಶಗಳು ಮತ್ತು ಅಂಗಗಳ ನೈಜ-ಸಮಯದ ಚಿತ್ರವನ್ನು ಪಡೆಯುವಲ್ಲಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸಂಪೂರ್ಣ ಸ್ಕಾನ್ ದೃಶ್ಯೀಕರಿಸುವಲ್ಲಿ ಶಸ್ತ್ರಚಿಕಿತ್ಸಕರಿಗೆ ಅನುವು ಮಾಡಿಕೊಡುತ್ತದೆ. ಇದಲ್ಲದೆ, 3D ಯುಎಸ್ ಹೃದಯ ಕಸಿ ಮಾಡುವಿಕೆ ಮತ್ತು ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಮಾಡುವಾಗ ಅದರ ಪರಿಭ್ರಮಣದ ದೃಶ್ಯೀಕರಣವನ್ನು ನೀಡುತ್ತಾ ಶಸ್ತ್ರಚಿಕಿತ್ಸೆಗೆ ಉಪಯುಕ್ತವಾಗಿದೆ. ಆವರ್ತಕ ಸ್ಕ್ಯಾನಿಂಗ್, ಸ್ಲೈಸ್ ಪ್ರೊಜೆಕ್ಷನ್, ಸಮಗ್ರ ಶ್ರೇಣಿಯ ಸಂಜ್ಞಾಪರಿವರ್ತಕದ ಬಳಕೆಯನ್ನು ಈ ತಂತ್ರಜ್ಞಾನವು ವಿಕಸನಗೊಳಿಸಿದೆ. ಇದು ಶಸ್ತ್ರಚಿಕಿತ್ಸಕರಿಗೆ ಆಘಾತಕಾರಿ ಕ್ಯಾನ್ಸರ್ ರೋಗಿಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ವಿವಿಧ ರೀತಿಯ ಗೆಡ್ಡೆಗಳ ಪತ್ತೆಹಚ್ಚುವಿಕೆ, ಅವುಗಳ ದೋಷ ಮತ್ತು ಕಾರಣವನ್ನು ಅಧ್ಯಯನ ಮಾಡಲು ಮತ್ತು ಚಿಕಿತ್ಸೆ ನೀಡಲು 3D ಯು.ಎಸ್. ವೈದ್ಯರಿಗೆ ಸಹಾಯಕವಾಗಿದೆ.
ರಕ್ತನಾಳಗಳ ಚಿತ್ರಣ
[ಬದಲಾಯಿಸಿ]ರಕ್ತನಾಳಗಳು ಮತ್ತು ಅಪಧಮನಿಗಳ ಚಲನೆ ಅವುಗಳು ಹರಡಿರುವ ರೀತಿಯಿಂದಾಗಿ ಟ್ರ್ಯಾಕ್ ಮಾಡುವುದು ಮತ್ತು ನೈಜ-ಸಮಯದ ಚಿತ್ರವನ್ನು ಸೆರೆಹಿಡಿಯುವುದು ಸುಲಭವಲ್ಲ. ರೋಗದ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಗೆ 3D ಯುಎಸ್ ಬಳಸಲಾಗುತ್ತದೆ ಮತ್ತು ರಕ್ತ ಕಣಗಳು, ರಕ್ತನಾಳಗಳು ಮತ್ತು ಅಪಧಮನಿಗಳ ಚಲನಶೀಲ ಚಲನೆಯನ್ನು ಪತ್ತೆಹಚ್ಚಲು ಕೂಡಾ ಈಗ ಸಾಧ್ಯವಿದೆ. ಇದರ ಜೊತೆಗೆ, ವಿವಿಧ ರೋಗಗಳ ಪತ್ತೆಹಚ್ಚುವಿಕೆಗೆ ಸಂಭಂದಿಸಿದಂತೆ, ಡಯಾಮೀಟರ್ ನ ಲೆಕ್ಕಹಾಕುವುದು, ಅಪಧಮನಿಯ ನಡುವಿನ ಗೋಡೆಯನ್ನು ಮ್ಯಾಗ್ನೆಟಿಕ್ ಟ್ರ್ಯಾಕರ್ ನೊಂದಿಗೆ ನಿಖರವಾದ ಸ್ಥಾನವನ್ನು ಪತ್ತೆಹಚ್ಚುವಿಕೆಗೂ ಸಹಾಯ ಮಾಡುತ್ತದೆ. ಆದ್ದರಿಂದ ಈ ತಂತ್ರಜ್ಞಾನವು ಇಮೇಜಿಂಗ್ ನೆರವು ಮತ್ತು ನಾಳಗಳ ಸ್ಥಾನವನ್ನು ಪತ್ತೆಹಚ್ಚಲು ಸಹಾಯ ಮಾಡುವ ಸಂವೇದಕವನ್ನು ಸಹ ಹೊಂದಿದೆ.
