ವಿಷಯಕ್ಕೆ ಹೋಗು

ಕತ್ತರಿಸುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕತ್ತರಿಸುವಿಕೆ ಎಂದರೆ ತೀವ್ರವಾಗಿ ನಿರ್ದೇಶಿತ ಬಲವನ್ನು ಹಾಕುವ ಮೂಲಕ ಒಂದು ಭೌತಿಕ ವಸ್ತುವನ್ನು ಎರಡು ಅಥವಾ ಹೆಚ್ಚು ಭಾಗಗಳಾಗಿ ಪ್ರತ್ಯೇಕಿಸುವುದು ಅಥವಾ ತೆರೆಯುವುದು. ಕತ್ತರಿಸಲು ಸಾಮಾನ್ಯವಾಗಿ ಬಳಸಲಾದ ಉಪಕರಣಗಳೆಂದರೆ ಚಾಕು ಮತ್ತು ಗರಗಸ, ಅಥವಾ ವೈದ್ಯಶಾಸ್ತ್ರ ಮತ್ತು ವಿಜ್ಞಾನದಲ್ಲಿ ಕಿರುಚೂರಿ ಮತ್ತು ಸೂಕ್ಷ್ಮಛೇದಕ. ಆದರೆ, ಸಾಕಷ್ಟು ಚೂಪಾಗಿರುವ ಯಾವುದೇ ವಸ್ತುವು ಕತ್ತರಿಸಲಾಗುತ್ತಿರುವ ವಸ್ತುವಿಗಿಂತ ಸಾಕಷ್ಟು ಹೆಚ್ಚು ಗಡಸುತನವನ್ನು ಹೊಂದಿದ್ದರೆ, ಮತ್ತು ಅದನ್ನು ಸಾಕಷ್ಟು ಬಲದಿಂದ ಅನ್ವಯಿಸಿದರೆ ಕತ್ತಿರಿಸುವಲ್ಲಿ ಸಮರ್ಥವಾಗಿದೆ. ಸಾಕಷ್ಟು ಬಲವನ್ನು ಅನ್ವಯಿಸಿದಾಗ ವಸ್ತುಗಳನ್ನು ಕತ್ತರಿಸಲು ದ್ರವಗಳನ್ನು ಕೂಡ ಬಳಸಬಹುದು.

