ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ (ಚಲನಚಿತ್ರ)
ಗೋಚರ
Hottegagi Genu Battegagi | |
---|---|
ಚಿತ್ರ:Hottegagi Genu Battegagi.jpg | |
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ | |
ನಿರ್ದೇಶನ | ನರೇಂದ್ರ ಬಾಬು |
ನಿರ್ಮಾಪಕ | ಸುದರ್ಶನ್ ಜಿ. ರಾಮ ಮೂರ್ತಿ ಎಚ್.ಆರ್. ಹರೀಶ್ ಶೇರಿಗಾರ್ |
ಚಿತ್ರಕಥೆ | ನರೇಂದ್ರ ಬಾಬು |
ಕಥೆ | ನರೇಂದ್ರ ಬಾಬು |
ಪಾತ್ರವರ್ಗ | ಅನಂತ್ ನಾಗ್ ರಾಧಿಕಾ ಚೇತನ್ ಗೀತಾಂಜಲಿ ರೈ |
ಸಂಗೀತ | ರಾಮಚಂದ್ರ ಹಡಪದ್ |
ಛಾಯಾಗ್ರಹಣ | ಪಿ.ಕೆ. ಎಚ್. ದಾಸ್ |
ಸಂಕಲನ | ಗುಣ |
ಸ್ಟುಡಿಯೋ | ACME ಮೂವೀಸ್ ಇಂಟರ್ ನ್ಯಾಷನಲ್ |
ಬಿಡುಗಡೆಯಾಗಿದ್ದು | ೨೫ ಮೇ ೨೦೧೮ |
ದೇಶ | ಭಾರತ |
ಭಾಷೆ | Kannada |
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ೨೦೧೮ ರ ಭಾರತೀಯ ಕನ್ನಡ ಭಾಷೆಯ ಚಿತ್ರ. ನಾಗೇಂದ್ರ ಬಾಬು ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ.[೧] ಸುದರ್ಶನ್. ಜಿ, ರಾಮಮೂರ್ತಿ. ಎಚ್. ಆರ್ ಮತ್ತು ಹರೀಶ್ ಶೇರಿಗಾರ್ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ರಾಮಚಂದ್ರ ಹಡಪದ್ ಅವರು ಸಂಗೀತ ನೀಡಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಅನಂತ್ ನಾಗ್, ರಾಧಿಕಾ ಚೇತನ್ ಮತ್ತು ಗೀತಾಂಜಲಿ ರೈ ಇದ್ದಾರೆ. ಪಿ. ಕೆ. ಏಚ್. ದಾಸ್ ಛಾಯಾಗ್ರಾಹಕರಾಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.[೨]
ಪಾತ್ರವರ್ಗ
[ಬದಲಾಯಿಸಿ]- ಶ್ಯಾಮ್ ಪ್ರಸಾದ್ ಆಗಿ ಅನಂತ್ ನಾಗ್
- ಶ್ರಾವ್ಯ ಆಗಿ ರಾಧಿಕಾ ಚೇತನ್
- ಗೀತಾಂಜಲಿ ರೈ
- ಹರೀಶ್ ಶೇರಿಗಾರ್
ನಿರ್ಮಾಣ
[ಬದಲಾಯಿಸಿ]ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬುದು ಕನ್ನಡದ ಪ್ರಸಿದ್ದ ಗಾದೆ ಮಾತು. ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಅನಂತ್ ನಾಗ್ ಅವರು ಈ ಹೆಸರನ್ನು ಇಡಲು ಸೂಚಿಸಿದ್ದರು. ಈ ಚಿತ್ರಕ್ಕೆ ನಿರ್ದೇಶಕರ ಪ್ರಕಾರ ಕಲ್ಲು ಸಕ್ಕರೆ ಕೊಳ್ಳಿರೋ ಎಂಬ ಹೆಸರು ಇಡಲಾಗಿತ್ತು.
ಉಲ್ಲೇಖಗಳು
[ಬದಲಾಯಿಸಿ]