ಸೂಕ್ಷ್ಮ ಅರಿವಳಿಕೆ
[ಬದಲಾಯಿಸಿ]3D ಅಲ್ಟ್ರಾಸೌಂಡ್ ನ್ನು ಬಾಹ್ಯ ನರಮಂಡಲದ ತಡೆಗಟ್ಟುವ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಅಂಗರಚನಾಶಾಸ್ತ್ರವನ್ನು ಮತ್ತು ಸ್ಥಳೀಯ ಅರಿವಳಿಕೆ ಹರಡುವಿಕೆಯನ್ನು ನರದ ಸುತ್ತಲೂ ಪತ್ತೆಹಚ್ಚಲು ಬಳಸಲಾಗುತ್ತದೆ. ಬಾಹ್ಯ ನರ ತಡೆಗಟ್ಟುವಿಕೆಯ ನೋವಿನ ಸಂಕೇತಗಳನ್ನು ಗಾಯದ ಸ್ಥಳದಿಂದ ಮೆದುಳಿಗೆ ಕಳುಹಿಸುವಾಗ ಆಳವಾದ ನಿದ್ರೆ ಹೋಗದಂತೆ ತಡೆಗಟ್ಟುತ್ತದೆ, ಇದು ಹೊರರೋಗಿ ಮೂಳೆ ವಿಧಾನಗಳಿಗೆ ವಿಶೇಷವಾಗಿ ಉಪಯುಕ್ತವಾಗಿದೆ. ರಿಯಲ್-ಟೈಮ್ 3D ಅಲ್ಟ್ರಾಸೌಂಡ್ ಸ್ನಾಯುಗಳು, ನರಗಳು ಮತ್ತು ನಾಳಗಳನ್ನು ಸ್ಪಷ್ಟವಾಗಿ ಗುರುತಿಸಲು ಸಹಕಾರಿಯಾಗಿದೆ. 3D ಅಲ್ಟ್ರಾಸೌಂಡ್ ನ ಮುಖಾಂತರ ಚಿತ್ರದ ಸಮತಲವನ್ನು ನೋಡದೆ ಸೂಜಿ ವೀಕ್ಷಿಸಲು ಸಾಧ್ಯವಾಗುತ್ತದೆ, ಇದು 2D ಅಲ್ಟ್ರಾಸೌಂಡ್ ಗಿಂತಲೂ ಗಣನೀಯ ಸುಧಾರಣೆಯಾಗಿದೆ. ಅಂಗಾಂಶದ ಪರಿಮಾಣದೊಳಗೆ ಅಂಗರಚನಾ ರಚನೆಗಳನ್ನು ನೋಡಲು ನೈಜ ಸಮಯದಲ್ಲಿ ಚಿತ್ರವನ್ನು ತಿರುಗಿಸಬಹುದು ಅಥವಾ ವಿಂಗಡಿಸಬಹುದು. ಮೇಯೋ ಕ್ಲಿನಿಕ್ ನ ವೈದ್ಯರು ಭುಜ, ಮೊಣಕಾಲು, ಮತ್ತು ಪಾದದ ಶಸ್ತ್ರಚಿಕಿತ್ಸೆಗೆ ಬಾಹ್ಯ ನರಗಳ ಬ್ಲಾಕ್ ಗಳನ್ನು ಮಾರ್ಗದರ್ಶನ ಮಾಡಲು ನೈಜ ಸಮಯ 3D ಅಲ್ಟ್ರಾಸೌಂಡ್ ನ್ನು ಬಳಸಿಕೊಂಡು ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ https://ijme.in/articles/4d-ultrasound-imaging-ethically-justifiable-in-india/?galley=print
- ↑ https://www.udayavani.com/english/news/health-lifestyle/82162/ultrasound-can-accelerate-skin-healing-study
- ↑ https://www.ncbi.nlm.nih.gov/pmc/articles/PMC4464566/
- ↑ https://www.dicardiology.com/article/3d4d-ultrasound-offers-real-time-advantages