ಕತ್ತರಿಸುವಿಕೆಯು ಒಂದು ಸಂಕೋಚಕ ಹಾಗೂ ಛೇದಕ ವಿದ್ಯಮಾನವಾಗಿದೆ, ಮತ್ತು ಕತ್ತರಿಸುವ ಉಪಕರಣದಿಂದ ಉತ್ಪತ್ತಿಯಾದ ಒಟ್ಟು ಒತ್ತಡವು ಕತ್ತರಿಸಲಾಗುತ್ತಿರುವ ವಸ್ತುವಿನ ಮೂಲದ್ರವ್ಯದ ಗರಿಷ್ಠ ಬಲವನ್ನು ಮೀರಿದಾಗ ಮಾತ್ರ ಉಂಟಾಗುತ್ತದೆ. ಕತ್ತರಿಸುವ ಉಪಕರಣದಿಂದ ಉತ್ಪತ್ತಿಯಾದ ಒತ್ತಡವು ಅದನ್ನು ಎಷ್ಟು ಬಲದಿಂದ ಅನ್ವಯಿಸಲಾಗುತ್ತದೊ ಅದಕ್ಕೆ ನೇರ ಅನುಪಾತದಲ್ಲಿರುತ್ತದೆ, ಮತ್ತು ಸಂಪರ್ಕ ವಿಸ್ತೀರ್ಣಕ್ಕೆ ವಿಲೋಮ ಅನುಪಾತದಲ್ಲಿರುತ್ತದೆ.[] ಹಾಗಾಗಿ, ಪ್ರದೇಶವು ಸಣ್ಣದಿದ್ದಷ್ಟು (ಅಂದರೆ ಕತ್ತರಿಸುವ ಉಪಕರಣವು ಚೂಪಾಗಿದ್ದಷ್ಟು), ಯಾವುದನ್ನಾದರೂ ಕತ್ತರಿಸಲು ಕಡಿಮೆ ಬಲ ಬೇಕಾಗುತ್ತದೆ. ಮೃದು ವಸ್ತುಗಳನ್ನು ಕತ್ತರಿಸಲು ಕತ್ತರಿಸುವ ಅಂಚುಗಳು ಹೆಚ್ಚು ತೆಳುವಾಗಿರುತ್ತವೆ ಮತ್ತು ಹೆಚ್ಚು ಗಟ್ಟಿ ವಸ್ತುಗಳನ್ನು ಕತ್ತರಿಸಲು ಹೆಚ್ಚು ದಪ್ಪವಾಗಿರುತ್ತವೆ ಎಂದು ಸಾಮಾನ್ಯವಾಗಿ ಕಂಡುಬರುತ್ತದೆ. ಅಡುಗೆ ಚಾಕುದಿಂದ ಸೀಳುಕದಿಂದ ಕೊಡಲಿವರೆಗೆ ಈ ಶ್ರೇಣಿ ಕಾಣಬರುತ್ತದೆ, ಮತ್ತು ತೆಳು ಅಲಗಿನ ಸುಲಭ ಕತ್ತರಿಸುವ ಕ್ರಿಯೆ ಹಾಗೂ ಹೆಚ್ಚು ದಪ್ಪನೆಯ ಅಲಗಿನ ಬಲ ಮತ್ತು ಅಂಚಿನ ಬಾಳಿಕೆಯ ನಡುವಿನ ಸಮತೋಲನವಾಗಿರುತ್ತದೆ.

ಕತ್ತರಿಸುವಿಕೆಯು ಇತಿಹಾಸದಾದ್ಯಂತ ತಯಾರಿಕೆಯ ಕೇಂದ್ರಭಾಗದಲ್ಲಿದೆ. ಲೋಹಗಳಿಗೆ ಅನೇಕ ವಿಧಾನಗಳನ್ನು ಬಳಸಲಾಗುತ್ತದೆ ಮತ್ತು ಇವನ್ನು ಬಳಸಲಾದ ಭೌತಿಕ ವಿದ್ಯಮಾನದ ಪ್ರಕಾರ ವರ್ಗೀಕರಿಸಬಹುದು. ಪ್ರತಿ ವಿಧಾನವು ನಿಖರತೆ, ವೆಚ್ಚ ಮತ್ತು ವಸ್ತುವಿನ ಮೇಲಿನ ಪರಿಣಾಮದಲ್ಲಿ ತನ್ನ ಮಿತಿಗಳನ್ನು ಹೊಂದಿದೆ. ಉದಾಹರಣೆಗೆ, ಶಾಖವು ಉಷ್ಣ ಸಂಸ್ಕರಿತ ಮಿಶ್ರಲೋಹಗಳ ಗುಣಮಟ್ಟವನ್ನು ಹಾನಿಗೊಳಿಸಬಹುದು, ಮತ್ತು ಲೇಸರ್ ಕತ್ತರಿಸುವಿಕೆಯು ಅಲ್ಯುಮಿನಿಯಂ ನಂತಹ ಬಹಳ ಪ್ರತಿಫಲಿಸುವ ವಸ್ತುಗಳಿಗೆ ಕಡಿಮೆ ಸೂಕ್ತವಾಗಿದೆ. ಶೀಟ್ ಮೆಟಲ್‍ನ್ನು ಲೇಸರ್‌ನಿಂದ ಕತ್ತರಿಸುವುದು ಚಪ್ಪಟೆ ಭಾಗಗಳನ್ನು ಉತ್ಪಾದಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Basic Studies Of Stress And Strain" (PDF). www.freestudy.co.uk. Archived from the original (PDF) on 13 December 2016. Retrieved 5 February 2016. {{cite web}}: Unknown parameter |deadurl= ignored (help)